ಕೆ.ಆರ್.ಪೇಟೆ:ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಮಾರ್ಗೋನಹಳ್ಳಿ ಗ್ರಾಮದ 95 ಎಕರೆ ಗೋಮಾಳ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕೆ.ಆರ್.ಪೇಟೆ ಮಿನಿವಿಧಾನಸೌಧಕ್ಕೆ ಮಾರ್ಗೋನಹಳ್ಳಿ ಗ್ರಾಮಸ್ಥರು ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಧ್ಯಕ್ಷ ಕೆ.ಎಂ ಸಂದೇಶ ಮಾರ್ಗೋನಹಳ್ಳಿ ದಲಿತ ಹಾಗೂ ಹಿಂದುಳಿದ ರೈತ ಜನರ ವಾಸವಿರು ಗ್ರಾಮದ ಸರ್ವೆ ನಂಬರ್ 13 ಮತ್ತು ಹೊಸ ಸರ್ವೆ ನಂಬರ್ 165 ರಲ್ಲಿರುವ ಒಟ್ಟು 95 ಎಕರೆ 13 ಗುಂಟೆ ಗೋಮಾಳ ಭೂಮಿಯನ್ನು ಮಂಡ್ಯ ಮೂಲದ ಡಿ.ರಾಮಲಿಂಗಯ್ಯ ಕುಟುಂಬಸ್ಥರು ಏಕ ಕಾಲದಲ್ಲಿ ಮಂಜೂರು ಮಾಡಿಕೊಂಡಿದ್ದಾರೆ.ನಮ್ಮತ್ರ ಹಣ ಮತ್ತು ರಾಜಕಾರಣಿ ಬಲ ಇದೆ ಎಂದು ದೌರ್ಜನ್ಯದ ಮೂಲಕ ಈ ಭೂಮಿಯನ್ನು ಕಬಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಭೂಮಿ ದಲಿತರು ಮತ್ತು ಹಿಂದುಳಿದ ವರ್ಗದ ರೈತರಿಗೆ ಸೇರಬೇಕಾಗಿತ್ತು.ಈ ಗ್ರಾಮವೇ ಇನಾಮ್ ಗ್ರಾಮವಾಗಿದೆ. ಗ್ರಾಮದಲ್ಲೇ ವಾಸವೇ ಇಲ್ಲದ ಈ ಬಲಾಡ್ಯ ಕುಟುಂಬಕ್ಕೆ ಏಕ ಕಾಲದಲ್ಲಿ ಯಾವ ಮಾನದಂಡದಲ್ಲಿ 95 ಎಕರೆ ಭೂಮಿ ಮಂಜೂರು ಮಾಡಿಕೊಂಡಿದ್ದಾರೆ ಎಂದು ಪ್ರಶ್ನಿಸಿ ಹಿಂದೆ ದೊಡ್ಡ ಸಂಚಿದೆ.ಕೂಡಲೇ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಈ ಸಂಸ್ಕೃತಿ ಬೇಜವಾಬ್ದಾರಿತನ ಮುಂದುವರೆದರೆ ಮುಂದಿನ ದಿನಗಳಲ್ಲಿ ನಾವು ಉಗ್ರ ಹೋರಾಟ ಮಾಡುತ್ತೇವೆ.ಅಗತ್ಯ ವಿದ್ದರೆ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಸಂದೇಶ್ ಎಚ್ಚರಿಕೆ ನೀಡಿದರು.ಈ ಭೂಕಬಳಿಕೆ ಮಾಡಿರುವ ಡಿ.ರಾಮಲಿಂಗಯ್ಯ ಮಗ ವಿವೇಕಾನಂದ ಒಬ್ಬ ಸರ್ಕಾರಿ ಪೊಲೀಸ್ ಅಧಿಕಾರಿ ಇದ್ದಾರೆ ಎಂಬ ಕಾರಣಕ್ಕೆ ಮಾರ್ಗೋನಹಳ್ಳಿ ಗ್ರಾಮದ ನೂರಾರು ಎಕರೆ ಸರ್ಕಾರಿ ಜಮೀನನ್ನು ನುಂಗಿದ್ದಾರೆ. ಅದನ್ನು ಪ್ರಶ್ನಿಸಿ ಹೋರಾಟ ಮಾಡುವ ಗ್ರಾಮದ ಮುಗ್ಧ ಜನರ ಮೇಲೆ ಸುಳ್ಳು ಕೇಸ್ ದಾಖಲಿಸಿ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಈ ಭೂಗಳ್ಳರ ಕುಟುಂಬಕ್ಕೆ ಕಿಕ್ಕೇರಿ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸಂದೇಶ್ ಗಂಭೀರ ಆರೋಪ ಮಾಡಿ.ಇಲ್ಲಿ ಇರೋವರೆಲ್ಲ ಕ್ರಿಮಿನಲ್ಗಳಲ್ಲ ಕಾನೂನಾತ್ಮಕವಾಗಿ ಹೋರಾಟ ಮಾಡ್ತಾ ಇದ್ದೀವಿ.ಆದರೆ ಬಲಾಡ್ಯರ ಕೈಗೊಂಬೆಯಂತೆ ಕಿಕ್ಕೇರಿ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ ತಹಶೀಲ್ದಾರ್ ಶ್ರೇಯಸ್ ಮಾತನಾಡಿ ಮಾರ್ಗೋನಹಳ್ಳಿ ಗ್ರಾಮದ ಸರ್ವೆ ನಂಬರ್ 13 ಮತ್ತು 165 ರಲ್ಲಿರುವ ಗೋಮಾಳ ಭೂಮಿ ಕಬಳಿಕೆ ಆರೋಪದ ಬಗ್ಗೆ ಗ್ರಾಮಸ್ಥರು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿ.ಕಂದಾಯ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಿ, ಅಕ್ರಮವಾಗಿ ಮಂಜೂರಾಗಿದ್ದರೆ ಕೂಡಲೇ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ದಲಿತರು ಮತ್ತು ಹಿಂದುಳಿದ ರೈತರ ಮೇಲೆ ದಾಖಲಾಗಿರುವ ಸುಳ್ಳು ಕೇಸ್ ಆರೋಪಗಳ ಬಗ್ಗೆಯೂ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬೃಹತ್ ಮೆರವಣಿಗೆಯ ಪ್ರತಿಭಟನೆ
ಸಂದೇಶ್ ಅವರ ನೇತೃತ್ವದಲ್ಲಿ ಮಾರ್ಗೋನಹಳ್ಳಿ ಗ್ರಾಮಸ್ಥರು ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಮಿನಿ ವಿಧಾನಸೌಧದವರೆಗೆ ಬೃಹತ್ ಮೆರವಣಿಗೆ ನಡೆಸಿದರು. ತಹಶೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ನಡೆಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.ಬಲಾಡ್ಯರ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಂಡು ಗೋಮಾಳ ಭೂಮಿಯನ್ನು ಮುಕ್ತಗೊಳಿಸಬೇಕು,ಸುಳ್ಳು ಕೇಸ್ ಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಮಾರ್ಗೋನಹಳ್ಳಿ ಅಯ್ಯಪ್ಪ ಮಂಜುನಾಥ್,ಗಿರೀಶ್, ನಾಗರಾಜು,ಅಜ್ಜೇಗೌಡ, ರಾಜೇಗೌಡ,ಶಿವಣ್ಣ,ನರಸಿಂಹ,ಯೋಗೇಶ್,ತ್ರಿಪುರರಾಜ್, ಬಾಬು,ರಾಮು, ರುದ್ರೇಶ್,ನಾಗರಾಜು, ರಾಮ, ನರಸೇಗೌಡ,ಲಕ್ಷ್ಮಣ,ಚಂದ್ರು, ರಾಜಶೇಖರ,ವಿಜಯ,ಜಯಣ್ಣ, ಶ್ರೀನಿವಾಸ್, ಶಾಂತಮ್ಮ, ತಾಯಮ್ಮ, ಕೆಂಚಮ್ಮ, ರಂಗಮ್ಮ, ಅಂಜಲಿ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಾರ್ಗೋನಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
