ನವದೆಹಲಿ, ಮೇ 21: ದೇಶದಲ್ಲಿ ಪೌಷ್ಟಿಕಾಂಶ ಕೊರತೆ ಹಾಗೂ ಜೀವನಶೈಲಿ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ “SEHAT” ಮಿಷನ್ನ್ನು ಆರಂಭಿಸಿದೆ. Science Excellence for Health through Agrarian Transformation (SEHAT) ಎಂಬ ಹೆಸರಿನ ಈ ಮಹತ್ವಾಕಾಂಕ್ಷಿ ಯೋಜನೆ ಕೃಷಿ, ಪೌಷ್ಟಿಕಾಂಶ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಗಳನ್ನು ಒಟ್ಟುಗೂಡಿಸುವ ವಿಶಿಷ್ಟ ಉಪಕ್ರಮವಾಗಿದೆ.
ಜನರು ಸೇವಿಸುವ ದೈನಂದಿನ ಆಹಾರ ಮತ್ತು ಕೃಷಿ ಪದ್ಧತಿಗಳ ಮೂಲಕವೇ ಅಗತ್ಯ ಪೋಷಕಾಂಶಗಳನ್ನು ಒದಗಿಸಿ, ದೇಶದ ಆರೋಗ್ಯ ವ್ಯವಸ್ಥೆಯನ್ನು ರೋಗ ಚಿಕಿತ್ಸೆಯಿಂದ ತಡೆಗಟ್ಟುವ ಆರೋಗ್ಯ ಮಾದರಿಯತ್ತ ಪರಿವರ್ತಿಸುವುದು ಈ ಮಿಷನ್ನ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯನ್ನು ಹಾಗೂ ಜಂಟಿಯಾಗಿ ಆರಂಭಿಸಿವೆ.
ದೇಶದಲ್ಲಿ ಹೆಚ್ಚುತ್ತಿರುವ ಪೌಷ್ಟಿಕಾಂಶ ಕೊರತೆ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕೃಷಿ ಆಧಾರಿತ ನೈಸರ್ಗಿಕ ಪರಿಹಾರಗಳನ್ನು ಕಂಡುಹಿಡಿಯುವತ್ತ ಈ ಯೋಜನೆ ಕಾರ್ಯನಿರ್ವಹಿಸಲಿದೆ. ಪೌಷ್ಟಿಕಾಂಶಯುಕ್ತ ಬೆಳೆಗಳ ಉತ್ತೇಜನ, ಆರೋಗ್ಯಕರ ಆಹಾರ ಪದ್ಧತಿ ಕುರಿತು ಜಾಗೃತಿ ಹಾಗೂ ವೈಜ್ಞಾನಿಕ ಸಂಶೋಧನೆಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
ತಜ್ಞರ ಅಭಿಪ್ರಾಯದಂತೆ, “SEHAT” ಮಿಷನ್ ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳ ನಡುವೆ ಸಮನ್ವಯ ಬೆಳೆಸಿ, ದೇಶದ ಜನರ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರವಹಿಸುವ ನಿರೀಕ್ಷೆಯಿದೆ.
