ಮುಂಬೈ: ವಿಶ್ವ ವಿಖ್ಯಾತ ಶಿಲ್ಪಿ ಶತಾಯುಷಿ ರಾಮ್ ಸುತಾರ್ ಅವರಿಗೆ ‘ಮಹಾರಾಷ್ಟ್ರ ಭೂಷಣ’ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಘೋಷಣೆ ಮಾಡಿದ್ದಾರೆ. ಮಹಾರಾಷ್ಟ್ರ ರಾಜ್ಯದ ಅತ್ಯುನ್ನತ ಪ್ರಶಸ್ತಿ ಇದಾಗಿದೆ.
ವಿಶ್ವ ವಿಖ್ಯಾತ ಶಿಲ್ಪಿ ಶತಾಯುಷಿ ರಾಮ್ ಸುತಾರ್ ಅವರಿಗೆ ‘ಮಹಾರಾಷ್ಟ್ರ ಭೂಷಣ’ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಘೋಷಣೆ ಮಾಡಿದ್ದಾರೆ ಮಹಾರಾಷ್ಟ್ರ ರಾಜ್ಯದ ಅತ್ಯುನ್ನತ ಪ್ರಶಸ್ತಿ ಇದಾಗಿದೆ.
1999ರಲ್ಲಿ ರಾಮ್ ಅವರಿಗೆ ಪದ್ಮಶ್ರೀ ಹಾಗೂ 2016ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ. ಇಷ್ಟೇ ಅಲ್ಲದೇ ದೇಶದ ವಿವಿಧ ಪ್ರತಿಷ್ಠಿತ ಗೌರವಗಳಿಗೂ ರಾಮ್ ಪಾತ್ರರಾಗಿದ್ದಾರೆ
ಗುಜರಾತ್ನಲ್ಲಿರುವ ಜಗತ್ತಿನಲ್ಲೇ ಅತಿ ಎತ್ತರದ ಏಕತೆ ಪ್ರತಿಮೆಯನ್ನೂ (ಸರ್ದಾರ್ ವಲ್ಲಭಬಾಯಿ ಅವರ ಗೌರವಾರ್ಥ ನಿರ್ಮಿಸಿರುವ ಪ್ರತಿಮೆ) ರಾಮ್ ಸುತಾರ್ ಅವರೇ ಕೆತ್ತಿದ್ದಾರೆ.
ಸಂಸತ್ತಿನ ಕಟ್ಟಡ ಮುಂದಿರುವ ಗಾಂಧಿ ಪ್ರತಿಮೆಯು ರಾಮ್ ಅವರಿಗೆ ಅತ್ಯಂತ ಕೀರ್ತಿ ತಂದುಕೊಟಿದ್ದು, ಇದೇ ಮಾದರಿಯ ಪ್ರತಿಮೆಯನ್ನು ಸುಮಾರು 450 ದೇಶದಲ್ಲಿ ಸ್ಥಾಪನೆ ಮಾಡಲಾಗಿದೆ
