ಕೊರಟಗೆರೆ ;- ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಮತ್ತು ಎರಡು ಬೈಕ್ಗಳಿಗೆ ಬೆಂಕಿಹಚ್ಚಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಠಿಸಿದ್ದ ಪ್ರಕರಣವನ್ನು ಕೋಳಾಲ ಪೊಲೀಸರು ಬೇದಿಸುವಲ್ಲಿ ಯಶಸ್ವಿಯಾಗಿ ಎಂ.ಬಿ.ಬಿ.ಎಸ್ ವೈದ್ಯನೇ ಈ ದುಷ್ಕೃತ್ಯದಲ್ಲಿ ಭಾಗಿಯಾಗಿರೋದು ಬಯಲಾಗಿದೆ.
ಕೊರಟಗೆರೆ ತಾಲೂಕು ಕೋಳಾಲ ಗ್ರಾಮದಲ್ಲಿ ಕೆಸಿಎನ್ ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕ ವಿರೊಪಾಕ್ಷ ಎನ್ನುವವರ ಮನೆ ಮುಂದೆ ನಿಲ್ಲಿಸಿದ್ದ ಕಾರು ಮತ್ತು ಎರಡು ಬೈಕುಗಳಿಗೆ ಕಳೆದ ಏ.11 ರಂದು ಶನಿವಾರ ತಡರಾತ್ರಿ ಬೆಂಕಿ ಹಚ್ಚಿ ಪರಾರಿಯಾಗಿದ್ದು ಕಾರು ಮತ್ತು ಬೈಕುಗಳು ಭಸ್ಮವಾಗಿದ್ದು ಗ್ರಾಮದಲ್ಲಿ ಭಯದ ವಾರಾವರಣ ಸೃಷ್ಠಿಯಾಗಿತ್ತು ಈ ಪ್ರಕರಣವನ್ನು ಕೋಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರ ಅಪರಾದಿಯ ಬಂದನಕ್ಕೆ ಬಲೆ ಬೀಸಿ ಬೆಂಕಿಇಟ್ಟು ಪರಾರಿಯಾಗಿದ್ದ ಕಿಡಿಗೆಡಿ ಎಂ.ಬಿ.ಬಿ.ಎಸ್ ವೈದ್ಯ ಹೆಚ್.ಆರ್.ನಾಗಭೂಷಣ್ ಎಂಬುವರನ್ನು ಬಂದಿಸುವಲ್ಲಿ ಕೋಳಾಲ ಪೊಲೀಸರು ಯಶಸ್ವಿಯಾಗಿ ಅರೋಪಿಯನ್ನು ಜೈಲಿಗಟ್ಟಿದ್ದಾರೆ.

ವಾಹನಗಳಿಗೆ ಬೆಂಕಿ ಹಚ್ಚಿ ಭಸ್ಮಮಾಡಲು ಹಳೇ ವೈಷಮ್ಯವೇ ಕಾರಣವಾಗಿ ಈ ಕೃತ್ಯ ಎಸಿಗಿದ್ಧಾನೆ ಎನ್ನಲಾಗಿದೆ, ಕೋಳಾಲದ ಪಾರ್ವತಿ ಪರಮೇಶ್ವರ ಕಲ್ಯಾಣ ಮಂಟಪದ ಮಾಲೀಕನಾಗಿರುವ ವೈದ್ಯ ಡಾ.ನಾಗಭೂಷಣ್ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡಿ ಕುಣಿಗಲ್ನಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದಾನೆ ಎನ್ನಲಾಗಿದೆ, ತುಮಕೂರಿನಲ್ಲಿ ಪೆಟ್ರೋಲ್ ಖರೀದಿಸಿ ತಂದು ಗುರುತು ಕಾಣದಂತೆ ಮುಸುಕು ಹಾಕಿಕೊಂಡು ತಡರಾತ್ರಿ ಕಾರಿನ ಮೇಲೆ ಮತ್ತು ಬೈಕ್ಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಪರಾರಿಯಾಗಿದ್ದ ಕೋಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಪಿಐ ಅನಿಲ್ ಮಾರ್ಗದರ್ಶನದಲ್ಲಿ ಪಿಎಸೈ ಅಭಿಷೇಕ್ ನೇತೃತ್ವದ ತಂಡ ತನಿಖೆ ಕೈಗೊಂಡು ಸಿಸಿ ಕ್ಯಾಮೇರಾ ದೃಶ್ಯಗಳ ಆಧಾರಿಸಿ ವೈದ್ಯ ನಾಗಭೂಷಣ್ ನನ್ನ ಬಂದಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳ ಪಡಿಸಿದ್ದಾರೆ.
-ಶ್ರೀನಿವಾಸ್ ಕೊರಟಗೆರೆ.
