ಮಧುಗಿರಿ :– ಇತಿಹಾಸ ಪ್ರಸಿದ್ಧ ಶಕ್ತಿ ದೇವತೆ ಮಧುಗಿರಿ ತಾಲೂಕಿನ ಸೋಂಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಏಳು ಮಂದಮ್ಮ ದೇವಿ ಮಹಾಲಕ್ಷ್ಮಿ ಮತ್ತು ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನ ವಿಮಾನ ಗೋಪುರ ಕಳಶ ಪ್ರತಿಷ್ಠಾಪನೆ ಮತ್ತು ಏಳು ಮಂದಮ್ಮ ದೇವಿ ಮಹಾಲಕ್ಷ್ಮಿ ನೂತನ ವಿಗ್ರಹ ಪ್ರತಿಷ್ಠಾಪನ ಮಹೋತ್ಸವವನ್ನ ಫೆಬ್ರವರಿ 12 ಗುರುವಾರ ಮತ್ತು 13ರ ಶುಕ್ರವಾರ ಹಮ್ಮಿಕೊಂಡಿದ್ದು 9 ಮಂದಿ ಬುಡ್ಕಟ್ಟಿನ ಅಣ್ಣತಮ್ಮಂದಿರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಧಾರ್ಮಿಕ ಕಾರ್ಯಕ್ರಮವನ್ನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.
ದೇವತಾ ಕಾರ್ಯ ಫೆಬ್ರವರಿ 12 ಗುರುವಾರ ಮುಂಜಾನೆಯಿಂದಲೇ ಪ್ರಾರಂಭಗೊಂಡು ದೇವಾಲಯ ಪ್ರವೇಶ ಗಂಗಾ ಪೂಜೆ ,ಗಣಪತಿ ಪ್ರಾರ್ಥನೆ, ಕಳಶ ಸ್ಥಾಪನೆ, ಪ್ರಧಾನ ಕಳಸ ಪೂಜೆ, ವಾಸ್ತು ಹೋಮ ರಕ್ಷಾ ಬಂಧನ ರಕ್ಷೋಘ್ನ ಹೋಮ, ಅಘೋರಾಸ್ತ್ರ ಹೊಮಗಳು, ಜಲಾದಿ ವಾಸ, ಕ್ಷೀರದಿವಾಸ ಮಹಾಮಂಗಳಾರತಿ 13ರ ಶುಕ್ರವಾರ ಬೆಳಗ್ಗೆ 8:00 ಯಿಂದ ಪ್ರಾರಂಭಗೊಂಡು ಕಳಶ ಪ್ರತಿಷ್ಠಾಪನೆ, ಹಲವು ಹೋಮಗಳು, ಏಳು ಮಂದಿಯಮ್ಮ ದೇವಿ ಮಹಾಲಕ್ಷ್ಮಿ ವಿಗ್ರಹ ಪ್ರತಿಷ್ಠಾಪನೆ, ವಿಮಾನ ಗೋಪುರ ಕಳಶ ಪ್ರತಿಷ್ಠಾಪನಾ ಮಹೋತ್ಸವ ಜರಗಲಿದೆ.
ಧಾರ್ಮಿಕ ಕಾರ್ಯದ ದಿವ್ಯ ಸಾನಿಧ್ಯವನ್ನು ಶ್ರೀ ಕಾಗಿನೆಲೆ ಕನಕ ಗುರು ಪೀಠ ಹೊಸದುರ್ಗ ಶಾಖಾಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಮಧುಗಿರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಹಕಾರ ಸಚಿವರಾದ ಕೆ ಎನ್ ರಾಜಣ್ಣ, ವಿಧಾನ ಪರಿಷತ್ ಸದಸ್ಯರಾದ ಕೆ ರಾಜೇಂದ್ರ, ಮಾಜಿ ಶಾಸಕರಾದ ಶ್ರೀ ವೀರಭದ್ರಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ ಎಸ್ ಸೀತಾರಾಮ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಾ. ಹುಲಿ ನಾಯ್ಕರ್, ಪ್ರಜಾಪ್ರಗತಿ ಸಂಪಾದಕರಾದ ಎಸ್ ನಾಗಣ್ಣ ಸೇರಿದಂತೆ ಹಲವು ಗಣ್ಯರು ದೇವತಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.
ವಿಜೃಂಭಣೆಯ ಆರತಿ ಮಹೋತ್ಸವ
ಶುಕ್ರವಾರ ಸಂಜೆ 4:30ಕ್ಕೆ ಹಾಲುಮತಸ್ಥ ವಂಶಸ್ಥರಾದ 9 ಮಂದಿ ಬುಡ್ಕಟ್ಟಿನ ಅಣ್ಣತಮ್ಮಂದಿರ ಕುಟುಂಬದಿಂದ ಆರತಿ ಸೇವೆಯನ್ನ ಹಮ್ಮಿಕೊಳ್ಳಲಾಗಿದೆ, ಅರತಿ ಸೇವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಣ್ಣ ತಮ್ಮಂದಿರ ಹೆಣ್ಣು ಮಕ್ಕಳು ಈ ಒಂದು ದೇವತಾ ಕಾರ್ಯದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.
– ಶ್ರೀನಿವಾಸ್ ಕೊರಟಗೆರೆ.
