ಚನ್ನರಾಯಪಟ್ಟಣ: ಪಟ್ಟಣದ ಡಾಕ್ಟರ್ ಮಂಜುನಾಥ್ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಜು.29 ರ ಬುಧವಾರ ಗುರುಪೂರ್ಣಿಮ ಮಹೋತ್ಸವವನ್ನು ಆಯೋಜಿಸಲಾಗಿದೆ.
ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಎಲ್ಲಾ ಸಾಯಿ ಭಕ್ತರ ಸಹಾಯ ಹಾಗೂ ಸಹಕಾರ ಪ್ರೋತ್ಸಾಹಗಳಿಂದ ಶ್ರೀ ಸಾಯಿಬಾಬಾರ ಸೇವೆಯನ್ನು ನೆರವೇರಿಸಲಾಗುತ್ತಿದೆ.
ಕಾರ್ಯಕ್ರಮಗಳ ವಿವರ: ಗುರುಪೂರ್ಣಿಮೆ ಹಿನ್ನೆಲೆಯಲ್ಲಿ 28-07-2026 ನೇ ಮಂಗಳವಾರ ಬೆಳಗ್ಗೆ 9.00 ರಿಂದ ಹೋಮ, ವಿಶೇಷ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಮಧ್ಯಾಹ್ನ 1 ಗಂಟೆಗೆ ಅನ್ನದಾನ ನಡೆಯಲಿದೆ.
29.07.2026 ನೇ ಬುಧವಾರ ಮುಂಜಾನೆ 4.30 ಕ್ಕೆ ಕಾಕಡ ಆರತಿ, ಬೆಳಗ್ಗೆ 5 ಕ್ಕೆ ಶ್ರೀ ಸಾಯಿಬಾಬಾ ರವರಿಗೆ ಅಭಿಷೇಕ, ಬೆಳಗ್ಗೆ 6 ಕ್ಕೆ ಸಾಯಿಬಾಬಾ ರವರಿಗೆ ಅಲಂಕಾರ, 7.30 ರಿಂದ 11.30 ರವರಗೆ ಪ್ರಸಾದ ಮತ್ತು ಫಲಹಾರವಿರುತ್ತದೆ. ಮಧ್ಯಾಹ್ನ 12 ಕ್ಕೆ ಆರತಿ, ಮಧ್ಯಾಹ್ನ 1 ಕ್ಕೆ ಅನ್ನದಾತ, ಸಂಜೆ 6 ಗಂಟೆಗೆ ಧೂಪಾರತಿ, ಸಂಜೆ 6.30 ರಿಂದ 9 ರವರೆಗೆ ಪ್ರಸಾದ ಮತ್ತು ಫಲಹಾರವಿರುತ್ತದೆ. ರಾತ್ರಿ 9 ಗಂಟೆಗೆ ಶೇಜಾರತಿ ಹಾಗೂ ಬೆಳಗ್ಗೆ 7 ರಿಂದ ರಾತ್ರಿ 11 ರವರೆಗೆ ಬಾಬಾರಿಗೆ ವಿಶೇಷ ಅಲಂಕಾರವಿರುತ್ತದೆ ಮತ್ತು ಬಾಬಾರ ದರ್ಶನ ಇರಲಿದೆ.

ಭಜನಾ ಕಾರ್ಯಕ್ರಮ: ಬೆಳಗ್ಗೆ 9 ರಿಂದ 10 ಗಂಟೆ ವರೆಗೆ ಶೇಷಾದ್ರಿ ಭಜನಾ ಮಂಡಳಿ, ಬೆಳಗ್ಗೆ 10 ರಿಂದ 11 ಗಂಟೆ ವರೆಗೆ ಬ್ರಾಹ್ಮಣ ಮಹಿಳಾ ವೇದಿಕೆ ವತಿಯಿಂದ ಭಜನಾ ಮಂಡಳಿ, ಬೆಳಗ್ಗೆ 11 ರಿಂದ 12 ರವರಿಗೆ ವಾಸವಿ ಭಜನಾ ಮಂಡಳಿ, ಮಧ್ಯಾಹ್ನ 1 ರಿಂದ 2 ಗಂಟೆ ವರೆಗೆ ಶ್ರೀಮುಖ ಸರಸ್ವತಿ ಕಲಾಕೇಂದ್ರ, ಮಧ್ಯಾಹ್ನ 2 ರಿಂದ 3 ಗಂಟೆ ವರೆಗೆ ಶ್ರೀನಿಧಿ ಭಜನಾ ಮಂಡಳಿ, ಮಧ್ಯಾಹ್ನ 3 ರಿಂದ 4 ಗಂಟೆ ವರೆಗೆ ರೇಣುಕಾ ಭಜನಾ ಮಂಡಳಿ, ಸಂಜೆ 4 ರಿಂದ 5 ಗಂಟೆ ವರೆಗೆ ಓಂಕಾರೇಶ್ವರ ಭಜನಾ ಮಂಡಳಿ ಹಾಗೂ ಸಂಜೆ 5 ರಿಂದ 6 ಗಂಟೆ ವರೆಗೆ ವೆಂಕಟೇಶ್ವರ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಚನ್ನರಾಯಪಟ್ಟಣದ ಸುಧೀರ್ಶರ್ಮ ಮತ್ತು ತಂಡ ದವರಿಂದ ಹೋಮ ಮತ್ತು ಹವನ, ನೂತನ್ ವಾದ್ಯವೃಂದ ಮಂಜಪ್ಪ ತಂಡದವರಿಂದ ವಾದ್ಯಗೋಷ್ಠಿ ಜರುಗಲಿದೆ ಎಂದು ಸಾಯಿ ಸೇವಕರಾದ ಪ್ರಭಾ ಕಾಚೇನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
– ಮಂಜುನಾಥ್ ಐ .ಕೆ.
