ತುಮಕೂರು:ಗ್ರಾಮೀಣ ಪ್ರದೇಶದ ಜನರು ಕ್ಯಾನ್ಸರ್ ಗೆ ಹೆದರುವ ಅವಶ್ಯಕತೆ ಇಲ್ಲ,ಎಲ್ಲರೂ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಒಂದು ವೇಳೆ ಕ್ಯಾನ್ಸರ್ ಇದ್ದರೆ ಉತ್ತಮ ವೈದ್ಯರಿಂದ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ನ್ನು ಹೋಗಲಾಡಿಸಬಹುದು, ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ(ರಿ),ಬೆಂಗಳೂರಿನ ಕರ್ನಾಟಕ ಕ್ಯಾನ್ಸರ್ ಸೊಸೈಟಿಯಂತಹ ಎನ್.ಜಿ.ಓಗಳು ಗ್ರಾಮೀಣ ಪ್ರದೇಶಕ್ಕೆ ಬಂದು ಇಲ್ಲಿನ ಜನರ ಮೇಲೆ ವಿಶ್ವಾಸವಿಟ್ಟು ನಿಮ್ಮಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸೇವೆಸಲ್ಲಿಸುತ್ತಿರುವುದು ಶ್ಲಾಘನೀಯ,ಗ್ರಾಮಸ್ಥರು ಎಲ್ಲರೂ ವರ್ಷಕ್ಕೊಮ್ಮೆ ನಿಮ್ಮ ಆರೋಗ್ಯವನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಎಲೆರಾಂಪುರದ ಕುಂಚಿಟಿಗರ ಸಂಸ್ಥಾನ ಮಠದ ಶ್ರೀ ಡಾ||ಹನುಮಂತನಾಥಸ್ವಾಮೀಜಿಗಳು ತಿಳಿಸಿದರು.

ಅವರು ಇಂದು ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ(ರಿ),ಬೆಂಗಳೂರಿನ ಕರ್ನಾಟಕ ಕ್ಯಾನ್ಸರ್ ಸೊಸೈಟಿ ಇವರುಗಳ ಸಹಯೋಗದಲ್ಲಿ ಕೊರಟಗೆರೆ ತಾಲ್ಲೋಕು ಎಲೆರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಕ್ಯಾನ್ಸರ್ ಹಾಗೂ ಗರ್ಭಕೋಶ ತಪಾಸಣಾ ಶಿಬಿರ ಮತ್ತು ವಾಸನ್ ಐ-ಕೇರ್ ರವರಿಂದ ಉಚಿತ ಕಣ್ಣಿನ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊರಟಗೆರೆ ತಹಸೀಲ್ದಾರ್ ಮಂಜುನಾಥ್ ರವರು ಎನ್.ಜಿ.ಓಗಳು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕೆಲಸ ಮಾಡುತ್ತಿದೆ,ಆರೋಗ್ಯವೇ ಭಾಗ್ಯ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು,ಕ್ಯಾನ್ಸರ್ ನ್ನು ನಿರ್ಲಕ್ಷಿಸಬೇಡಿ ಎಲ್ಲರೂ ತಪಾಸಣೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ನಟರಾಜಶೆಟ್ಟರು ಮಾತನಾಡುತ್ತಾ ನಾವೆಲ್ಲರೂ ಹಳ್ಳಿಗಳಿಂದ ಹುಟ್ಟಿ ಬಂದವರು ಹಳ್ಳಿಯ ಜನ,ಇಲ್ಲಿನ ರೈತರು,ಮಹಿಳೆಯರು ವಯೋವೃದ್ದರು ಆದಿಯಾಗಿ ಎಲ್ಲರೂ ಕ್ಯಾನ್ಸರ್,ಕಣ್ಣು ಇತ್ಯಾದಿಗಳನ್ನು ತಜ್ಞ ವೈದ್ಯರುಗಳಿಂದ ತಪಾಸಣೆ ಮಾಡಿಸಿಕೊಂಡು ಉತ್ತಮ ಆರೋಗ್ಯವಂತರಾಗಿ ಬಾಳಿ ಬದುಕಬೇಕು ಎಂದು ಮನವಿ ಮಾಡಿದರು.
ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘದ ಅಧ್ಯಕ್ಷರಾದ ಟಿ.ಎಸ್.ಮೋಹನ್ ಕುಮಾರ್ ಮಾತನಾಡುತ್ತಾ ಹಳ್ಳಿ ಸೇವೆಯೇ ಈಶ ಸೇವೆ,ಹಳ್ಳಿ ಜನರು, ಬಡವರ ಸೇವೆಯೇ ನಮ್ಮ ಎನ್.ಜಿ.ಓ.ದ ಮೂಲಮಂತ್ರ,ಬಡವರು,ಕೂಲಿ ಮಾಡುವವರು ತಮ್ಮ ಅರೋಗ್ಯವನ್ನು ನಿರ್ಲಕ್ಷ್ಯ ಮಾಡಬಾರದು ತಾವು ನಗರಕ್ಕೆ ಬಂದು ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಹಣ,ಸಮಯ,ಉತ್ತಮ ವೈದ್ಯರ ಅಲಭ್ಯತೆ ಅರಿತು ನಾವುಗಳು ಇಂದು ನಮ್ಮ ಎನ್.ಜಿ.ಓ ಮೂಲಕ ನಿಮ್ಮ ಆರೋಗ್ಯವನ್ನು ತಪಾಸಣಾ ಶಿಬಿರವನ್ನು ನಡೆಸುತ್ತಿದ್ದೇವೆ ಎಲ್ಲರೂ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡು ನೆಮ್ಮದಿಯ ಜೀವನ ನಡೆಸಿ ಎಂದು ಕರೆ ನೀಡಿದರು.
ಶ್ರೀಮತಿ ಗೀತಾನಾಗೇಶ್ ರವರು ಪ್ರಾಸ್ತಾವಿಕ ನುಡಿಗಳನ್ನು ನುಡಿದರು,ವೇದಿಕೆಯಲ್ಲಿ ವೆಂಕಟೇಶ್ ಶ್ರೀಮತಿ ಜ್ಯೋತಿಆಚಾರ್ಯ,ಶ್ರೀಮತಿ ಮಂಜುಳಾರಾವ್,ಚೇತನ್,ಭಕ್ತವತ್ಸಲ ಇತರರು ಉಪಸ್ಥಿತರಿದ್ದರು. ರುದ್ರಮೂರ್ತಿಎಲೆರಾಂಪುರ ನಿರೂಪಿಸಿದರು,ಅಭಿಷೇಕ್ ಸ್ವಾಗತಿಸಿದರು
ವರದಿ : ಕೆ ಬಿ ಚಂದ್ರಚೂಡ್
