Bhagavad Gita
ಅಧ್ಯಾಯ-1
ಶ್ಲೋಕ – 26
ಆಚಾರ್ಯಾನ್ ಮಾತುಲಾನ್ ಭ್ರಾತ ನ್ ಪುತ್ರಾನ್ ಪೌತ್ರಾನ್ ಸಖೀನ್ ತಥಾ ||
ಎರಡೂ ಕಡೆಯ ಪಡೆಗಳಲ್ಲಿ ನೆರೆದವರನ್ನು ಅರ್ಜುನನು ಕಂಡನು. ತಂದೆಯಂತಿರುವವರನ್ನು, ಅಜ್ಜಂದಿರನ್ನು, ಗುರುಗಳನ್ನು, ಸೋದರಮಾವಂದಿರನ್ನು, ಅಣ್ಣ-ತಮ್ಮಂದಿರನ್ನು, ಮಕ್ಕಳನ್ನು, ಮೊಮ್ಮೊಕ್ಕಳನ್ನು, ಸಂಗಾತಿಗಳನ್ನು ಮಾವಂದಿರನ್ನು ಮತ್ತು ಗೆಳೆಯರನ್ನು.
ಕೃಷ್ಣನು ರಥವನ್ನು ಅರ್ಜುನನ ಆತ್ಮೀಯ ಬಂಧುಗಳ ಎದುರು ನಿಲ್ಲಿಸಿದ್ದರಿಂದ, ಅಲ್ಲಿ ನೆರೆದ ಎಲ್ಲರನ್ನೂ ಅರ್ಜುನ ನೋಡುತ್ತಾನೆ. ಇಷ್ಟು ಹೊತ್ತು ಜಂಭದ ಮಾತನಾಡಿದ ಆತನಿಗೆ ಈಗ ತನ್ನೆದುರಿಗೆ ನಿಂತ ತಂದೆ ಸಮಾನರು, ಅಜ್ಜಂದಿರು, ವಿದ್ಯೆ ಕೊಟ್ಟ ಆಚಾರ್ಯರು, ಸೋದರಮಾವಂದಿರು, ಅಣ್ಣತಮ್ಮಂದಿರು, ಮಕ್ಕಳು, ಮೊಮ್ಮೊಕ್ಕಳು, ಸ್ನೇಹ ಸಂಗಾತಿಗಳು, ಮಾವಂದಿರು, ಹಿತೈಷಿಗಳು, ಎಲ್ಲರು ಎರಡೂ ಕಡೆಗಳಲ್ಲಿ ಕಾಣಿಸುತ್ತಾರೆ..
ಎಚ್ಚರದಿಂದ ಈ ಶ್ಲೋಕವನ್ನು ಗಮನಿಸಿದರೆ, ಅರ್ಜುನನಿಗೆ ಅಲ್ಲಿ ಕಾಣಿಸಿದ್ದು ಕೇವಲ ಗುರು ಹಿರಿಯರು, ಬಂಧುಗಳು ಮತ್ತು ಆತ್ಮೀಯರು. ಇಲ್ಲಿ ಆತನಿಗೆ ಬಂಧು ಪ್ರೇಮ ಎಚ್ಚರ ಆಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕರ್ತವ್ಯ ನಿರತ ಜನಪಾಲಕ ರಾಜನಿಗೆ ಬಂಧು ಪ್ರೇಮ ತರವಲ್ಲ. ಪ್ರಜಾಪಾಲಕನಾದವನಿಗೆ ಪ್ರಜಾಪಾಲನೆ ಮೂಲಧರ್ಮ. ಅದನ್ನು ಆತ ಎಂದೂ ಚ್ಯುತಿ ಬರದಂತೆ ನಿರ್ವಹಿಸಬೇಕು. ಈ ರೀತಿ ಕಾರ್ಯ ನಿರ್ವಹಿಸುತ್ತಿರುವಾಗ ‘ನನ್ನ ಬಂಧುಗಳು, ನನ್ನ ಪರಿವಾರ’ ಎಂದು ಯಾವ ತಾರತಮ್ಯ ಮಾಡುವಂತಿಲ್ಲ.

[…] 1.ಭಗವದ್ಗೀತೆ – ದಿನಕ್ಕೊಂದು ಶ್ಲೋಕ-ಇದು ಭಕ್ತಿ ವೇದಾಂತ ಸಾರ-ಶ್ಲೋಕ – 26 https://vicharavisthara.com/bhagavad-gita-shloka-26 […]