ಕೆ.ಆರ್.ಪೇಟೆ ತಾಲ್ಲೂಕಿನ ಜನರು ಮೂಳೆ ಸಮಸ್ಯೆ ನಿವಾರಣೆಗೆ ದ್ವಿಗಣ ಹಣ ಖರ್ಚು ಮಾಡಿದರು ಕೂಡ ಕಣ್ಣೀರು ಹಾಕುತ್ತಿದ್ದರು. ಮೈಸೂರು, ಬೆಂಗಳೂರು ಕೆಲ ಆಸ್ಪತ್ರೆಯಲ್ಲಿ ಬೆಡ್ ಇಲ್ಲ. ಪ್ರಯಾಣದ ಖರ್ಚು ಬೇರೆ. ಈ ಕಾರಣದಿಂದಾಗಿ ಅನೇಕ ರೈತರು, ಕೂಲಿ ಕಾರ್ಮಿಕರು ನೋವನ್ನು ಸಹಿಸಿಕೊಂಡು ಕೆಲಸಕ್ಕೆ ಹೋಗುತ್ತಿದ್ದರು.ಆದರೆ ಕಳೆದ 6 ವರ್ಷಗಳಿಂದ ಈ ಚಿತ್ರಣವೇ ಬದಲಾಗಿದೆ. ಇದಕ್ಕೆ ಕಾರಣ ಕೆ.ಆರ್.ಪೇಟೆ ತಾಲ್ಲೂಕಿನ ಮೊಸಳೆಕೊಪ್ಪಲು ಗ್ರಾಮದ ಪುತ್ರ, ಆರ್ಥೋ ಸ್ಪೆಷಲಿಸ್ಟ್ ಡಾ. ಲೋಹಿತ್ ಎಂದರು ತಪ್ಪಾಗಲಾರದು.
ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಮೊಸಳೆಕಪ್ಪಲು ಗ್ರಾಮದ ಕೃಷಿಕರಾದ ಬೋರೇಗೌಡ ಮತ್ತು ಪಾರ್ವತಮ್ಮ ದಂಪತಿಯ ಮಗನಾಗಿ ಜನಿಸಿದ ಲೋಹಿತ್ ಅವರು ಬಳ್ಳೆಕೆರೆ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕೆ.ಆರ್.ಪೇಟೆ ಗ್ರಾಮಭಾರತಿಯಲ್ಲಿ ಪ್ರೌಢ ಶಿಕ್ಷಣ ಮತ್ತು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಪದವಿ ಪಡೆದರು. ರೈತ ಕುಟುಂಬದ ಹಿನ್ನೆಲೆಯಿಂದಲೇ ಬಂದ ಕಾರಣ ಬಡವರ ಕಷ್ಟ ಅವರಿಗೆ ಚೆನ್ನಾಗಿ ತಿಳಿದಿತ್ತು. ಕಠಿಣ ಪರಿಶ್ರಮದಿಂದ JSS ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಮತ್ತು ರಿಮ್ಸ್ ರಾಂಚಿಯಲ್ಲಿ ಆಲ್ ಇಂಡಿಯಾ ಕೋಟಾದ ಮೂಲಕ ಎಂ.ಎಸ್ ಆರ್ಥೋಪೆಡಿಕ್ಸ್ ಪದವಿ ಪಡೆದು ಪರಿಣಿತ ಆರ್ಥೋ ಸರ್ಜನ್ ಆದರು.

2016 ರಿಂದ 2019 ರವರೆಗೆ ಬೆಂಗಳೂರಿನ ಮಣಿಪಾಲ್, ಸಕ್ರಾ ವರ್ಲ್ಡ್ ಮತ್ತು ಕೊಲಂಬಿಯಾ ಏಷ್ಯಾ ನಂತಹ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ದಿನಕ್ಕೆ 4 ರಿಂದ 5 ಮೂಳೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದ ಅನುಭವ ಅವರಿಗಿದೆ. ಉತ್ತಮ ಸಂಬಳ, ಸೌಲಭ್ಯವಿದ್ದರೂ ತಮ್ಮ ಊರಿನ ಜನರು ಚಿಕಿತ್ಸೆಗಾಗಿ ಪರದಾಡುವುದನ್ನು ನೋಡಿ ಮನಸ್ಸು ಕರಗಿತು.2019 ರಲ್ಲಿ ಎಲ್ಲವನ್ನು ತ್ಯಜಿಸಿ ತವರಿಗೆ ವಾಪಸ್ ಬಂದು ಕೆ ಆರ್ ಪೇಟೆ ಪಟ್ಟಣದಲ್ಲಿ ಸ್ವತಃ ತಂದೆ ಹೆಸರಿನಲ್ಲಿ ಶ್ರೀ ಮಾದೇಗೌಡ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿದರು.

ಇಂದು ಈ ಆಸ್ಪತ್ರೆ ಕೆ.ಆರ್.ಪೇಟೆ ತಾಲ್ಲೂಕಿನ ಆರೋಗ್ಯ ಕ್ಷೇತ್ರದಲ್ಲಿ ಮೈಲುಗಲ್ಲು ಆಗಿದೆ. ಇಲ್ಲಿ ಅತ್ಯಾಧುನಿಕ ಆರ್ಥೋ ವಿಭಾಗವಿದೆ. ಮೂಳೆ ಮುರಿತಕ್ಕೆ ಪ್ಲೇಟ್, ರಾಡ್, ಸ್ಕ್ರೂ ಹಾಕುವ ಶಸ್ತ್ರಚಿಕಿತ್ಸೆ, ಮೊಣಕಾಲು ಮ ಆರ್ಥೋಸ್ಕೋಪಿ ಮೂಲಕ ಲಿಗಮೆಂಟ್ ರಿಪೇರಿ, ಸ್ಲಿಪ್ ಡಿಸ್ಕ್, ಬೆನ್ನುಮೂಳೆ ಶಸ್ತ್ರಚಿಕಿತ್ಸೆ, ಮಕ್ಕಳ ಮೂಳೆ ಸಮಸ್ಯೆ, ಡಯಾಬಿಟಿಕ್ ಫುಟ್ ಕೇರ್, ಕ್ರೀಡಾ ಗಾಯಗಳ ಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯ ಸೇವೆಗಳು ಒಂದೇ ಸೂರಿನಡಿ ಲಭ್ಯವಿವೆ. ಡಿಜಿಟಲ್ X-ರೇ, C-Arm, DEXA Scan, 2D ECHO, ಯಂತ್ರಗಳ ಜೊತೆಗೆ ಆಧುನಿಕ ಫಿಸಿಯೋಥೆರಪಿ ಘಟಕವೂ ಕಾರ್ಯನಿರ್ವಹಿಸುತ್ತಿದೆ. ರಸ್ತೆ ಅಪಘಾತ ಸೇರಿದಂತೆ ತುರ್ತು ಮೂಳೆ ಮುರಿತ ಪ್ರಕರಣಗಳಿಗೆ 24 ಗಂಟೆಯೂ ಚಿಕಿತ್ಸೆ ನೀಡಲಾಗುತ್ತದೆ.

ಆರ್ಥಿಕವಾಗಿ ಹಿಂದುಳಿದವರಿಗೆ ಇದು ನಿಜಕ್ಕೂ ವರದಾನವಾಗಿದೆ. ಆಸ್ಪತ್ರೆಯಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರಿಗೆ ಶಸ್ತ್ರಚಿಕಿತ್ಸೆಯಲ್ಲಿ ಶೇಕಡಾ 10%ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಸರ್ಕಾರಿ ಯೋಜನೆಗಳ ಸೌಲಭ್ಯವೂ ಇದೆ. ಪ್ರತಿ ತಿಂಗಳು ಗ್ರಾಮಗಳಿಗೆ ತೆರಳಿ ಉಚಿತ ಮೂಳೆ ತಪಾಸಣಾ ಶಿಬಿರ, ಮೂಳೆ ಸಾಂದ್ರತೆ ತಪಾಸಣೆ ಮತ್ತು ಆಸ್ಟಿಯೋಪೊರೋಸಿಸ್ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶಾಲಾ ಮಕ್ಕಳ ಭಂಗಿ ತಪಾಸಣೆ ಮತ್ತು ರಕ್ತದಾನ ಶಿಬಿರವೂ ನಡೆಯುತ್ತಿದೆ.
ಯುವ ಕಿರಣ್ ಕ್ರೀಡಾಪಟು ಕ್ರಿಕೆಟ್ ಆಡುವಾಗ ಲಿಗಮೆಂಟ್ ಹರಿದಿತ್ತು. ಆರ್ಥೋಸ್ಕೋಪಿ ಮೂಲಕ ಆಪರೇಷನ್ ಮಾಡಿ 1 ತಿಂಗಳಲ್ಲಿ ಮತ್ತೆ ಆಟಕ್ಕೆ ಇಳಿಸಿದರು. ಆರ್ಥೋ ವಿಚಾರದಲ್ಲಿ ಅವರು ಎಕ್ಸ್ಪರ್ಟ್ ಸರ್” ಎಂದು ಹೇಳಿದರು. ಇಂತಹ ನೂರಾರು ರೋಗಿಗಳು ಇಂದು ಹೊಸ ಬದುಕು ಕಂಡುಕೊಂಡಿದ್ದಾರೆ.

ಆಸ್ಪತ್ರೆ ಆರಂಭವಾದ ನಂತರ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಮೂಳೆ ಚಿಕಿತ್ಸೆಗಾಗಿ ಹೊರ ಜಿಲ್ಲೆಗೆ ಹೋಗುವ ಪ್ರಮಾಣ ಶೇಕಡಾ 70% ರಷ್ಟು ಕಡಿಮೆಯಾಗಿದೆ. ನಿತ್ಯ 140 ರಿಂದ 200 ರೋಗಿಗಳು OPD ಗೆ ಬರುತ್ತಾರೆ. ಈಗಾಗಲೇ ನೂರಾರು ಕ್ಕೂ ಹೆಚ್ಚು ಕೀಲು ಬದಲಾವಣೆ ಮತ್ತು ಸಾವಿರಾರಕ್ಕೂ ಹೆಚ್ಚು ಮೂಳೆ ಮುರಿತ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ಯಶಸ್ವಿಯಾಗಿ ಮಾಡಲಾಗಿದೆ. ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಮತ್ತು ಕೈಗೆಟುಕುವ ಚಿಕಿತ್ಸೆ ನೀಡುತ್ತಿರುವ ಡಾ. ಲೋಹಿತ್ ಅವರನ್ನು ಸ್ಥಳೀಯರು “ಮೂಳೆಯ ಡಾಕ್ಟರ್” ಎಂದು ಪ್ರೀತಿಯಿಂದ ಕರೆಯುತ್ತಾರೆ.

*ಡಾ. ಲೋಹಿತ್*
ತಮ್ಮ ಸಾಧನೆಯ ಬಗ್ಗೆ ಮಾತನಾಡಿದ ಡಾ. ಲೋಹಿತ್ ಅವರು, “ಬೆಂಗಳೂರಿನಲ್ಲಿ ಲಕ್ಷ ಲಕ್ಷ ಖರ್ಚು ಮಾಡಿ ಮಾಡುತ್ತಿದ್ದ ಆಪರೇಷನ್ ಅನ್ನು ಇಲ್ಲಿ ಅರ್ಧದಷ್ಟು ವೆಚ್ಚದಲ್ಲಿ ಮಾಡುತ್ತೇವೆ. ನನ್ನ ಒಂದೇ ಕನಸು. ಕೆ.ಆರ್.ಪೇಟೆಯ ಯಾವ ರೋಗಿಯೂ ಮೂಳೆ ಚಿಕಿತ್ಸೆಗಾಗಿ ಹೊರ ಊರಿಗೆ ಹೋಗಬಾರದು. ರೈತ, ಕೂಲಿ ಕಾರ್ಮಿಕನ ಮಗನಾಗಿ ನಾನು ಕಲಿತ ವಿದ್ಯೆಯನ್ನು ಈ ಮಣ್ಣಿನ ಜನರಿಗಾಗಿ ಬಳಸಬೇಕು. ಅದೇ ನನ್ನ ಜೀವನದ ಸಾರ್ಥಕತೆ” ಎಂದು ಹೇಳಿದರು.ಮುಂದಿನ ದಿನಗಳಲ್ಲಿ ತಮ್ಮ ಕನಸನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಹೊಂದಿರುವ ಅವರು, “ಆರ್ಥೋ ವಿಭಾಗವನ್ನು ಇನ್ನೂ ದೊಡ್ಡದಾಗಿ ಮಾಡಬೇಕು. ಪ್ರತ್ಯೇಕ ಜಾಯಿಂಟ್ ರಿಪ್ಲೇಸ್ಮೆಂಟ್ ಸೆಂಟರ್, ಕ್ರೀಡಾ ಗಾಯಗಳ ಚಿಕಿತ್ಸಾ ಕೇಂದ್ರ, ಆಧುನಿಕ ಫಿಸಿಯೋಥೆರಪಿ ಘಟಕ ತರಬೇಕು. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಅದಕ್ಕಾಗಿ ನನ್ನ ಜೀವನವನ್ನೇ ಮುಡಿಪಾಗಿಡುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
*ರೋಗಿಗಳ ಮಾತು:ಇವರು ನಮಗೆ ವರದಾನ”*
ಚಿಕಿತ್ಸೆ ಪಡೆದ ರೋಗಿಗಳ ಕಣ್ಣಲ್ಲಿ ಡಾ. ಲೋಹಿತ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳಿವೆ. ಊಟದ ಅಪಘಾತದಲ್ಲಿ ನನಗೆ ಕಾಲುಮುರಿತವಾಗಿತ್ತು ಅದಕ್ಕೆ ಮೈಸೂರಿನ ಖಾಸಗಿ ಆಸ್ಪತ್ರೆಗಳು 5 ಲಕ್ಷ ಬೇಕು ಅಂದ್ರು.ಇಲ್ಲಿ ಡಾ. ಲೋಹಿತ್ ಸರ್ 1. ಲಕ್ಷಕ್ಕೆ ಮಾಡಿ ಕೊಟ್ಟರು. ಈಗ ನಾನು ಹೊಲದಲ್ಲಿ ಮೊದಲಿನಂತೆ ಕೆಲಸ ಮಾಡ್ತಿದ್ದೀನಿ. ನಮ್ಮಂತ ರೈತರಿಗೆ ಇವರು ದೇವರು ಎಂದು ಭಾವುಕರಾದರು.
ವರದಿ ಮನು ಮಾಕವಳ್ಳಿ
