ಕೆ.ಆರ್.ಪೇಟೆ,ಮೇ.30: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಿ.ಟಿ.ಪುಲಿಗೇರಯ್ಯ ಅವರಿಗೆ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸುಮಾರು 20ವರ್ಷಗಳಿಂದ ಪಟ್ಟಣದ ಕೆಪಿಎಸ್ ಶಾಲೆಯ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಕಳೆದ 20ವರ್ಷಗಳಿಂದ ಉಪನ್ಯಾಸಕರಾಗಿ, ನಂತರ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುವ ಮೂಲಕ ಉತ್ತಮ ಹೆಸರು ಗಳಿಸಿರುವ ಡಿ.ಟಿ.ಪುಲಿಗೇರಯ್ಯ ಅವರು ಇಂದು ವಯೋ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಎ.ಸಿ.ಕಾಂತರಾಜು, ಮೈಸೂರು ಜಿಲ್ಲಾಧ್ಯಕ್ಷ ಸಮೀರ್, ತಾಲ್ಲೂಕು ಅಧ್ಯಕ್ಷ ಕಿರಣ್ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲ ಡಿ.ಟಿ.ಪುಲಿಗೇರಯ್ಯ ಅವರು ಸರ್ಕಾರಿ ಕೆಲಸ ಎಂದ ಮೇಲೆ ವರ್ಗಾವಣೆ ಆಗುವುದು, ನಿವೃತ್ತಿ ಆಗುವುದು ಸರ್ವೇ ಸಾಮಾನ್ಯವಾಗಿದೆ. ಇಂದು ನಾನು ನಿವೃತ್ತಿಗೊಂಡಿದ್ದೇನೆ, ಆದುದರಿಂದ ನನಗೆ ಸನ್ಮಾನಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ತುರುವೇಕೆರೆ ತಾಲ್ಲೂಕಿನ ನನ್ನನ್ನು ಕೆ.ಆರ್.ಪೇಟೆ ತಾಲ್ಲೂಕಿನ ಜನತೆ ತಮ್ಮ ಮನೆ ಮಗನಂತೆ ಕಳೆದ 20ವರ್ಷಗಳಿಂದ ಪ್ರೀತಿಯಿಂದ ನೋಡಿಕೊಂಡಿರುವ ಇಲ್ಲಿನ ಸ್ನೇಹಿತರು, ಸಹಪಾಠಿಗಳು, ವಿವಿಧ ಸಂಘ ಸಂಸ್ಥೆಗಳ ಸಹಕಾರವನ್ನು ನಾನು ನನ್ನ ಕೊನೆಯ ಉಸಿರು ಇರುವವರೆವಿಗೂ ಮರೆಯುವುದಿಲ್ಲ. ನನ್ನದೊಂದು ಕೋರಿಕೆ ಇದೆ ಅದೇನೆಂದರೆ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಿಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳನ್ನು ಉಳಿಸಿ ಬೆಳೆಸಲು ಸಹಕರಿಸಬೇಕು ಕೈಮುಗಿದು ಮನವಿ ಮಾಡಿದರು. ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ನೂರಾರು ವಿದ್ಯಾರ್ಥಿಗಳು ಮೆಡಿಕಲ್, ಹಾಗೂ ಇಂಜನಿಯರಿAಗ್ ಈಗ ಉನ್ನತ ಹುದ್ದೆಯಲ್ಲಿರುವುದು ನನಗೆ ಸಂತಸ ತಂದಿದೆ. ನನ್ನ ಸೇವೆಯನ್ನು ಸ್ಮರಿಸಿ ನನಗೆ ಅಭಿನಂದಿಸಿರುವುದಕ್ಕೆ ನಾನು ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನನ್ನ ಸೇವಾ ಅವಧಿಯಲ್ಲಿ ಯಾರಿಗಾದರೂ ನೋವುಂಟಾಗುವAತೆ ನಡೆದುಕೊಂಡಿದ್ದರೆ ದಯಮಾಡಿ ಕ್ಷಮಿಸಿ ಎಂದು ಭಾವುಕರಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ರಾಜ್ಯ ಘಟಕದ ಕಾನೂನು ಸಲಹೆಗಾರರಾದ ಆರ್.ಎಂ.ದೇವನAದ್ ಮಾತನಾಡಿ ನಿವೃತ್ತಿಯಾದ ನಮ್ಮ ಸ್ನೇಹಿತರಾದ ಡಿ.ಟಿ.ಪುಲಿಗೇರಯ್ಯ ರವರ ಮುಂದಿನ ನಿವೃತ್ತಿ ಜೀವನ ಸುಖಕರವಾಗಿರಲಿ ಅವರು ಎಲ್ಲರೊಡನೆ ಸ್ನೇಹಜೀವಿಯಾಗಿ ವರ್ತಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಕೆ.ಆರ್.ಪುಟ್ಟಸ್ವಾಮಿ, ತಾಲ್ಲೂಕು ಕರವೇ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ವಿ.ಕಿರಣ್, ಕರವೇ ಸ್ವಾಭಿಮಾನಿ ಸೇನೆಯ ರಾಜ್ಯ ಘಟಕದ ಕಾನೂನು ಸಲಹೆಗಾರ ಆರ್.ಎಂ.ದೇವನಂದ್, ತಾಲ್ಲೂಕು ಆಟೋ ಘಟಕದ ಅಧ್ಯಕ್ಷ ಕೆ.ಎನ್.ವಾಸುದೇವ್, ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಅಮ್ಜದ್, ದಯಾನಂದರಾವ್, ಟೈಲರ್ ಸುಬ್ಬಣ್ಣ, ಅಜ್ಜು, ಸಂತೇಬಾಚಹಳ್ಳಿ ಮಂಜುನಾಥ್, ಸಿ.ಎಸ್.ಗುರುಪ್ರಸಾದ್, ಕೆ.ಪಿ.ಮಂಜುನಾಥ್, ಮುರುಕನಹಳ್ಳಿ ಕಿರಣ್, ನಾಗರಾಜು, ವರದಣ್ಣ, ಲವಣ್ಣ, ಲೋಹಿತ್ ಮತ್ತಿತರರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.
