ಬೆಂಗಳೂರು, ಜೂನ್ 24: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಜೂನ್ 28ರಂದು ಭಾನುವಾರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ರಾಜ್ಯ ಮಟ್ಟದ ಜಾನಪದ ಸಮ್ಮೇಳನ-2026 ಆಯೋಜಿಸಲಾಗಿದೆ.
ಹಿರಿಯ ಸಾಹಿತಿ, ಕವಿ, ಕಥೆಗಾರ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಸಾ.ಮ. ಶಿವಮಲ್ಲಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಸಾಂಸ್ಕೃತಿಕ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಅವರು ಶಿವಮಲ್ಲಯ್ಯ ಅವರ ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಸಾಹಿತಿ ಆಗುಂಬೆ ನಟರಾಜ್, ಕವಯಿತ್ರಿ ಆಶಾ ಶಿವುಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಮತಿ ಗುಣಸಾಗರಿ ಸಿ. ನಾಗರಾಜ್ ಅವರ ಶ್ರೀ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಯನ್ನು ಸಾ.ಮ. ಶಿವಮಲ್ಲಯ್ಯ, ಮಹಾಂತೇಶ್ ನಿಟ್ಟೂರು, ಎಂ.ಜೆ. ಗಿರೀಗೌಡ, ನಾಗರತ್ನ ಹಿರೇಮಠ್, ಸಿ. ಪುಟ್ಟಸ್ವಾಮಿ, ಸಾತನೂರು ಮಾಯಣ್ಣ, ಸ. ಶಿವರಾಮು, ಯು.ಸಿ. ಚನ್ನೇಗೌಡ ಹಾಗೂ ಭೀಮಣ್ಣ ಪೂಜಾರಿ ಸೇರಿದಂತೆ ಒಂಬತ್ತು ಮಂದಿ ಸಾಧಕರಿಗೆ ಪ್ರದಾನ ಮಾಡಲಾಗುವುದು.
ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಎಸ್.ಜಿ. ಸುಶೀಲಮ್ಮ ಅವರು ಶ್ರೀಮತಿ ರೇಣುಕಾ ಎನ್. ನಾಗಪ್ರಿಯ ಅವರ ಶ್ರೀ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಯನ್ನು ನಿಡಸಾಲೆ ಪುಟ್ಟಸ್ವಾಮಯ್ಯ, ಎಂ. ಕಾಂತಮ್ಮ, ಉಮೇಶ್ ಚಂದ್ರ, ಬಿಜೆಜಿ ಸತ್ಯಶ್ರೀ, ಮಂಡಿಬೆಲೆ ರಾಜಣ್ಣ, ಬಲವಂತ ಸಿದ್ಧಪ್ಪ ಮೋರಟಗಿ, ಅಂಜಲಿ ಬೆಳಗಲ್, ಗೀತಾ ವಿಜಯ ಸಮರ್ಥ, ಹನುಮಂತರಾಜು, ಬಿ.ಎಂ. ನಾರಾಯಣಸ್ವಾಮಿ ಹಾಗೂ ವಿಜಯಕುಮಾರ್ ಶಾಸ್ತ್ರೀಮಠ್ ಸೇರಿದಂತೆ 11 ಮಂದಿ ಸಾಧಕರಿಗೆ ಪ್ರದಾನಿಸಲಿದ್ದಾರೆ.
ವಿಶ್ರಾಂತ ಕುಲಪತಿ ಹಾಗೂ ಜಾನಪದ ಲೋಕದ ಅಧ್ಯಕ್ಷ ಡಾ. ಹಿ.ಚಿ. ಬೋರಲಿಂಗಯ್ಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿಗಳಾದ ಎಂ.ವಿ. ಶಿವಪ್ರಸಾದ್ ಹಾಗೂ ಕೆ.ಎಂ. ರೇವಣ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮ್ಮೇಳನದ ಅಂಗವಾಗಿ ವಿಚಾರ ಸಂಕಿರಣ, ಕವಿಗೋಷ್ಠಿ, ಜಾನಪದ ಗೀತಗಾಯನ, ಸೋಬಾನೆ ಪದಗಳು, ನೃತ್ಯ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಚಿಂತಕರಾದ ಸಚಿನ್ ನಾರಾಯಣ್ ಹಾಗೂ ಡಾ. ಜಿ.ಎನ್. ವಿಶ್ವಾರಾಧ್ಯ ವಿಚಾರ ಮಂಡನೆ ಮಾಡಲಿದ್ದಾರೆ.
ಬೆಳಿಗ್ಗೆ ಧ್ವಜಾರೋಹಣವನ್ನು ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ವಿ. ರೇಣುಕಾ ಪ್ರಸನ್ನ ನೆರವೇರಿಸಲಿದ್ದು, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ನೆಲಮಂಗಲ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಬಿ.ಆರ್. ಪ್ರದೀಪ್ ಕುಮಾರ್ ಉದ್ಘಾಟಿಸಲಿದ್ದಾರೆ.
ಸಾಹಿತ್ಯ ಮತ್ತು ಸಂಸ್ಕೃತಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಸಂಸ್ಥೆಯ ಕಾರ್ಯದರ್ಶಿ ಸಿ. ಹೇಮಾವತಿ ಸಿಸಿರಾ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
