ಕೊರಟಗೆರೆ:- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿಮಾಹಿತಿಯ ಪ್ರಕಾರ, ಲಾರಿಯು ಎಂ-ಸ್ಯಾಂಡ್ ಸುರಿಯುತ್ತಿದ್ದ ವೇಳೆ ಮೈದಾನದ ನೆಲ ಕುಸಿದ ಪರಿಣಾಮ ವಾಹನ ಪಕ್ಕಕ್ಕೆ ಉರುಳಿದೆ. ಇದರಿಂದ ಲಾರಿಯಲ್ಲಿದ್ದ ಸಿಮೆಂಟ್ ಹಾಗೂ ಫ್ಲೈ ಆ್ಯಶ್ ಮೈದಾನದಲ್ಲಿ ಚೆಲ್ಲಾಪಿಲ್ಲಿಯಾಗಿವೆ.
ನಿರ್ಮಾಣವಾಗುತ್ತಿರುವ ವೀಕ್ಷಕರ ಗ್ಯಾಲರಿ ಕಾಮಗಾರಿಗೆ ಎಂ-ಸ್ಯಾಂಡ್ ಹಾಗೂ ಸಿಮೆಂಟ್ (ಫ್ಲೈ ಆ್ಯಶ್) ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಸರಕು ಖಾಲಿ ಮಾಡುವ ವೇಳೆ ಸಮತೋಲನ ಕಳೆದುಕೊಂಡು ಪಲ್ಟಿಯಾದ ಘಟನೆ ಮಂಗಳವಾರ ಸಂಜೆ ನಡೆದಿದೆ.್ಲಿಮಾಹಿತಿಯ ಪ್ರಕಾರ, ಲಾರಿಯು ಎಂ-ಸ್ಯಾಂಡ್ ಸುರಿಯುತ್ತಿದ್ದ ವೇಳೆ ಮೈದಾನದ ನೆಲ ಕುಸಿದ ಪರಿಣಾಮ ವಾಹನ ಪಕ್ಕಕ್ಕೆ ಉರುಳಿದೆ. ಇದರಿಂದ ಲಾರಿಯಲ್ಲಿದ್ದ ಸಿಮೆಂಟ್ ಹಾಗೂ ಫ್ಲೈ ಆ್ಯಶ್ ಮೈದಾನದಲ್ಲಿ ಚೆಲ್ಲಾಪಿಲ್ಲಿಯಾಗಿವೆ.
ನಿರ್ಮಾಣವಾಗುತ್ತಿರುವ ವೀಕ್ಷಕರ ಗ್ಯಾಲರಿ ಕಾಮಗಾರಿಗೆ ಎಂ-ಸ್ಯಾಂಡ್ ಹಾಗೂ ಸಿಮೆಂಟ್ (ಫ್ಲೈ ಆ್ಯಶ್) ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಸರಕು ಖಾಲಿ ಮಾಡುವ ವೇಳೆ ಸಮತೋಲನ ಕಳೆದುಕೊಂಡು ಪಲ್ಟಿಯಾದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಮಾಹಿತಿಯ ಪ್ರಕಾರ, ಲಾರಿಯು ಎಂ-ಸ್ಯಾಂಡ್ ಸುರಿಯುತ್ತಿದ್ದ ವೇಳೆ ಮೈದಾನದ ನೆಲ ಕುಸಿದ ಪರಿಣಾಮ ವಾಹನ ಪಕ್ಕಕ್ಕೆ ಉರುಳಿದೆ. ಇದರಿಂದ ಲಾರಿಯಲ್ಲಿದ್ದ ಸಿಮೆಂಟ್ ಹಾಗೂ ಫ್ಲೈ ಆ್ಯಶ್ ಮೈದಾನದಲ್ಲಿ ಚೆಲ್ಲಾಪಿಲ್ಲಿಯಾಗಿವೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಕಾಮಗಾರಿ ಕಾರ್ಮಿಕರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಲಾರಿ ಚಾಲಕ ಸುರಕ್ಷಿತವಾಗಿ ಹೊರಬಂದಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯ ಸಂಭವಿಸಿಲ್ಲ.
ಸಂಜೆ ವೇಳೆಯಲ್ಲಿ ಈ ಮೈದಾನಕ್ಕೆ ನೂರಾರು ಮಂದಿ, ವಿಶೇಷವಾಗಿ ಹಿರಿಯ ನಾಗರಿಕರು ವಾಯುವಿಹಾರಕ್ಕಾಗಿ ಹಾಗೂ ಯುವಕರು ವಾಕಿಂಗ್ ಮತ್ತು ಕ್ರೀಡೆಗಳಿಗಾಗಿ ಆಗಮಿಸುತ್ತಾರೆ. ಇಂತಹ ಸಮಯದಲ್ಲೇ ಭಾರೀ ವಾಹನವನ್ನು ಮೈದಾನದೊಳಗೆ ತಂದಿರುವ ಗುತ್ತಿಗೆದಾರರ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.
ಕಾಮಗಾರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಸಾರ್ವಜನಿಕರ ಸಂಚಾರ ಕಡಿಮೆ ಇರುವ ವೇಳೆಯಲ್ಲಿ ಸಾಗಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಘಟನೆಯ ಬಳಿಕ ಸ್ಥಳವನ್ನು ಸುರಕ್ಷಿತಗೊಳಿಸಿ, ಪಲ್ಟಿಯಾದ ಲಾರಿಯನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಯಿತು.
ಘಟನೆ ಕೆಲಕಾಲ ಆತಂಕ ಮೂಡಿಸಿದರೂ, ಯಾವುದೇ ದೊಡ್ಡ ಅನಾಹುತ ಸಂಭವಿಸದಿರುವುದು ಸಮಾಧಾನದ ಸಂಗತಿಯಾಗಿದೆ.
– ಶ್ರೀನಿವಾಸ್ ಕೊರಟಗೆರೆ.
