ಕರ್ಮದ ಕೋಲು ಬಿಡದು ನಿನ್ನ
ನೀ ಮಾಡಿದ ಧರ್ಮ-ಅಧರ್ಮಕ್ಕೆ
ಪ್ರತಿಫಲವುಂಟು ನೀ ಸಾಯುವ ಮುನ್ನ
ನೊಂದವರ ನಿಟ್ಟುಸಿರು
ನೋವುಂಡವರ ಕಣ್ಣೀರು
ಎಲ್ಲದಕ್ಕೂ ಕಾಲವೇ ಉತ್ತರ
ಕರ್ಮದ ಕೋಲು ದಂಡಿಸದೆ ಬಿಡದು ನಿನ್ನ
ನೀ ಮಾಡಿದ ಪಾಪ-ಪುಣ್ಯಕೆ
ಇಲ್ಲಿ ಲೆಕ್ಕವುಂಟು
ಸಜ್ಜನರಿಗೆ ನಾಕ
ದುರ್ಜನರಿಗೆ ನರಕ
ಎಲ್ಲವೂ ಇಲ್ಲಿಯೇ
ಇರಲಿ ಸಕಲರಲ್ಲಿ ದಯೇ
ಆತ್ಮಸಾಕ್ಷಿಗಿಂತ ಉತ್ತಮ ಸ್ನೇಹಿತನಿಲ್ಲ
ಇನ್ನೊಬ್ಬರ ಮೆಚ್ಚಿಸುವ ಕಾರ್ಯ ಬೇಕಿಲ್ಲ
ಪರರ ಚಿಂತೆ ಮಾಡದೆ
ಸತ್ಕಾರ್ಯವ ಮಾಡು
ಅರಿಯರು ಯಾರು ಬಾಳಿನ ಮರ್ಮ
ನಿನ್ನ ಕೈ ಬಿಡದೆ ಕಾಯುವುದು ಧರ್ವ

- ಈಶ್ವರ್ ಎ.ನಾಟೇಕಾರ್
ಜೇವರ್ಗಿ ಪೋಲೀಸ್ ಠಾಣೆ
– 9591495884
