ಕೆ.ಆರ್.ಪೇಟೆ,ಜೂ.13: ಪಟ್ಟಣದ 116 ವರ್ಷಗಳ ಇತಿಹಾಸವಿರುವ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿಧ್ಯಾರ್ಥಿಗಳು ಹಾಗೂ ಪೋಷಕರಿಂದ ಬಲವಂತವಾಗಿ ಹಣ ವಸೂಲಿ ಮಾಡಲಾಗುತ್ತಿದೆ.
1ರಿಂದ 10ನೇ ತರಗತಿವರೆಗೆ ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದೆ. ಆದರೆ ಶಾಲೆಯ ಎಸ್.ಡಿ.ಎಂ.ಸಿ. ಆಡಳಿತ ಮಂಡಳಿಯು ಉಚಿತ ಶಿಕ್ಷಣ ನೀಡುವ ಬದಲು ತಲಾ ವಿದ್ಯಾರ್ಥಿಯಿಂದ 1ಸಾವಿರ ರೂಪಾಯಿ ವಸೂಲಿ ಮಾಡುತ್ತಿರುವುದನ್ನು ವಿರೋಧಿ ತಾಲ್ಲೂಕು ಜಯಕರ್ನಾಟಕ ಸಂಘಟನೆ, ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ, ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು, ಫುಟ್ ಪಾತ್ ವ್ಯಾಪಾರಿಗಳು, ಮೆಡಿಕಲ್ ಶಾಪ್ ಗಳು ಸೇರಿದಂತೆ ವರ್ತರಕರು ಹಾಗೂ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು.

ಶೂ..ಪಾಲೀಸ್: ಜೊತೆಗೆ ಶೂ.. ಪಾಲೀಸ್ ಮಾಡಿ ಕೊಡುವ ಹಣ ಸಂಗ್ರಹಿಸಿ ಕೆಪಿಎಸ್ ಶಾಲೆಯ ಖಾತೆಗೆ ಜಮಾ ಮಾಡಲು ನಿರ್ಧಾರ ಕೈಗೊಂಡರು. ಬಲವಂತವಾಗಿ ಪೋಷಕರಿಂದ ಹಣ ವಸೂಲಿ ನಿಲ್ಲಿಸಬೇಕು. ಸ್ವಯಂಪ್ರೇರಿತವಾಗಿ ಕೊಡುವವರಿಂದ ಪಡೆದುಕೊಂಡರೆ ನಮ್ಮದೇನು ಅಭ್ಯಂತರವಿಲ್ಲ ಎಂದು ತಿಳಿಸಿದರು.
ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ತಾಲ್ಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಹೆಚ್.ಆರ್.ಸೋಮಶೇಖರ್, ತಾಲ್ಲೂಕು ಕಾರ್ಯಾಧ್ಯಕ್ಷ ಅನುವಿನಕಟ್ಟೆ ಆನಂದ್, ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಎ.ಸಿ.ಕಾಂತರಾಜು, ತಾಲ್ಲೂಕು ಅಧ್ಯಕ್ಷ ವಿ.ಕಿರಣ್, ಮೈಸೂರು ಜಿಲ್ಲಾಧ್ಯಕ್ಷ ಸಮೀರ್, ಕೆ.ಆರ್.ಎಸ್.ಪಕ್ಷದ ಟಾಕೀಸ್ ಶ್ರೀನಿವಾಸ್, ನಾಗರಾಜು, ಸಾಮಾಜಿಕ ಹೋರಾಟಗಾರ ಹೆಚ್.ಬಿ.ಮಂಜುನಾಥ್, ಆಟ್ಸ್ ಮುರುಗೇಶ್, ಜಯಕರ್ನಾಟಕ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ, ಮಂಜುಳಾ, ಶಾರದಮ್ಮ ಸೇರಿದಂತೆ ಹಲವು ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
