ಎಲ್ಪಿಜಿ ಗ್ಯಾಸ್ ಸ್ಟವ್ ಒಮ್ಮೊಮ್ಮೆ ಸರಿಯಾಗಿ ಉರಿಯೋದಿಲ್ಲ. ಹೀಗಾದಾಗ ಸಿಲಿಂಡರ್ ಗ್ಯಾಸ್ ಉಳಿತಾಯ ಮಾಡಲು ಆಗೋದಿಲ್ಲ. ಕೊಬ್ಬರಿ ಎಣ್ಣೆಯಿಂದ ಸಿಲಿಂಡರ್ ಗ್ಯಾಸ್ ಉಳಿತಾಯ ಮಾಡಬಹುದು. ಏನು ಮಾಡಬಹುದು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಹೌದು, ಇದೇನಪ್ಪಾ ಕೊಬ್ಬರಿ ಎಣ್ಣೆಯಿಂದ ಗ್ಯಾಸ್ ಸ್ಟವ್ ಉಳಿತಾಯ ಮಾಡಬಹುದು. ಇದನ್ನು ಹೇಗೆ ಹಾಕೋದು, ಉಳಿತಾಯ ಮಾಡೋದು ಎಂಬ ಡೌಟ್ ಬೇಡ. ಇದನ್ನು ಸರಿಯಾದ ವಿಧಾನದಲ್ಲಿ ಹಾಕಬೇಕು ಅಷ್ಟೇ.

ಗ್ಯಾಸ್ ಸ್ಟವ್ ಬರ್ನರ್ಗಳು ಹಾಳಾಗಿದ್ದರೆ ಅಥವಾ ಅದರಲ್ಲಿ ಕಸ ಕಟ್ಟಿದ್ದರೆ ಗ್ಯಾಸ್ ಸರಿಯಾಗಿ ಉರಿಯುವುದಿಲ್ಲ. ಇದರಿಂದ ಸಿಲಿಂಡರ್ ಬೇಗ ಖಾಲಿಯಾಗುತ್ತದೆ, ಈಗಂತೂ ಗ್ಯಾಸ್ಗೆ ಹಾಹಾಕಾರ ಉಂಟಾಗಿದೆ. ಈ ರೀತಿ ಆಗಬಾರದು ಎಂದರೆ ಗ್ಯಾಸ್ ಸ್ಟವ್ನ ಬರ್ನರ್ ತೆಗೆದುಕೊಂಡು ಸ್ವಲ್ಪ ಅರಿಷಿಣ, ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ
ಅರಿಷಿಣ, ಕೊಬ್ಬರಿ ಪೇಸ್ಟ್ ಅನ್ನು ಬರ್ನರ್ಗೆ ಹಚ್ಚಬೇಕು. ಇದರಿಂದ ಸ್ಟವ್ನ ಬರ್ನರ್ನಲ್ಲಿ ಇರುವ ಚಿಕ್ಕ ಚಿಕ್ಕ ರಂಧ್ರದಲ್ಲಿ ಸಿಲುಕಿಕೊಂಡಿರುವ ಕಸ ಸಡಿಲವಾಗುತ್ತದೆ. ಆಮೇಲೆ ಬ್ರಶ್ನಿಂದ ಉಜ್ಜಿದರೆ ಅಲ್ಲಿ ಕಟ್ಟಿಕೊಂಡಿರುವ ಕಸವೆಲ್ಲ ಹೊರಗೆ ಹೋಗುವುದು.

ಡಿಶ್ ವಾಷಿಂಗ್ ಲಿಕ್ವಿಡ್ ಅಥವಾ ಸೋಪನ್ನು ಬಳಸಿ ನಾರಿನಿಂದ ಉಜ್ಜಿ ತೊಳೆದರೆ ಗ್ಯಾಸ್ ಬರ್ನರ್ ಚೆನ್ನಾಗಿ ಕ್ಲೀನ್ ಆಗುವುದು.
