
ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹವರ್ತಿ ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆದುಕೊಂಡು ಬರಲು ನಾಸಾ ಮತ್ತು ಸ್ಪೇಸ್ಎಕ್ಸ್ ಬಹುನಿರೀಕ್ಷಿತ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ.
ಈಗಾಗಲೇ ಈ ಕಾರ್ಯಚರಣೆಯನ್ನು ಆರಂಭಿಸಿದ್ದು ಅವರನ್ನು ತಲುಪು ಪ್ರಯತ್ನವನ್ನು ಮಾಡಿದೆ. ಒಂದು ವೇಳೆ ಅವರನ್ನು ಯಶಸ್ವಿಯಾಗಿ ತಲುಪಿದರೆ, ಮಾರ್ಚ್ 20ರಂದು ಭೂಮಿಗೆ ಬರಲಿದ್ದಾರೆ ಎಂದು ಹೇಳಲಾಗಿದೆ.
ಅಂತರರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಭಾರೀ ಸದ್ದು ಮಾಡಿದ್ದ ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹವರ್ತಿ ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆದುಕೊಂಡು ಬರಲು ನಾಸಾ ಮತ್ತು ಸ್ಪೇಸ್ಎಕ್ಸ್ ಶುಕ್ರವಾರ ಬಹುನಿರೀಕ್ಷಿತ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ. ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ನ್ನು ಈ ಕಾರ್ಯಚರಣೆಯಲ್ಲಿ ಉಪಯೋಗಿಸಲಾಗಿದೆ. ಬೋಯಿಂಗ್ನ ಸ್ಟಾರ್ಲೈನರ್ ಸಮಸ್ಯೆಗಳಿಂದಾಗಿ ಒಂಬತ್ತು ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆತರಲು ನಾಸಾ ಮತ್ತು ಸ್ಪೇಸ್ಎಕ್ಸ್ ಶುಕ್ರವಾರ ಸಂಜೆ 7:03 ಕ್ಕೆ EDT (ಶನಿವಾರ ಬೆಳಿಗ್ಗೆ 4:30 ಕ್ಕೆ IST) ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಕ್ರೂ-10 ಮಿಷನ್ ಅನ್ನು ಪ್ರಾರಂಭಿಸಿದೆ.
ಕ್ರೂ-10 ಕಾರ್ಯಾಚರಣೆಯಲ್ಲಿ ಫಾಲ್ಕನ್ 9 ರಾಕೆಟ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಹೊತ್ತೊಯ್ದಿತು.ಈ ಕಾರ್ಯಾಚರಣೆಯು ನಾಲ್ಕು ಸಿಬ್ಬಂದಿಯನ್ನು ISS ಗೆ ಕಳುಹಿಸಿತು. ನಾಸಾ ಗಗನಯಾತ್ರಿಗಳಾದ ಆನ್ ಮೆಕ್ಕ್ಲೇನ್ ಮತ್ತು ನಿಕೋಲ್ ಅಯರ್ಸ್, JAXA (ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಏಜೆನ್ಸಿ) ಗಗನಯಾತ್ರಿ ಟಕುಯಾ ಒನಿಶಿ ಮತ್ತು ರೋಸ್ಕೋಸ್ಮೋಸ್ ಗಗನಯಾತ್ರಿ ಕಿರಿಲ್ ಪೆಸ್ಕೋವ್ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಯಿತು.
ಸ್ಪೇಸ್ಎಕ್ಸ್ನ ಮಾನವ ಬಾಹ್ಯಾಕಾಶ ಸಾರಿಗೆ ವ್ಯವಸ್ಥೆಯಡಿಯಲ್ಲಿ ಕ್ರೂ-10 10ನೇ ಸಿಬ್ಬಂದಿ ಸಂಪೂರ್ಣ ಕಾರ್ಯಾಚರಣೆಯಾಗಿದೆ ಮತ್ತು ಡೆಮೊ-2 ಪರೀಕ್ಷಾ ಹಾರಾಟ ಸೇರಿದಂತೆ ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಚರಣೆ ಮೂಲಕ ISS ನಿಲ್ದಾಣಕ್ಕೆ ಸಿಬ್ಬಂದಿಯೊಂದಿಗೆ 11ನೇ ಹಾರಾಟವಾಗಿದೆ. ಕಳೆದ ವರ್ಷ ಜೂನ್ನಲ್ಲಿ ಐಎಸ್ಎಸ್ಗೆ ತಲುಪಿದ ನಂತರ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಒಂಬತ್ತು ತಿಂಗಳ ಕಾಲ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಅವರು ಸುಮಾರು ಒಂದು ವಾರ ಅಲ್ಲಿಯೇ ಇರಬೇಕಿತ್ತು.