ಬೆಂಗಳೂರು : Supreme Court of India ಕೊಲಿಜಿಯಂವು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಮೂವರು ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಶಿಫಾರಸ್ಸು ಮಾಡಿದೆ.
ಏಪ್ರಿಲ್ 14ರಂದು ನಡೆದ ಕೊಲಿಜಿಯಂ ಸಭೆಯ ಬಳಿಕ ಈ ಶಿಫಾರಸ್ಸುಗಳನ್ನು ಮಾಡಲಾಗಿದೆ. ನ್ಯಾಯಾಂಗ ಅಧಿಕಾರಿಗಳಾದ ರಾಜೇಶ್ವರಿ ನಾರಾಯಣ ಹೆಗ್ಡೆ, ಕೆ. ಗಣೇಶ್ ಶಾಂತಿ ಮತ್ತು ಮಹದೇವಪ್ಪ ಬೃಂಗೇಶ್ ಅವರ ಪದೋನ್ನತಿಗೆ ಕೊಲಿಜಿಯಂ ಒಪ್ಪಿಗೆ ಸೂಚಿಸಿದೆ.
ಪ್ರಸ್ತುತ Karnataka High Courtನಲ್ಲಿ 62 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಅವುಗಳಲ್ಲಿ ಕೇವಲ 45 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದ ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ ನ್ಯಾಯಾಂಗ ವ್ಯವಸ್ಥೆಯ ಕಾರ್ಯಕ್ಷಮತೆ ಮೇಲೆ ಒತ್ತಡ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.
ಈ ಶಿಫಾರಸ್ಸುಗಳು ಅಂಗೀಕಾರವಾದ ಬಳಿಕ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಗಳ ಕೊರತೆ ಭಾಗಶಃ ನಿವಾರಣೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
