♥ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಸಂಬಂಧದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಇರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ .ಹೊಂದಾಣಿಕೆ ಕೊರತೆ .. ದೈಹಿಕ ಅತೃಪ್ತಿ .. ಪ್ರೀತಿಯ ಕೊರತೆ ..
ಹೀಗೆ ಮುಂತಾದ ಕಾರಣಗಳಿಂದ ಹಲವರು ಮದುವೆಯ ನಂತರ ಅನೈತಿಕ ಸಂಬಂಧಕ್ಕೆ ಹಾತೊರೆಯುತ್ತಿದ್ದಾರೆ. ವೈವಾಹಿಕ ಸಂಬಂಧದಲ್ಲಿ ಸಿಗದಿದ್ದನ್ನು ಹೊರಗಡೆ ಹುಡುಕುವ ಮನೋಭಾವ ಬೆಳೆಸಿಕೊಳ್ಳುತ್ತಾರೆ . ಆದರೆ ಈ ಪೈಕಿ ಕಾಲಾನಂತರ ಕೆಲವರಿಗೆ ಪಾಪ ಪ್ರಜ್ಞೆ ಕಾಡಲು ಶುರುವಾಗುತ್ತೆ.
ಅಕ್ರಮ ಸಂಬಂಧದ ವಿಚಾರ ಗೊತ್ತಾಗದೆ ಇದ್ದರೆ, ಸಂಗಾತಿಗೆ ನೋವೇ ಆಗಲ್ಲ ಎಂಬ ಭ್ರಮೆಯಲ್ಲಿ ಇವರು ಇರುತ್ತಾರಾದರೂ ಮನದ ಮೂಲೆಯಲ್ಲಿ ತಪ್ಪಿತಸ್ಥ ಎನ್ನುವ ಭಾವನೆ ಬೇರೂರಿರುತ್ತೆ. ಆಗ ಬದುಕು ಭಾರ ಎಂದು ಅನಿಸಲು ಶುರುವಾಗುತ್ತೆ. ಪಿಯೂಷ್ ಮಿಶ್ರಾ ಅವರ ವಿಚಾರದಲ್ಲಿ
ಕೂಡ ಇದೇ ಆಗಿತ್ತು.
ಹೌದು, ಪಿಯೂಷ್ ಮಿಶ್ರಾ.. ಬಾಲಿವುಡ್ನ ಹಿರಿಯ ಕಲಾವಿದ. ಕೇವಲ ನಟ ಮಾತ್ರ ಅಲ್ಲ ಅಪ್ರತಿಮ ಗಾಯಕ ಕೂಡ ಹೌದು ಪಿಯೂಶ್ ಮಿಶ್ರಾ. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ವಿದ್ಯಾರ್ಥಿಯಾದ ಪಿಯೂಷ್ ಮಿಶ್ರಾ ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ನಿರ್ದೇಶನದ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದಾರೆ. ರಂಗಭೂಮಿಯಲ್ಲಿ ಕೂಡ ಮಿಂಚಿದ್ದಾರೆ.
”ಗ್ಯಾಂಗ್ಸ್ ಆಫ್ ವಾಸೇಪುರ್”.. ”ಗುಲಾಲ್”.. ”ದಿ ಲೆಜೆಂಡ್ ಆಫ್ ಭಗತ್ ಸಿಂಗ್”.. ”ಲಫಂಗೇ ಪರಿಂದೇ”.. ”ಮಕ್ಬೂಲ್”.. ”ತಮಾಶಾ”.. ”ದಿಲ್ ಸೇ”.. ಇವರ ಕೆಲ ಪ್ರಖ್ಯಾತ ಸಿನಿಮಾಗಳು. ಇಂಥಾ ಪಿಯೂಷ್ ಮಿಶ್ರಾ ಸದ್ಯ ಬದುಕಿನ ಕಥೆ ಹೇಳಿದ್ದಾರೆ. ನನ್ನ ಪತ್ನಿಗೆ 15 ವರ್ಷ ಮೋಸ ಮಾಡಿದೆ ಎಂದು ಕಣ್ಣೀರು ಹಾಕಿದ್ದಾರೆ.
”ಶುಭಾಂಕರ್ ಮಿಶ್ರಾ” ಅವರಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಪಿಯೂಷ್ ಮಿಶ್ರಾ, ನಾನು ಸುಧಾರಿಸಿದ್ದು ನನ್ನಲ್ಲಿ ಬದಲಾವಣೆಗಳಾಗಿದ್ದು ಈಗೀಗ ಅಷ್ಟೇ ಎಂದು ಹೇಳಿದ್ದಾರೆ. ಹಿಂದೆ ನಾನು ಹೀಗೆ ಇರಲಿಲ್ಲ ಎಂದು ಹೇಳಿರುವ ಪಿಯೂಷ್ ಮಿಶ್ರಾ ಮದುವೆ ಎನ್ನುವುದೇ ದೊಡ್ಡ ಜವಾಬ್ದಾರಿ ಆದರೆ ನಾನು ಆ ಜವಾಬ್ದಾರಿಯಿಂದ ವಿಮುಖನಾಗಿದ್ದೆ ಎಂದು ಹೇಳಿದ್ದಾರೆ.
