
ಹಾಸನ: ನಗರದಲ್ಲಿ ಬುಧವಾರ ಸಂಜೆ ಗುಡುಗು-ಗಾಳಿ-ಸಿಡಿಲಿನೊಂದಿಗೆ ಧಾರಾಕಾರ ಮಳೆ ಸುರಿಯಿತು.
ಸಂಜೆ 6.45 ರ ಸುಮಾರಿಗೆ, ಆರಂಭವಾದ ಮಳೆ ಕೆಲ ಸಮಯ ಎಡಬಿಡದೇ ಸುರಿದು, ಚರಂಡಿ ತುಂಬಿ, ರಸ್ತೆಯೆಲ್ಲೇಲ್ಲ ನೀರು ಹರಿದು ವಾಹನ ಸಂಚಾರಕ್ಕೆ ಅಡ್ಡಿ ಮಾಡಿತು. ಬೆಳಿಗ್ಗೆ ಸ್ವಲ್ಪ ಸೆಖೆ ಹೆಚ್ಚಾಗಿತ್ತು. ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿತ್ತು.
ಸಂಜೆ ಆಗುತ್ತಿದ್ದಂತೆಯೇ ಮಳೆ ಶುರುವಾಗಿ, ತಂಪಾದ ವಾತಾವರಣ ನಿರ್ಮಾಣವಾಯಿತು. ವರ್ಷದ ಮೊದಲ ಮಳೆ ಇದಾಗಿದ್ದು, ಜನರು ಹರ್ಷದಿಂದ ಮಳೆಯಲ್ಲಿ ನೆನೆದು ಸಂಭ್ರಮಿಸಿದರು. ಇನ್ನೂ ಕೆಲವರು ಕಛೇರಿ ಕೆಲಸ ಮುಗಿದು ಮನೆಗೆ ತೆರಳಲು ಪರಿತಪಿಸುವಂತಾಯಿತು.
ಒಟ್ಟಾರೆ ಭಾರೀ ಗುಡುಗು, ಗಾಳಿ, ಸಹಿತ ಮಳೆಯಿಂದ, ಕಾವೇರಿದ್ದ ಬೇಸಿಗೆಯ ಬಿಸಿಗೆ ಮಳೆ ಸುರಿದು ವಾತಾವರಣ ತಂಪೇರೆತು.