ಕೊರಟಗೆರೆ:- ಶ್ರೀವೀರನಾಗಮ್ಮ ದೇವಾಲಯದ ಗರ್ಭಗುಡಿ ಸೇರಿ ೪ಬಾಗಿಲನ್ನು ಗ್ಯಾಸ್ ಕಟರ್ನಿಂದ ಕಟ್ಮಾಡಿ 1ಕೋಟಿಗೂ ಅಧಿಕ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಜೊತೆ ಸಿಸಿಟಿವಿಯ ಡಿವಿಆರ್ ಹೈಟೇಕ್ ಕಳ್ಳತನ ಮಾಡಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ವಡ್ಡಗೆರೆಯ ಶ್ರೀವೀರನಾಗಮ್ಮ ದೇವಾಲಯದ ವಿದ್ಯುತ್ಸಂಪರ್ಕ ಕಡಿತಗೊಳಿಸಿ ಗೇಟ್ಬಾಗಿಲು, ದೇವಾಲಯದ ಕಬ್ಬಿಣ-ಮರದ ಬಾಗಿಲು ಮತ್ತು ಗರ್ಭಗುಡಿಯ ಭದ್ರತಾ ಬಾಗಿಲನ್ನು ಗ್ಯಾಸ್ಕಟರ್ ನಿಂದ ಕಟ್ಮಾಡಿ ಒಳಪ್ರವೇಶಿಸಿ 35ಕೆಜಿ ಬೆಳ್ಳಿ ಮತ್ತು 10ಗ್ರಾಂ ಬಂಗಾರ ಸೇರಿ ಕೋಟಿಗೂ ಅಧಿಕ ಮೌಲ್ಯದ ಬಂಗಾರ ದೊಚಿದ್ದಾರೆ.

ರಾತ್ರಿಕಳ್ಳರ ಹೈಟೇಕ್ ಕೈಚಳಕ..
ಇತಿಹಾಸ ಪ್ರಸಿದ್ದವಾದ ವಡ್ಡಗೆರೆಯ ವೀರನಾಗಮ್ಮ ದೇವಾಲಯದ ಕಳ್ಳತನ ಇಡೀ ಕೊರಟಗೆರೆ ತಾಲೂಕನ್ನೇ ಬೆಚ್ಚಿಬಿಳಿಸಿದೆ. ಗ್ಯಾಸ್ಕಟರ್ನಿಂದ ಬಾಗಿಲುಗಳ ಕಟ್ ಮಾಡಿ ಸಿಸಿಟಿವಿ ಮತ್ತು ಡಿವಿಆರ್ ಸಮೇತ ಕಳ್ಳತನದ ಜೊತೆ ಸಾಕ್ಷಿಯೇ ಸೀಗದಂತೆ ಹೈಟೇಕ್ ಕಳ್ಳತನವಾಗಿದೆ. ಕೊರಟಗೆರೆ ಪೊಲೀಸರಿಗೆ ಈ ಕಳ್ಳತನ ಸವಾಲಾಗಿದ್ದು ಪತ್ತೇಗೆ ಈಗಾಗಲೇ ನಾಲ್ಕೈದು ತಂಡಗಳು ರಚನೆಯಾಗಿವೆ ಎನ್ನಲಾಗಿದೆ.
ವಡ್ಡಗೆರೆಗೆ ತುಮಕೂರು ಎಎಸ್ಪಿ ಪುರುಷೋತ್ತಮ್, ಮಧುಗಿರಿ ಡಿವೈಎಸ್ಪಿ ಮಂಜುನಾಥ, ಸಿಪಿಐ ಅನಿಲ್, ತಹಶೀಲ್ದಾರ್ ಮಂಜುನಾಥ ಸೇರಿ ಶ್ವಾನದಳ, ಬೆರಳಚ್ಚು ತಜ್ಞರತಂಡ, ಮುಜರಾಯಿ ಮತ್ತು ಪೊಲೀಸರ ತಂಡ ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3ಸಲ ಕಳ್ಳತನ ಭದ್ರತೆ ಕೊರತೆ..
ವಡ್ಡಗೆರೆಯ ಶ್ರೀವೀರನಾಗಮ್ಮ ದೇವಾಲಯದಲ್ಲಿ ಕಳೆದ 15ವರ್ಷದ ಹಿಂದೆ ಎರಡು ಸಲ ಹುಂಡಿ ಕಳ್ಳತನ ಆಗಿತ್ತು. ಇದಾದ ನಂತರ ಈಗ ದೇವಾಲಯದ 4ಬಾಗಿಲು ಕಟ್ ಮಾಡಿ ದೇವಿಯ ಮೂಲ ವಿಗ್ರಹಬಿಟ್ಟು ಉಳಿದೇಲ್ಲ ಕಳ್ಳತನ ಮಾಡಲಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಕ್ಕೆ ರಾತ್ರಿ ಕಾವಲುಗಾರನ ಜೊತೆ ಭದ್ರತೆಯು ಮರೀಚಿಕೆಯಾಗಿದೆ.
ತುಮಕೂರು ಜಿಲ್ಲೆಯಲ್ಲಿ 2ಸಾವಿರಕ್ಕೂ ಅಧಿಕ ಬಿ.ಗ್ರೇಡ್ ದೇವಾಲಯಗಳಿದ್ದು ಯಾವುದಕ್ಕೂ ರಾತ್ರಿ ಕಾವಲುಗಾರ ಇಲ್ಲ. ಜಿಲ್ಲೆಯ ಅಧಿಕ ಕಡೆ ಕಳ್ಳತನ ಹೆಚ್ಚಾಗಿ ನಡೆತಿದೆ. ಅತಿತುರ್ತಾಗಿ ದೇವಾಲಯಗಳ ಕಮಿಟಿ ರಚನೆ ಮತ್ತು ಕಾವಲುಗಾರ ನೇಮಕ ಅತ್ಯವಶ್ಯಕ.
– ರಂಗರಾಜು. ಧಾರ್ಮಿಕ ದತ್ತಿ ಸದಸ್ಯ. ತುಮಕೂರು.
ವರದಿ- ಶ್ರೀನಿವಾಸ್ ಕೊರಟಗೆರೆ.
