ಚನ್ನರಾಯಪಟ್ಟಣ: ಟಿಎಪಿಸಿಎಂಎಸ್ ಆವರಣದಲ್ಲಿ 24*7 ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣ ರವರು ನೆರವೇರಿಸಿದರು. ಶಾಸಕರಾದ ಸಿ ಎನ್ ಬಾಲಕೃಷ್ಣ ಮಾತನಾಡಿ ಸುಮಾರು ಐದೂವರೆ ಲಕ್ಷದ ವೆಚ್ಚದಲ್ಲಿ ಶುದ್ಧ ನೀರು ಘಟಕವನ್ನು ಈ ದಿನ ಲೋಕಾರ್ಪಣೆ ಮಾಡಲಾಗಿದೆ ಎಂದರು.

ಶುದ್ಧ ಕುಡಿಯುವ ನೀರನ್ನು ಎಲ್ಲಾ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಟಿಎಪಿಸಿಎಂಎಸ್ ನ ಆವರಣದಲ್ಲಿ ಸಿಮೆಂಟ್ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ, ಎಟಿಎಂ ಕೇಂದ್ರವನ್ನು ಸಹ ತೆರೆಯಲಾಗಿದೆ, ಕಳೆದ ವರ್ಷ ಮೂರುವರೆ ಕೋಟಿ ವಹಿವಾಟು ವ್ಯವಹಾರ ನಡೆದಿದೆ.ಅದೇ ರೀತಿ ಪ್ರತಿ ವರ್ಷ 18 ಲಕ್ಷ ಬಾಡಿಗೆ ಬರುವಂತೆ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು. ನೂತನ ಆಡಳಿತ ಮಂಡಳಿಯೂ ಸೊಸೈಟಿಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು.
ಕರ್ನಾಟಕ ಸಹಕಾರ ಮಾರಾಟ ಮಂಡಳಿ ವತಿಯಿಂದ ನಮ್ಮ ತಾಲೂಕಿಗೆ ಒಂದು ಕೋಟಿಗೂ ಹೆಚ್ಚು ಸಹಾಯಧನವನ್ನು ಕೊಡಿಸುವಲ್ಲಿ ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕರಾದ ಸಿ ಎನ್ ಪುಟ್ಟಸ್ವಾಮಿಗೌಡ ಪಾಲು ಬಹು ದೊಡ್ಡದಿದೆ ಎಂದು ತಿಳಿಸಿದರು. ಟಿಎಪಿಸಿಎಂಎಸ್ನ ಆವರಣದಲ್ಲಿ ಉಚಿತವಾಗಿ ಬೋರನ್ನು ಕೊರಸಿಕೊಟ್ಟ ಯಾಚನಹಳ್ಳಿ ಜಯಣ್ಣನವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಸಕರಾದ ಸಿ ಎನ್ ಬಾಲಕೃಷ್ಣ, ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕರಾದ ಸಿ ಎನ್ ಪುಟ್ಟಸ್ವಾಮಿಗೌಡ, ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷರಾದ ಮೆಡಿಕಲ್ ವೆಂಕಟೇಶ್,ಉಪಾಧ್ಯಕ್ಷರಾದ ತಾರಾಮಣಿ, ನಿರ್ದೇಶಕರಾದ ಕುಂಬಾರಹಳ್ಳಿ ರಮೇಶ್, ಅನಿಲ್ ಮರಗೂರು, ಶ್ರೀಮತಿ ಮಮತಾ ಜಯಣ್ಣ, ತೋಟಿ ನಾಗಣ್ಣ, ಬೋರೇಗೌಡ, ನಂಜುಂಡೇಗೌಡ, ನೆಟ್ಟಕೆರೆ ನಾಗರಾಜ್, ಕೆ ಆರ್ ರವಿಕುಮಾರ್, ಉಮೇಶ್, ಟಿಎಪಿಸಿಎಂಎಸ್ ಕಾರ್ಯದರ್ಶಿಯಾದ ಶ್ರೀಮತಿ ಸಂಧ್ಯಾಸಂತೋಷ್, ಸಹಕಾರ ಅಧಿಕಾರಿ ವಿಜಯೇಂದ್ರ, ಸೊಸೈಟಿ ನೌಕರರಾದ ಬಾಗೂರುಸತೀಶ್, ಜಯಸೂರ್ಯ, ಜಯಪಾಲ, ತ್ರಿವೇಣಿ ಸೇರಿದಂತೆ ಇತರರು ಹಾಜರಿದ್ದರು.
ವರದಿ : ಐ ಕೆ ಮಂಜುನಾಥ್
