
ಹಾಸನ: ಬೇಲೂರಿನಲ್ಲಿ ಪಾಳು ಬಿದ್ದಿದ್ದ ಕಟ್ಟಡದ ಸಜ್ಜಾ ಕುಸಿದು ತೀವ್ರ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೇ ಸಾ*ವಿಗೀಡಾಗಿದ್ದಾರೆ.
ಬೇಲೂರು ಪಟ್ಟಣದ ಹೊಸನಗರ ನಿವಾಸಿ ಜ್ಯೋತಿ (45) ಮೃ*ತ ಮಹಿಳೆ . ದುರಂತದಲ್ಲಿ ಗಾಯಗೊಂಡಿದ್ದ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವಿಗೀಡಾಗಿದ್ದಾರೆ. ಈ ಮೂಲಕ ದುರ್ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಕುಸಿದ ಕಟ್ಟಡದ ಕೆಳಗೆ ಮಹಿಳೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಇನ್ನೂ ಕೆಲವು ತಿಂಗಳ ಹಿಂದೆ ಜ್ಯೋತಿಯವರ ಪತಿ ಗೋಪಿ ಸಹ ಸಾವನ್ನಪ್ಪಿದ್ದರು. ಇದರಿಂದ ಇಬ್ಬರು ಹೆಣ್ಣುಮಕ್ಕಳು ಅನಾಥರಾಗಿದ್ದಾರೆ.
ಮಾ.9 ರಂದು ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರಿದ್ದ ಪಾಳು ಬಿದ್ದಿದ್ದ ಕಟ್ಟಡ ಕುಸಿದಿತ್ತು. ಈ ವೇಳೆ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದರು.