ಹಾಸನ, ಜು. 21: ರೋಟರಿ ಕ್ಲಬ್ ಆಫ್ ಹಾಸನ್ ಸನ್ರೈಸ್ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 19ರಂದು ನಡೆಯಿತು.
ಈ ವೇಳೆ ರೋ. ಕೆ.ಎಸ್. ಯೋಗೇಶ್ ಅವರು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ರೋ. ಬಿ.ಎಂ. ದರ್ಶನ್ ಕಾರ್ಯದರ್ಶಿಯಾಗಿ, ರೋ. ಶಶಿಂದ್ರನಾಥನ್ ಎಂ.ಡಿ. ಖಜಾಂಚಿಯಾಗಿ, ರೋ. ಯು.ಎಂ. ಬುದೇಶ್ ಉಪಾಧ್ಯಕ್ಷರಾಗಿ ಹಾಗೂ ರೋ. ಎಸ್.ಸಿ. ರಾಜೇಶ್ ಜಂಟಿ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.
ನಿರ್ದೇಶಕರಾಗಿ ರೋ. ಎಚ್.ಡಿ. ವಜ್ರಕುಮಾರ್, ರೋ. ಎ.ಸಿ. ಗುರುಮೂರ್ತಿ, ರೋ. ಭುವನೇಶ್, ರೋ. ಎಚ್.ಎ. ಕಿರಣ್ ಹಾಗೂ ರೋ. ಸಿದ್ಧನಂಜಪ್ಪ ಅಧಿಕಾರ ಸ್ವೀಕರಿಸಿದರು.
ಇದೇ ವೇಳೆ ರೋ. ಎಂ.ಬಿ. ವಿಶ್ವನಾಥ್, ರೋ. ವೇಣುಗೋಪಾಲ್ ಡಿ., ರೋ. ಮಹಾಲಿಂಗೇಗೌಡ (ಮಧು), ರೋ. ಎಂ.ಸಿ. ರಾಜು, ರೋ. ಸುಬ್ರಹ್ಮಣ್ಯ ಹಾಗೂ ರೋ. ಗವಿಗೌಡ ವಿವಿಧ ಸಮಿತಿಗಳ ಅಧ್ಯಕ್ಷರಾಗಿ (ಚೇರ್ಮನ್) ಅಧಿಕಾರ ಸ್ವೀಕರಿಸಿದರು.
