ಚನ್ನರಾಯಪಟ್ಟಣ, ಮಾ.25: ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಲಾದ ಒಂದು ದಿನದ ಕಾರ್ಯಗಾರ ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಹುದ್ದೆಗಳ ಪ್ರಮುಖರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿ ಕಾರ್ಯಗಾರವನ್ನು ಯಶಸ್ವಿಗೊಳಿಸಿದರು.
ಕಾರ್ಯಗಾರದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಾಸನ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಅವರು ಮಾತನಾಡಿ, ಪಕ್ಷದ ಸಂಘಟನೆ ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಿದ್ಧತೆ ಕುರಿತು ಸಮಗ್ರ ಮಾಹಿತಿ ನೀಡಿದರು. ಬಿಜೆಪಿ ಪಕ್ಷವನ್ನು ಬೂತ್ ಮಟ್ಟದಿಂದ ಇನ್ನಷ್ಟು ಬಲಿಷ್ಠಗೊಳಿಸಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ತೂಬಿನಕೆರೆ ಗಿರೀಶ್, ತಾಲೂಕು ಅಧ್ಯಕ್ಷ ಪರಮಗಂಗಾಧರ್, ಪ್ರಧಾನ ಕಾರ್ಯದರ್ಶಿಗಳಾದ ಗನ್ನಿ ವಿಶ್ವನಾಥ್ ಹಾಗೂ ಪ್ರಶಾಂತ್ ಮುಳ್ಳುಕೆರೆ, ಮಾಜಿ ಅಧ್ಯಕ್ಷ ಓ.ಆರ್. ರಂಗೇಗೌಡ, ಜಿಲ್ಲಾ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ವೆಂಕಟೇಶ ಆಚಾರ್, ತಾಲೂಕು ಉಪಾಧ್ಯಕ್ಷರಾದ ನಟರಾಜ್ ಫುಮಡಿಹಳ್ಳಿ, ಮಿಲಿಟರಿ ವಾಸು, ಗೌಡಗೆರೆ ಸತೀಶ್, ಶೆಟ್ಟಿಹಳ್ಳಿ ಅಶೋಕ್, ಮುದ್ದನಹಳ್ಳಿ ಶಿವಣ್ಣ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಹಾಗೆಯೇ ಕಾರ್ಯದರ್ಶಿಗಳಾದ ನುಗ್ಗೆಹಳ್ಳಿ ನಾಗರಾಜ್, ಶ್ರೀಮತಿ ಆಶಾ ರಾಘವೇಂದ್ರ, ಸಾತೇನಹಳ್ಳಿ ವಿಶ್ವನಾಥ್, ರಘುರಾಜೇಗೌಡ, ಶ್ರವಣಬೆಳಗೊಳ ಶ್ರವಣ್, ಬಿಜೆಪಿ ಮುಖಂಡರಾದ ಬಾಗೂರು ರಾಜಕುಮಾರ್, ಯುವ ಮುಖಂಡ ಹೊಸಹಳ್ಳಿ ಸತೀಶ್ (ಕಂಠಿ), ವಡ್ಡರಹಳ್ಳಿ ಪ್ರಸನ್ನ, ಭಾಸ್ಕರಾಚಾರ್ಯ, ಜಿತೇಂದ್ರ ಹಾಗೂ ಇತರರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ
