ಕೊರಟಗೆರೆ ;- 2025-26 ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಸರ್ಕಾರಿ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ. 100 ರಷ್ಟು ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.75 ರಷ್ಡು ಫಲಿತಾಂಶದೊಂದಿಗೆ ವಾಣಿಜ್ಯ ವಿಭಾಗದ ಕೆ.ಆರ್.ನಂದಿನ 562 ಅಂಕ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದ್ದಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ರುದ್ರೇಶ್ ತಿಳಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ ಈ ಬಾರಿ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಗ್ರಾಮಿಣ ಭಾಗದ ಕಾಲೇಜಿನ ಕಲಾವಿಭಾಗದಲ್ಲಿ 27 ಮಂದಿ, ವಾಣಿಜ್ಯ ವಿಭಾಗದಲ್ಲಿ 25 ಮಂದಿ ಪರೀಕ್ಷೆ ಪಡೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉರ್ತಿಣರಾಗಿದ್ದು ಕಲಾವಿಭಾಗದಲ್ಲಿ 3 ಮಂದಿ ಡಿಸ್ಟಿಕ್ಷನ್, 16 ಮಂದಿ ಪ್ರಥಮ ದರ್ಜೇ, 6 ಮಂದಿ ದ್ವಿತೀಯ ಹಾಗೂ 3 ತೃತೀಯ ದರ್ಜೆ ಯಲ್ಲಿ ಪಾಸ್ಆಗಿದ್ದರೆ ವಾಣಿಜ್ಯ ವಿಭಾಗದಲ್ಲಿ 12 ಮಂದಿ ಡಿಸ್ಟಿಕ್ಷನ್, 13 ಮಂದಿ ಪ್ರಥಮ ದರ್ಜೆಯಲ್ಲಿ ಉರ್ತೀಣರಾಗಿ ಶಾಲೆಗೆ ಶೇ.100 ರಷ್ಟು ಫಲಿತಾಂಶ ತಂದರೆ ವಿಜ್ಞಾನ ವಿಭಾಗದಲ್ಲಿ 22 ಮಂದಿ ಪರೀಕ್ಷೆ ಬರೆದು ಅದರಲ್ಲಿ 9 ಪ್ರಥಮ ದರ್ಜೆ, 3 ದ್ವಿತೀಯ ದರ್ಜೆ, 6 ತೃತೀಯ ದರ್ಜೆಯಲ್ಲಿ ಉರ್ತೀಣರಾಗಿ ಶೇ. 75 ರಷ್ಟು ಫಲಿತಾಂಶ ಹಾಗೂ ವಾಣಿಜ್ಯ ವಿಭಾಗದ ಕೆ.ಆರ್.ನಂದಿನಿ 562 ಅಂಕದೊಂದಿಗೆ ಶೇ.94 ರಷ್ಟು ಮತ್ತು ಕನ್ನಡ ಭಾಷೆಯಲ್ಲಿ ಶಿಲ್ಪ ಮತ್ತು ಶೃತಿ 100 ಕ್ಕೆ 100 ಅಂಕ ಪಡಯುವ ಮೂಲಕ ಕಾಲೇಜಿಗೆ ಕೀರ್ತಿ ತಂದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ,
