
ಮುಂಬೈ : ಶಿಕ್ಷಣ ಪ್ರಸಾರಕ ಮಂಡಳಿಯ ಪ್ರಿನ್. ಎಲ್.ಎನ್. ವೆಲಿಂಗ್ಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಆ್ಯಂಡ್ ರಿಸರ್ಚ್, (ಪಿಜಿಡಿಎಂ) ಮತ್ತು ವಿಸ್ಕೂಲ್ (WeSchool)- ಚಿಂತಕರ ನಾಯಕತ್ವ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಶೈಕ್ಷಣಿಕ ಸಹಯೋಗ ಬೆಳೆಸುವ ಪ್ರಮುಖ ಜಾಗತಿಕ ವೇದಿಕೆಯಾಗಿರುವ ಅಕ್ರೆಡಿಷನ್ ಕೌನ್ಸಿಲ್ ಫಾರ್ ಬಿಸಿನೆಸ್ ಸ್ಕೂಲ್ಸ್ ಆ್ಯಂಡ್ ಪ್ರೋಗ್ರಾಮ್ಸ್- ನ ( ಎಸಿಬಿಎಸ್ಪಿ) ರೀಜನ್ 10ನೇ ಸಮ್ಮೇಳನ 2025 ಮುಂಬಯಿ ಯಲ್ಲಿ ಯಶಸ್ವಿಯಾಗಿ ನೇರವೇರಿತು.
“ಗಡಿಯುದ್ದಕ್ಕೂ ಸೇತುವೆ ನಿರ್ಮಾಣʼ ಧ್ಯೇಯೋದ್ದೇಶದ ಈ ಸಮ್ಮೇಳನವು, ಶೈಕ್ಷಣಿಕ ಮತ್ತು ವೃತ್ತಿಪರ ಯಶಸ್ಸಿಗೆ ಸಹಯೋಗದ ಕಾರ್ಯ ತಂತ್ರಗಳು” ವಿಷಯದ ಬಗ್ಗೆ ವಿಚಾರ ವಿನಿಮಯಕ್ಕೆ ವೇದಿಕೆ ಒದಗಿಸಿತ್ತು. ಈ ಸಮ್ಮೇಳನವು ಬಿಸಿನೆಸ್ ಏಜುಕೇಷನ್ನಿನ ಭವಿಷ್ಯ, ಗಡಿಯಾಚೆಗಿನ ಪಾಲುದಾರಿಕೆಗಳು, ಪರಿವರ್ತನೆಯಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳು ನಿರ್ವಹಿಸುವ ಮಹತ್ವದ ಪಾತ್ರದ ಕುರಿತು ಒಳನೋಟ ನೀಡಿತು. ಉಪಯುಕ್ತಕರ ವಿಚಾರಗೋಷ್ಠಿಗಳಿಗೆ ಅವಕಾಶ ಮಾಡಿಕೊಟ್ಟಿತು.
ಪ್ರತಿಷ್ಠಿತ ಶೈಕ್ಷಣಿಕ ಟ್ರಸ್ಟ್ ಆಗಿರುವ ಶಿಕ್ಷಣ ಪ್ರಸಾರಕ ಮಂಡಳಿಯ ಆಶ್ರಯದಲ್ಲಿ ವಿಸ್ಕೂಲ್ನ ಮುಂಬೈ ಮತ್ತು ಬೆಂಗಳೂರು ಕ್ಯಾಂಪಸ್ಗಳು ಈ ಸಮ್ಮೇಳನವನ್ನು ಜಂಟಿಯಾಗಿ ಆಯೋಜಿಸಿದ್ದು, ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ದಕ್ಷಿಣ ಏಷ್ಯಾ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಶಿಕ್ಷಣ ತಜ್ಞರು, ಸಂಶೋಧನಾ ವಿದ್ವಾಂಸರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ 300 ಕ್ಕೂ ಪ್ರತಿನಿಧಿಗಳು ಭಾಗವಹಿಸಿದ್ದ ಈ ಎರಡು ದಿನಗಳ ಸಮ್ಮೇಳನವು ದಕ್ಷಿಣ ಏಷ್ಯಾದ ದೇಶಗಳ ಶಿಕ್ಷಣ ತಜ್ಞರು ಒಂದೆಡೆ ಸೇರಿ ವಿಚಾರ ವಿನಿಮಯ ನಡೆಸಲು ವೇದಿಕೆ ಒದಗಿಸಿತ್ತು. ಸಮ್ಮೇಳನದಲ್ಲಿ 150 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು.
ಸಂಶೋಧನೆ ಆಧಾರಿತ ಶೈಕ್ಷಣಿಕ ಸಂಸ್ಕೃತಿ ಮತ್ತು ಜಾಗತಿಕ ಜ್ಞಾನ ವಿನಿಮಯಕ್ಕೆ ವಿಸ್ಕೂಲ್ನ ವಿಸ್ಕೂಲ್ನ ಬದ್ಧತೆಯನ್ನು ಈ ಸಮ್ಮೇಳನವು ಬಲಪಡಿಸಿತು.
ಬೆಸ್ಟ್ ಆಫ್ ರೀಜನ್, ಸ್ಟುಡೆಂಟ್ ಷೋಕೇಶ್ ಮತ್ತು ಸ್ಕೂಲ್ ಆಫ್ ಥಾಟ್ ವಿಭಾಗದಲ್ಲಿ ಪ್ರಶಸ್ತಿ ಪುರಸ್ಕೃತ ದೇಶದ ವಿವಿಧ ರಾಜ್ಯಗಳ ಮತ್ತು ವಿವಿಧ ದೇಶಗಳ ವಿದ್ಯಾರ್ಥಿಗಳು ಅಮೆರಿಕದ ಲಾಸ್ವೆಗಾಸ್ನಲ್ಲಿ ನಡೆಯಲಿರುವ ʼಎಸಿಬಿಎಸ್ಪಿʼ ವಾರ್ಷಿಕ ಸಮ್ಮೇಳನದಲ್ಲಿ ರೀಜನ್ 10 ಪ್ರತಿನಿಧಿಸಲಿದ್ದಾರೆ.