ಕೆ.ಆರ್.ಪೇಟೆ,ಏ.17: ತಾಲ್ಲೂಕಿನ ಶೀಳನೆರೆ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಲಕ್ಷ್ಮಿ ದೇವಿ ಅಮ್ಮನವರ ರಂಗದ ಹಬ್ಬದ ಅಂಗವಾಗಿ ಇದೇ ಏ.23ರಂದು ಗುರುವಾರ ರಾತ್ರಿ 8ಗಂಟೆಯಿಂದ ಜಿಲ್ಲಾ ಮಟ್ಟದ ರಂಗಕುಣಿತ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.
ರಂಗಕುಣಿತ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ತಂಡಗಳು ಮುಂಚಿತವಾಗಿ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬೇಕು. ರಂಗಕುಣಿತ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಮೊದಲನೇ ಬಹುಮಾನ 15ಸಾವಿರ, ಎರಡನೇ ಬಹುಮಾನ 10ಸಾವಿರ, ಮೂರನೇ ಬಹುಮಾನ 5ಸಾವಿರ ನಗದು ಬಹುಮಾನ ನೀಡಿ ಗ್ರಾಮದ ವತಿಯಿಂದ ಗೌರವಿಸಲಾಗುವುದು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವಕೀಲ ಹೆಚ್.ರವಿ, ಹಿರಿಯ ಮುಖಂಡರಾದ ಹೆಚ್.ಕೆ.ಬೋರೇಗೌಡ, ಮಂಜೇಗೌಡ, ಈಶ್ವರ್, ಹೆಚ್.ಆರ್, ನಾಗರಾಜೇಗೌಡ, ನಂಜಪ್ಪ, ಕುಮಾರ್, ಪ್ರತಾಪ್, ಪರಮೇಶ್, ಕುಮಾರ್, ವಕೀಲರಾದ ರವಿ, ನಿಂಗರಾಜು, ಪ್ರದೀಪ್ ಇತರರು ಉಪಸ್ಥಿತರಿದ್ದರು.
ಆಸಕ್ತ ತಂಡಗಳು ಹೆಸರು ನೊಂದಾಯಿಸಲು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು: ಹೆಚ್.ಕೆ.ಬೋರೇಗೌಡ-9611016134, ನಾಗರಾಜೇಗೌಡ-9880430447, ಮಂಜಣ್ಣ-7619406532, ಕುಮಾರ್-8710012167 ಸಂಪರ್ಕಿಸಿ ನೊಂದಾಯಿಸಿಕೊಳ್ಳಲು ಕೋರಲಾಗಿದೆ.
-ಶ್ರೀನಿವಾಸ್ ಆರ್.
