ಅರಸೀಕೆರೆ, ಮಾ.27: ತಾಲೂಕಿನ ಕಸಬಾ ಹೋಬಳಿಯ ಹಾರನಹಳ್ಳಿ ಗ್ರಾಮ ದೇವತೆಯಾದ ಕೋಡಮ್ಮ ದೇವಿಯ ಜಾತ್ರಾ ಮಹೋತ್ಸವ ಗುರುವಾರ ಭಕ್ತಿಭಾವ ಮತ್ತು ಸಂಭ್ರಮದ ವಾತಾವರಣದಲ್ಲಿ ಅದ್ದೂರಿಯಾಗಿ ನೆರವೇರಿತು.

ಈ ಜಾತ್ರಾ ಮಹೋತ್ಸವದ ಸಂಭ್ರಮಕ್ಕೆ ಗ್ರಾಮದ ಹೆಣ್ಣು ಮಗಳಾದ ದೀಪಶ್ರೀ ಪ್ರಮೋದ್ ಮಾಧ್ಯಮಾದೊಂದಿಗೆ ಸಂಭ್ರಮವನ್ನು ಹಂಚಿಕೊಂಡರು.

ಬೆಳಗ್ಗಿನಿಂದಲೇ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಸಕಲ ಅಲಂಕಾರಗಳಿಂದ ಕಂಗೊಳಿಸಿದ್ದ ತೇರಿನಲ್ಲಿ ಗ್ರಾಮ ದೇವತೆಯಾದ ಕೋಡಮ್ಮ ದೇವಿ ಹಾಗೂ ಯಳವಾರೆ ಗ್ರಾಮದ ದೇವತೆಯಾದ ಹುಚ್ಚಮ್ಮದೇವಿ, ಪ್ರತಿಷ್ಠಾಪಿಸಿ, ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಜಾತ್ರೆ ಆರಂಭಿಸಲಾಯಿತು.

ವಿಶೇಷವಾಗಿ ಚೋಮ, ಧೂತರಾಯಸ್ವಾಮಿ, ವೀರಭದ್ರಸ್ವಾಮಿ ಮತ್ತು ಚೆಲುವರಾಯಸ್ವಾಮಿಗಳ ಕುಣಿತ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಭಕ್ತರ ಮನಸೆಳೆಯಿತು.
ಇದೇ ವೇಳೆ ಕೋಡಿಮಠದ ಶ್ರೀ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಸಂಜೆ ಸುಮಾರು 4.30 ಗಂಟೆಗೆ ತೇರನ್ನು ಎಳೆಯಲಾಯಿತು.

ತೇರೋತ್ಸವದ ವೇಳೆ ಭಕ್ತಾದಿಗಳು ಹರ್ಷೋದ್ಗಾರ ಕೂಗುತ್ತಾ, ಹಣ್ಣು-ಹವನಗಳನ್ನು ಎಸೆದು ಸಂಭ್ರಮ ವ್ಯಕ್ತಪಡಿಸಿದರು.
ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಹೆಣ್ಣು ಮಗಳಾದ ಶ್ರೀಮತಿ ದೀಪಶ್ರೀ ಪ್ರಮೋದ್ ಭಾಗವಹಿಸಿ, ಹಬ್ಬದ ಸಂಭ್ರಮವನ್ನು ಹಚ್ಚಿಕೊಂಡು ಭಕ್ತಿಭಾವದಿಂದ ಕಣ್ತುಂಬಿಕೊಂಡರು.

ಪಅವರ ಉಪಸ್ಥಿತಿ ಜಾತ್ರಾ ಸಂಭ್ರಮಕ್ಕೆ ಮತ್ತಷ್ಟು ವಿಶೇಷತೆ ತಂದಿತು.
ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರಾ ಮಹೋತ್ಸವಕ್ಕೆ ಮೆರುಗು ತಂದರು.
