ಹಾಸನ: ಹಾಸನ–ಕೊಡಗು ಜಿಲ್ಲೆಯ ಶನಿವಾರಸಂತೆ ಸಮೀಪದಲ್ಲಿರುವ ಶ್ರೀಕ್ಷೇತ್ರ ತಪೋವನ ಮನೆಹಳ್ಳಿ ಮಠದಲ್ಲಿ ಏಪ್ರಿಲ್ 4ರಂದು ಶನಿವಾರ ಬೆಳಿಗ್ಗೆ 6 ಗಂಟೆಗೆ ಇಷ್ಠಲಿಂಗ ಪೂಜೆ ಹಾಗೂ ಲಿಂಗಧಾರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗಸ್ವಾಮೀಜಿ ಅವರ ಸಾನಿಧ್ಯದಲ್ಲಿ ಹಾಗೂ ವಿಶ್ವ ವೀರಶೈವ–ಲಿಂಗಾಯಿತ ಮಹಾ ವೇದಿಕೆಯ ಸಂಸ್ಥಾಪಕ ಮತ್ತು ಅಧ್ಯಕ್ಷರು, ಅನೇಕಲ್ ತಾಲ್ಲೂಕಿನ ರಾಜಪುರ ಮಠದ ಶ್ರೀ ಸಿ. ನಟರಾಜು ಅವರ ಸಮ್ಮುಖದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ರಾಜ್ಯಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸುಮಾರು 108 ವಟುಗಳಿಗೆ ಲಿಂಗಧಾರಣೆ ಮತ್ತು ಇಷ್ಟಲಿಂಗ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಏಪ್ರಿಲ್ 3ರಂದು ಸಂಜೆ ಶ್ರೀಮಠದ ಸಭಾಂಗಣದಲ್ಲಿ ಆಗಮಿಸುವ ಭಕ್ತರು ತಂಗುವ ವ್ಯವಸ್ಥೆ ಮಾಡಲಾಗಿದೆ. ಲಿಂಗಧಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವವರು ಒಂದು ದಿನ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಹಾಸನ ಜಿಲ್ಲಾ ವಿಶ್ವ ವೀರಶೈವ–ಲಿಂಗಾಯಿತ ಮಹಾ ವೇದಿಕೆಯ ಅಧ್ಯಕ್ಷ ಹಳ್ಳಿಮೈಸೂರು ಪ್ರಕಾಶ್ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕ:
- ಮಂಜಣ್ಣ – 9448504485
- ಪುನೀತ್ – 9844181960
- ಕುಮಾರಸ್ವಾಮಿ – 9448863158
- ಪ್ರಕಾಶ್ – 9845557817
