ರಾಮನಾಥಪುರ – ಮನುಷ್ಯ ಬದುಕಿನಲ್ಲಿ ನಿರ್ದಿಷ್ಟವಾದ ಗುರಿಹೊಂದಿ ಸಾಗಬೇಕಾದರೆ ಸಾಕಷ್ಟು ಅಡೆತಡೆಗಳು ಸಹಜ. ಬರುವ ಅಡೆತಡೆಗಳನ್ನು ಮೀರಬೇಕಾದರೇ ಭಗವಂತನ ಸ್ಮರಣೆಯೊಂದಿಗೆ ಪ್ರಮಾಣಿಕವಾದ ಶ್ರಮದಿಂದ ಮಾತ್ರ ಗುರಿಮುಟ್ಟಲು ಸಾಧ್ಯ ಎಂದು ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಹೇಳಿದರು.

ರಾಮನಾಥಪುರ ಸಮೀಪವಿರುವ ವಿ.ಜಿ. ಕೊಪ್ಪಲು ಗ್ರಾಮದಿಂದ ನಂದಿಗೌಡನಕೊಪ್ಪಲು ಗ್ರಾಮದ ಮೂಲಕ ಅತ್ತಿಮರದಕೊಪ್ಪಲು ಗ್ರಾಮಕ್ಕೆ ಪೂರ್ಣ ಕುಂಭ ಕಳಸಗಳೊಂದಿಗೆ ವೀರಗಾಸ್ಯೆ, ಕೀಲುಕುದುರೆ, ಡೊಳ್ಳುಕುಣಿತ, ಮಂಗಳವಾದ್ಯ ವೈಭವಗಳೊಂದಿಗೆ ಪರಮಪೂಜ್ಯ ಡಾ. ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಜಿಯವರ ಭವ್ಯ ಮೆರವಣಿಗೆ ಮೂಲಕ ಗ್ರಾಮದ ಪುರ ಪ್ರವೇಶದ ನಂತರ ತಾಲ್ಲೂಕು ಮಟ್ಟದ ಶ್ರೀ ಭಗೀರತ ಮಹರ್ಷಿ ಜಯಂತಿ ಹಾಗೂ ಶ್ರೀ ಭಗೀರತ ಮಹರ್ಷಿ ಜಂಚಿನ ಪ್ರತಿಮೆ ಅನಾವರಣ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಭವ್ಯ ಭಾರತವನ್ನುಬಲಿಷ್ಟವಾಗಿ ನಿರ್ಮಿಸಲು ವಿದ್ಯಾರ್ಥಿಳಿಗೆ ಶಿಕ್ಷಣದ ಜೊತೆಯಲ್ಲಿ ಪೋಷಕರು ಸಂಸ್ಕಾರದ ಶಿಕ್ಷಣ ನೀಡಬೇಕು, ಹಾಗೂ ಭಗೀರತರು ನಿಮಗೆ ಅಲ್ಲ ಎಲ್ಲರಿಗೂ ಧರೆಯಿಂದ ನೀರು ಕೊಡಿಸಿದವರು ಎಂದು ಅವರು ತಾಲ್ಲೂಕು ಮಟ್ಟದಲ್ಲಿ ಉಪಾರಸಮುದಾಯಕ್ಕೆ ಒಂದು ನಿವೇಶನ ನೀಡಲಾಗುವುದು. ಅದಕ್ಕೆ ತಗಲುವ ಸರ್ಕಾರದ ಹಣ ಕಟ್ಟಿಸಿಕೊಂಡು ಕೊಡುವಂತೆ ತಹಸಿಲ್ದಾರ್ ಕೆ.ಸಿ. ಸೌಮ್ಯ ಅವರಿಗೆ ಎ. ಮಂಜು ಮನವಿ ಮಾಡಿದರು.

ಚಿನ್ಮೂಲಾದ್ರಿ ಶಿಲಾಪುರಿ ಸೂರ್ಯಸಿಂಹಾಸನ ಭಗೀರಥ ಗುರುಪೀಠ ಬ್ರಹ್ಮ ವಿದ್ಯಾನಗರ ಮದುರೆ ಹೊಸದುರ್ಗದ ಪರಮಪೂಜ್ಯ ಜಗದ್ಗುರು ಡಾ. ಶ್ರೀಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಅಶಿರ್ವಚನ ನೀಡಿದ ಅವರು ಭಾರತದ ಪುಣ್ಯನೆಲದಲ್ಲಿ ಪುರಾತನ ಕಾಲದಿಂದಲೂ ನಮ್ಮ ಸಂಸ್ಕೃತಿ ಅಧ್ಯಾತ್ಮಿಕತೆ ಪರಂಪರೆಯನ್ನು ಉಳಿಸಿ ಬೆಳಸುವಲ್ಲಿ ಮಹನ್ ಪುರುಷರು ಜನಿಸಿರುವುದು ನಮ್ಮೆಲ್ಲರ ಪುಣ್ಯ ಎಂದ ಅವರು ಮುಂದಿನ ಮಕ್ಕಳ ಬವಿಷ್ಯಕ್ಕೆ ಮಠ ಮಾನ್ಯಗಳಿಗೆ ಅರ್ಥಿಕವಾಗಿ ಸಮಯ ಮಾಡಿ ಎಂದು ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮದ ಅಧ್ಯಕ್ಷರು ಶ್ರೀ ಭರಮಣ್ಣ ಲಕ್ಷ್ಮಣ ಉಪ್ಪಾರ್ , ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷರು ಶ್ರೀ ಎಚ್.ಎನ್. ವಿಜಯ್: ರಾಜ್ಯದ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ.ಸಿ.ವೆಂಕೋಬರವರು, ,ಭಗೀರತ ಉಡಪ್ಪಾರ ಸಮಾಜದ ಅಧ್ಯಕ್ಷರು ಎಚ್.ಸಿ. ವೆಂಕಟೇಶ್, ಚಲನಚಿತ್ರ ನಿರ್ಮಾಪರು ಕೆ.ಅರ್. ಹೊಯ್ಸಳ, ಚಿಕ್ಕಮಂಗಳೂರು ಡಿ.ವೈ.ಎಸ್.ಪಿ. ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಜಿ.ಎಸ್.ಟಿ. ಅಡಿಲು ನ್ಯಾಯದೀಕರಣ ತಾಂತ್ರಿಕಾ ಸದಸ್ಯರು ಬೆಂಗಳೂರು ಜಗನ್ನಾಥಸಾಗರರವರು, ಅರಕಲಗೂಡು ಸರ್ಕಲ್ ಇನ್ಸ್ ಪೆಕ್ಷರ್ ವಸಂತ್ ಕುಮಾರ್, ತಾಲ್ಲೂಕು ಎಸ್.ಪಿ. ಅಫೀಸ್ ಶ್ರೀ ಪ್ರಕಾಶ್, ತಾಲ್ಲೂಕು ದಂಡಾಧಿಕಾರಿ ಕೆ.ಸಿ.ಸೌಮ್ಯ, ಕೊಣನೂರು ಪಿ.ಎಸ್.ಐ. ಶ್ರೀ ಮರಿಯಪ್ಪ, ಅರ್. ಬ್ಯಾಳಿರವರು, ಮುಂತಾದ ಗ್ರಾಮಸ್ಥರು ಭಾಗವಹಿಸಿದ್ದರು.
ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
