
ಇತ್ತೀಚಿನ ಎಲ್ಲಾ ಕಡೆ ನಗದು ವಹಿವಾಟಿಗಿಂತ UPI ನಿಂದ ವ್ಯವಹರಿಸೋದೆ ಹೆಚ್ಚಾಗಿದೆ. ಇದನ್ನೇ ಬಂಡಾವಾಳ ಮಾಡಿಕೊಂಡಿರುವ ಮೋಸಗಾರು ನೇರವಾಗಿ ಬ್ಯಾಂಕ್ ಅಕೌಂಟ್ ಗೆ ಕನ್ನಾ ಹಾಕುತ್ತಿದ್ದಾರೆ….ಹಾಗದರೇ ಹೇಗೆ UPI ಮೋಸ ವಾಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ ….
UPI ಮೋಸ ಎಂದರೆ Unified Payments Interface (UPI) ಮೂಲಕ ನಕಲಿ ಅಥವಾ ವಂಚನೆಯ ತಂತ್ರಗಳನ್ನು ಬಳಸಿಕೊಂಡು ಹಣವನ್ನು ಕದ್ದುಕೊಳ್ಳುವ ಕ್ರಿಯೆ.
ಆನ್ಲೈನ್ ಪೇಮೆಂಟ್ಗಳು ಜನಪ್ರಿಯವಾಗುತ್ತಿದ್ದಂತೆ, ವಂಚಕರು ವಿವಿಧ ವಿಧಾನಗಳಿಂದ ಬಳಕೆದಾರರನ್ನು ಮೋಸಗೊಳಿಸುತ್ತಿದ್ದಾರೆ.
ಸಾಮಾನ್ಯ UPI ಮೋಸದ ವಿಧಾನಗಳು:
- ನಕಲಿ ಲಿಂಕ್ಗಳು – ವಂಚಕರು ಬೋಗಸ್ ವೆಬ್ಸೈಟ್ ಅಥವಾ ಫಿಶಿಂಗ್ ಲಿಂಕ್ಗಳನ್ನು ಕಳಿಸಿ, ನೀವು ಲಾಗಿನ್ ಮಾಡಿದಾಗ ನಿಮ್ಮ ಬ್ಯಾಂಕ್ ವಿವರಗಳನ್ನು ಕದ್ದುಕೊಳ್ಳುತ್ತಾರೆ.
- QR ಕೋಡ್ ಮೋಸ – ವಂಚಕರು “ನೀವು ಹಣ ಪಡೆಯಲು ಈ QR ಕೋಡ್ ಸ್ಕ್ಯಾನ್ ಮಾಡಿ” ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ, ಸ್ಕ್ಯಾನ್ ಮಾಡಿದಾಗ ನೀವು ಹಣ ಕಳೆದುಕೊಳ್ಳಬಹುದು.
- ನಕಲಿ ಕಸ್ಟಮರ್ ಕೇರ್ – ವಂಚಕರು ನಕಲಿ ಬ್ಯಾಂಕ್ ಅಥವಾ ಕಸ್ಟಮರ್ ಕೇರ್ ಪ್ರತಿನಿಧಿಗಳಂತೆ ಮಾತನಾಡಿ OTP ಅಥವಾ PIN ಕೇಳುತ್ತಾರೆ.
- UPI ಕಲೆಕ್ಟ್ ರಿಕ್ವೆಸ್ಟ್ (Request Money Scam) – ಮೋಸಗಾರರು ಹಣ ಕಳುಹಿಸುವಂತೆ ಜಾಹೀರಾತು ಕೊಟ್ಟು, ಬದಲಿಗೆ ನೀವು “Approve” ಮಾಡಿದರೆ ನೀವು ಹಣ ಕಳೆದುಕೊಳ್ಳಬಹುದು.
- ನಕಲಿ ಆಪ್ಗಳು – ಕೇವಲ Google Play Store ಅಥವಾ Apple App Store ನಿಂದ ಅಧಿಕೃತ UPI ಆಪ್ಗಳನ್ನು ಮಾತ್ರ ಡೌನ್ಲೋಡ್ ಮಾಡಬೇಕು.
ಮೋಸದಿಂದ ಹೇಗೆ ತಪ್ಪಿಸಿಕೊಳ್ಳಬಹುದು?
✔️ ಅಪ್ರತಿಷ್ಠಿತ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ.
✔️ ಯಾರೊಬ್ದರಿಗೂ ನಿಮ್ಮ OTP, PIN, ಅಥವಾ ಖಾತೆ ವಿವರಗಳನ್ನು ಹಂಚಿಕೊಳ್ಳಬೇಡಿ.
✔️ QR ಕೋಡ್ ಸ್ಕ್ಯಾನ್ ಮಾಡುವ ಮೊದಲು ಡಬಲ್ ಚೆಕ್ ಮಾಡಿ.
✔️ ಅಫಿಶಿಯಲ್ UPI ಅಪ್ಲಿಕೇಶನ್ ಮಾತ್ರ ಬಳಸಿರಿ.
✔️ ಬ್ಯಾಂಕ್ ಅಥವಾ UPI ಅಪ್ನಲ್ಲಿ ಸಂದೇಹಾಸ್ಪದ ಚಲನೆ ಕಂಡರೆ ತಕ್ಷಣ ಬ್ಯಾಂಕ್ಗೆ ಮಾಹಿತಿ ನೀಡಿರಿ.
ನೀವು ಯಾವದಾದರೂ UPI ಮೋಸಕ್ಕೆ ಒಳಗಾದರೆ, ಸೈಬರ್ ಕ್ರೈಮ್ ಪೋರ್ಟಲ್ (www.cybercrime.gov.in) ಅಥವಾ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.