
ಪೂರ್ಣ ಚಂದ್ರ ತೇಜಸ್ವಿ, ಯಾರಿಗೆ ಇಷ್ಟ ಆಗಲ್ಲ ಹೇಳಿ, ಸಾಹಿತ್ಯ ಆಸಕ್ತಿ ಇಲ್ಲದವರಿಗೂ ಇವರ ಬರವಣಿಗೆ ಸಾಹಿತ್ಯಲೋಕದ ಪರಿಚಯವನ್ನು ಮಾಡಿಸುತ್ತದೆ. ಕೆಲ ಯುವ ಜನಾಂಗವನ್ನು ಕೇಳಿದರೆ, ನಾನು ಮೊದಲು ಓದಲು ಪ್ರಾರಂಭಿಸಿದಿದ ಕೃತಿ ಪೂಚಂತೇ’ ಅವರ ಕಾರ್ವಾಲೊ ಎಂದು ಹೇಳಿದವರೆ ಹೆಚ್ಚು.
ತೇಜಸ್ವಿಯವರನ್ನು ರೋಲ್ ಮಾಡೆಲಾಗಿಟ್ಟುಕೊಂಡು ಪ್ರೇರಣೆ ಪಡೆಯುವ ದೊಡ್ಡ ತರುಣರ ಪಡೆ ಕರ್ನಾಟಕದಲ್ಲಿದೆ ಎಂದರೆ ಅತಿಶಯೋಕ್ತಿಯಲ್ಲ. ಅವರ ಬರಹಗಳನ್ನು ಓದುತ್ತ, ತಮ್ಮ ಆಲೋಚನೆಯನ್ನು ರೂಪಿಸಿಕೊಳ್ಳಲು ಯತ್ನಿಸುತ್ತಾರೆ. ಅಪರೂಪಕ್ಕೆ ಇವರಲ್ಲಿ ಕೆಲವರು ಲೇಖಕರಾಗಿ ಬೆಳೆಯುವುದೂ ಉಂಟು. ಮೂಲತಃ ಅವರನ್ನು ಭೇಟಿಯಾಗದಿದ್ದರೂ, ಅವರ ತಿರುಗಾಟ, ಚಳುವಳಿ, ವಿಹಾರ, ವ್ಯವಹಾರಗಳ ಬರವಣಿಗೆಗಳು ಅವರ ವ್ಯಕ್ತಿತ್ವದ ಪರಿಚಯವನ್ನು ಮಾಡಿಸಿ, ಅವರನ್ನು ಪರೋಕ್ಷವಾಗಿ ಗುರುವಿನಂತೆ ಪೂಜಿಸುವವರು ಇದ್ದಾರೆ.
ಅಂತಹ ನಮ್ಮ ನೆಚ್ಚಿನ ತೇಜಸ್ವಿಯವರೊಂದಿಗೆ ಧನಂಜಯ ಜೀವಾಳ ಅವರು, ನಿರಂತರ ಸಂಪರ್ಕದಲ್ಲಿ ನಿತ್ಯನಿರತರಾಗಿ ಅವರ ವಿಚಾರ ಮಂಥನ-ವಿಶಿಷ್ಠ ಪಯಣದ ಸ್ವಾರಸ್ಯವನ್ನು ಅರಿತ ವ್ಯಕ್ತಿ. ನಿಜಕ್ಕೂ ಧನಂಜಯ ಅವರಿಗೆ ಬದುಕಿನಲ್ಲಿ ಇಂತಹ `ಪೂಚಂತೇ’ ಸ್ನೇಹ ಸಂಪದದ ಒಡನಾಟ ದೊರೆತದ್ದು ನಿಜಕ್ಕೂ ನಮ್ಮಗೆ ಅದೃಷ್ಠದಂತೆ ಎನ್ನಿಸದೆ ಇರದು. ಪೂಚಂತೇ ಅವರನ್ನು ಇನ್ನಷ್ಟು ತಿಳಿಯು ಧನಂಜಯ ಜೀವಾಳ ಅವರ “ ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ ” ಎಂಬ ಗ್ರಂಥ ಸಹಕಾರಿಯಾಗಿದೆ.
ಇನ್ನು ಪ್ರತಿದಿನ ನಿಮ್ಮ ವಿಚಾರ-ವಿಸ್ತಾರದಲ್ಲಿ ದಿನದ ಸಂಚಿಕೆಯಂತೆ “ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ ” ಎಂಬ ಧನಂಜಯ ಜೀವಾಳ ಅವರ ಕೃತಿ ಅನಾವರಣಗೊಳಲ್ಲಿದೆ. ಬನ್ನಿ ತೇಜಸ್ವಿಯರ ಬಗ್ಗೆ ಮತ್ತಷ್ಟು ತಿಳಿಯೋಣ ಏನಂತಿರಾ…?
– ಮಾಲಾ ಹಾಸನ