ಚನ್ನರಾಯಪಟ್ಟಣ, ಮಾ.21: ತಾಲೂಕಿನ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಬರಗೂರು ಹ್ಯಾಂಡ್ ಪೋಸ್ಟ್ ನಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಸಮಸ್ತ ಮುಸ್ಲಿಂ ಬಾಂಧವರು ನಾಡಿನ ಜನರ ಒಳಿತು ಹಾಗೂ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆ ಆಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅರಸೀಕೆರೆ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಸೇರಿ ಶಾಂತಿ, ಸಮೃದ್ಧಿ, ಉತ್ತಮ ಮಳೆ ಮತ್ತು ಉತ್ತಮ ಬೆಳೆಗಾಗಿ ಪ್ರಾರ್ಥನೆ ನಡೆಸಿದರು. ಹಬ್ಬದ ಅಂಗವಾಗಿ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು.
ಪ್ರಾರ್ಥನೆಯ ಬಳಿಕ ಆಗಮಿಸಿದ್ದ ಭಕ್ತಾದಿಗಳಿಗೆ ಸಿಹಿ ತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು. ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಡಾ. ಶೇಕ್ ಉಮ್ಮರ್, ಮಸೀದಿ ಅಧ್ಯಕ್ಷ ಆಸಿಫ್ ಏಕ್ಬಾಲ್, ಬಿ.ಜೆ. ಶೇಕ್ ಇರ್ಫಾನ್, ಅಯೂಬ್, ಕಲೀಮ್ ಪಾಷಾ, ಅಬ್ದುಲ್ ಫಾರೂಕ್, ಗಪಾರ್ ಅಹಮದ್, ಜುಲ್ಕರ್, ನಯನ್, ಅಹಮದ್ ಪಾಷಾ, ಸುಹಿಲ್ ಪಾಷಾ, ಕರೀಂ ಪಾಷಾ, ಇಲಿಯಾಸ್ ಪಾಷಾ, ಯಾಸೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ
