ರಾಮನಾಥಪುರ, ಆ.5: ಸನಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಗ್ರಾಮೀಣ ಭಾಗದ ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಪೂಜಾ ಕೈಂಕರ್ಯಗಳು ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಆಚರಣೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಗೋಂದಳ್ಳಿ ಸಮಾಜದ ಅಧ್ಯಕ್ಷ ದೇವರಾಜರಾವ್ ಹೇಳಿದರು.
ರಾಮನಾಥಪುರದ ಗೋಂದಳ್ಳಿ ಸಮಾಜದ ವತಿಯಿಂದ ನಡೆದ ಶ್ರೀ ಚಾಮುಂಡೇಶ್ವರಿ ಅಮ್ಮನವರ 36ನೇ ವರ್ಷದ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಧಾರ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಯುವಕರ ಮೇಲಿದೆ. ಯುವಜನರು ನಮ್ಮ ಪರಂಪರೆಯನ್ನು ಗೌರವಿಸಿ ಉಳಿಸಿಕೊಂಡು ಬರಬೇಕು ಎಂದು ಕರೆ ನೀಡಿದರು.

ಉತ್ಸವದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ನೆರವೇರಿದ್ದು, ಗೋಂದಳ್ಳಿ ಸಮಾಜದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಪಾತ್ರೆ ದೇವರಾಜು, ಉಪಾಧ್ಯಕ್ಷ ಪ್ರಕಾಶರಾವ್, ಖಜಾಂಚಿ ಮನುರಾವ್, ಕಾರ್ಯದರ್ಶಿ ಮಣಿರಾವ್, ಸದಸ್ಯರಾದ ಮಧುರಾವ್, ಸಂತೋಷರಾವ್, ಕೃಷ್ಣರಾವ್, ಪ್ರತಾಪರಾವ್, ರಾಜುರಾವ್, ಎಂ. ರಾಜುರಾವ್, ಲಕ್ಷ್ಮಣರಾವ್, ಭರತರಾವ್, ಅಪ್ಪುರಾವ್, ಕಿರಣ್ ರಾವ್, ಪ್ರಮೀಣಾಬಾಯಿ, ಕಲಾಬಾಯಿ, ಶೈಲರಾಜು, ಆರ್.ಡಿ. ಸಂತೋಷರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು.
– ಕುಮಾರಸ್ವಾಮಿ ಎಂ.ಎನ್.
