ಹಾಸನ : ಪ್ರತಿಯೊಬ್ಬ ಸಾಧಕನ ಹಿಂದೆ ಗುರುವಿನ ಮಾರ್ಗದರ್ಶನವಿರುತ್ತದೆ. ಕಲಿಸಿದ ಗುರುಗಳ ಬಗ್ಗೆ ಹೃದಯಸ್ಪರ್ಶಿ ಮಾತುಗಳನ್ನಾಡುವ ಸದುದ್ದೇಶದಿಂದ ಗುರುನುಡಿ ನಮನ ಕಾರ್ಯಕ್ರಮ ಹಮ್ಮಿಕೊಂಡಿರುವ ಗುರು ಶಿಷ್ಯರ ಸಮ್ಮಿಲನ ಭಾವನಾತ್ಮಕವಾದ ಸಹೃದಯಗಳ ಬೆಸುಗೆಯಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ನಗರದ ಗಾಂಧಿ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು, ಹಾಸನ ಜಿಲ್ಲಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಗುರು ನುಡಿ ನಮನ, ಗೌರವ ಸನ್ಮಾನ ಸಮಾರಂಭ ಹಾಗೂ ಸಾಂಸ್ಕೃತಿಕ ಗೋಷ್ಠಿ” ಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಕೆ.ಎಸ್.ಒ.ಯು. ಅಂತಿಮ ವರ್ಷದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಮೂರು ವರ್ಷಗಳ ಕಾಲ ಪರಸ್ಪರ ಒಬ್ಬರನ್ನೊಬ್ಬರು ಮುಖತಃ ಭೇಟಿಯಾಗದೇ ವಾಟ್ಸಪ್ ಮೂಲಕ ಬೆರೆತು, ಕಲಿಯುತ್ತಾ ಸಾಗಿ ಅಂತಿಮವಾಗಿ ಎಲ್ಲಾ ಸೇರಿ ತಮಗೆ ಕಲಿಸಿದ ಎಲ್ಲಾ ಗುರುಗಳ ನೇರ ದರ್ಶನ ಪಡೆಯುವ, ಸನ್ಮಾನಿಸಿ ಗೌರವಿಸುವ, ನುಡಿನಮನ ಸಲ್ಲಿಸುವ ಉದಾತ್ತ ಚಿಂತನಶೀಲ ಕಾರ್ಯಕ್ರಮ ಕೆ.ಎಸ್.ಒ.ಯು. ಇತಿಹಾಸದಲ್ಲೇ ಸ್ಮರಣೀಯವಾದ ಕ್ಷಣ. ರಾಜ್ಯದ ವಿವಿಧ ಜಿಲ್ಲೆಗಳಿಂದ ಈಗಾಗಲೇ ವಿವಿಧ ವೃತ್ತಿ, ತಮ್ಮದೇಯಾದ ಕೌಟುಂಬಿಕ ಯಾನದಲ್ಲಿ ಸಾಗುತ್ತಾ ಜೊತೆಜೊತೆಗೆ ತಮ್ಮ ಶೈಕ್ಷಣಿಕ ಉನ್ನತಿಗಾಗಿ ದೂರ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ಪದವಿ ಪಡೆಯುತ್ತಿರುವುದು ಒಂದು ದೊಡ್ಡ ಸಾಧನೆಯೇ ಸರಿ. ಈ ಸಮ್ಮಿಲನಕ್ಕೆ ವಿದ್ಯಾರ್ಥಿ ಪ್ರತಿನಿಧಿಗಳಾದ ಸಮುದ್ರವಳ್ಳಿ ವಾಸು, ಪ್ರತಿಭಾ ಸುದರ್ಶನ್, ಎ.ಯಲ್ಲಪ್ಪ, ರೂಪಾ ನೇಮಣ್ಣ, ರೇಖಾಶಂಕರ್ ಅವರುಗಳ ಪರಿಶ್ರಮ ಶ್ಲಾಘನೀಯವಾದದ್ದು. ಇವರುಗಳ ಒತ್ತಾಸಗೆ ನವೀನ್ ಎಸ್.ಬಿ, ರಶ್ಮಿರಾಮಪ್ರಸಾದ್, ರೂಪಾ ವೈ, ಹರೀಶ್ ಎಂ.ಆರ್ ಹಾಗೂ ಖಾಜಿ ಶೇಖ್ ಅವರು ಆಸರೆಯಾಗಿ ನಿಂತಿದ್ದು ಕಾರ್ಯಕ್ರಮದ ಶೋಭೆ ಹೆಚ್ಚಲು ಕಾರಣವಾಗಿದೆ ಎಂದರು.
ಮೈಸೂರಿನ ಬಾಸುದೇವ ಸೋಮಾನಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಸಂಯೋಜಕರಾದ ಡಾ. ಟಿ. ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇದೊಂದು ಭಾವನಾತ್ಮಕ ಹಾಗೂ ಸ್ನೇಹಪೂರ್ವಕವಾದ ಹೃದಯಸ್ಪರ್ಶಿ ಕಾರ್ಯಕ್ರಮ. ಸಮಾಜಕ್ಕೆ ಸೇವೆ, ಕಾಯಕ ನಿಷ್ಠೆ, ಸತ್ಯಪರತೆ, ಸ್ವಚ್ಛತೆ ಮುಂತಾದ ಉದಾತ್ತ ಗುಣಗಳನ್ನು ಅರುಹಿದ ಮಹಾತ್ಮಗಾಂಧಿ ನಮ್ಮೆಲ್ಲರಿಗೂ ಆದರ್ಶ. ಇಂತಹ ಅಭೂತಪೂರ್ವ ಕಾರ್ಯಕ್ರಮವನ್ನು ಹಾಸನದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ. ಸಮುದ್ರವಳ್ಳಿ ವಾಸು, ಪ್ರತಿಭಾ ಸುದರ್ಶನ್ ಮತ್ತವರ ಬಳಗ ಕೇವಲ ವಿದ್ಯಾರ್ಥಿಗಳಾಗದೇ ಇತರೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ವಿದ್ಯಾರ್ಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಾ ರಾಜ್ಯದಾದ್ಯಂತ ವಿದ್ಯಾರ್ಥಿಗಳ ಮನಸ್ಸನ್ನು ಸೆಳೆಯುತ್ತಾ ಒಂದೆಡೆ ಸೇರಿಸುವ ಮಹತ್ಕಾರ್ಯ ಮಾಡಿ ನಮ್ಮೆಲ್ಲರನ್ನು ಗೌರವಿಸುವ ಹಾಗೂ ಗುರು ನುಡಿ ನಮನ ಸಲ್ಲಿಸುವ ನಿಮಿತ್ತ ನೂರಾರು ಮನಸ್ಸುಗಳನ್ನು ಒಟ್ಟಾಗಿಸಿ ಅಮೂಲ್ಯ ಕಾರ್ಯಕ್ರಮ ಏರ್ಪಡಿಸಿ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿದ್ದಾರೆ. ಕೆ.ಎಸ್.ಒ.ಯು. ಇತಿಹಾಸದಲ್ಲಿಯೇ ಇಂತಹ ಒಂದು ಕಾರ್ಯಕ್ರಮ ಪ್ರಪ್ರಥಮ ಎಂದರು.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ ಸಾಹಿತಿ ಹಾಗೂ ಜಿಲ್ಲಾಧ್ಯಕ್ಷ ಸಮುದ್ರವಳ್ಳಿ ವಾಸು, ಪ್ರತಿಭಾ ಸುದರ್ಶನ್ ಮತ್ತವರ ತಂಡ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಡಿ ಪದವಿ ವ್ಯಾಸಂಗ ಮಾಡುತ್ತಿರುವ ಮನಸ್ಸುಗಳನ್ನು ವಾಟ್ಸಪ್ ಬಳಗದ ಮೂಲಕ ಒಂದೆಡೆ ಸೇರಿಸಿ, ಮಾರ್ಗದರ್ಶನ ನೀಡಿ ಸಂಪೂರ್ಣ ವಿದ್ಯಾರ್ಥಿ ಬಳಗ ಸಹಕಾರ ಪಡೆದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬ್ಯಾನರ್ ಅಡಿ ಕಾರ್ಯಕ್ರಮ ಸಂಘಟಿಸಿರುವುದು ಮೌಲ್ಯವನ್ನು ಹೆಚ್ಚಿಸಿದೆ. ಗುರುಗಳನ್ನು ಸತ್ಕರಿಸುವ ಹಾಗೂ ಸ್ನೇಹಮಿಲನಕ್ಕಾಗಿ ನೂರಾರು ಕಿಲೋಮೀಟರ್ ದೂರದಿಂದ ರಾಜ್ಯದ ವಿವಿಧ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಹಾಸನಕ್ಕೆ ಆಗಮಿಸಿರುವುದು ಹೆಮ್ಮೆಯ ಸಂಗತಿ. ನಿಮ್ಮೆಲ್ಲರ ನಿಸ್ವಾರ್ಥಭಾವ ಇಲ್ಲಿ ಎಲ್ಲರನ್ನೂ ಸೇರಿಸಿದೆ. ಈಗಾಗಲೇ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಸಾರಥ್ಯದಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಅನುಷ್ಠಾನಗೊಳ್ಳುವುದರ ಜೊತೆಜೊತೆಗೆ ಮಹಾರಾಷ್ಟ್ರ, ಆಂದ್ರಪ್ರದೇಶ, ಕೇರಳ ಮುಂತಾದ ರಾಜ್ಯಗಳಲ್ಲೂ ಕನ್ನಡ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಯುವ ಮನಸ್ಸುಗಳನ್ನು ಸ್ಪೂರ್ತಿ ನೀಡುತ್ತಾ ಯುವ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಮಾಡುತ್ತಾ ಬಂದಿದೆ. ವೇದಿಕೆಗೆ ನಾವು ಸದಾ ಶಕ್ತಿಯಾಗಿ ನಿಲ್ಲುತ್ತೇವೆ ಎಂದರು.
ಮುಕ್ತ ಶಿಕ್ಷಣ ಚೇತನ ಪ್ರಶಸ್ತಿ ಪ್ರದಾನ
ಮೈಸೂರಿನ ಬಾಸುದೇವ ಸೋಮಾನಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಟಿ. ರಮೇಶ್, ಮೈಸೂರು ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪುಷ್ಪಲತಾ, ಹಾಸನ ಕೆ.ಎಸ್.ಒ.ಯು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ರವಿ ಆರ್.ಎನ್, ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಕಾಲೇಜಿನ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮನು ರಾಘವೇಂದ್ರ, ಬಂಕಾಪುರ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಿ.ಇ. ಬಲರಾಮೇಗೌಡ ಸೇರಿದಂತೆ ಹಲವು ಗಣ್ಯರು ಮಾತನಾಡಿದರು. ವೇದಿಕೆಯಲ್ಲಿ ಮೈಸೂರು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಿಂಧು ಎನ್.ಆರ್, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಂಜುಳಾ ಎಸ್., ಮೈಸೂರು ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಮಾರುತಿ ಪ್ರಸನ್ನ ಬಿ.ಎನ್, ನಂಜನಗೂಡು ಭೂಗೋಳಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಹೇಶ್ ಬಿ, ಚಾಮರಾಜನಗರದ ಕನ್ನಡ ವಿಭಾಗದ ಉಪನ್ಯಾಸಕ ಸುರೇಶ್ ಆರ್.ಎಸ್, ಮೈಸೂರಿನ ಇತಿಹಾಸ ಉಪನ್ಯಾಸಕಿ ಅಶ್ವಿನಿ ವಿ, ಮೈಸೂರಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಣಿ ಎನ್, ಅರಸೀಕೆರೆಯ ಕನ್ನಡ ವಿಭಾಗದ ಸಹಾಯಕ ಉಪನ್ಯಾಸಕಿ ಪದ್ಮ ಎ.ಆರ್ ಅವರುಗಳಿಗೆ “ಮುಕ್ತ ಶಿಕ್ಷಣ ಚೇತನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಮುಕ್ತ ಶಿಕ್ಷಣ ಪ್ರೇರಣಾ ಪ್ರಶಸ್ತಿ
ಆನ್ಲೆöÊನ್ ತರಗತಿಗಳನ್ನು ನೀಡಿ ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣರಾದ ವಿದ್ಯಾರ್ಥಿ ಪ್ರತಿನಿಧಿಗಳಾದ ಸಮುದ್ರವಳ್ಳಿ ವಾಸು, ಪ್ರತಿಭಾ ಸುದರ್ಶನ್, ಎ. ಯಲ್ಲಪ್ಪ, ರೂಪಾ ನೇಮಣ್ಣ, ರೇಖಾ ಶಂಕರ್ ಅವರುಗಳಿಗೆ ಮುಕ್ತ ಶಿಕ್ಷಣ ಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಸನ ಕೆ.ಎಸ್.ಒ.ಯು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ರವಿ ಆರ್.ಎನ್, ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಕಾಲೇಜಿನ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮನು ರಾಘವೇಂದ್ರ, ಬಂಕಾಪುರ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಿ.ಇ. ಬಲರಾಮೇಗೌಡ ಸೇರಿದಂತೆ ಹಲವು ಗಣ್ಯರು ಮಾತನಾಡಿದರು. ವೇದಿಕೆಯಲ್ಲಿ ಮೈಸೂರು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಿಂಧು ಎನ್.ಆರ್, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಂಜುಳಾ ಎಸ್., ಮೈಸೂರು ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಮಾರುತಿ ಪ್ರಸನ್ನ ಬಿ.ಎನ್, ನಂಜನಗೂಡು ಭೂಗೋಳಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ಮಹೇಶ್ ಬಿ, ಚಾಮರಾಜನಗರದ ಕನ್ನಡ ವಿಭಾಗದ ಉಪನ್ಯಾಸಕ ಸುರೇಶ್ ಆರ್.ಎಸ್, ಮೈಸೂರಿನ ಇತಿಹಾಸ ಉಪನ್ಯಾಸಕಿ ಅಶ್ವಿನಿ ವಿ, ಮೈಸೂರಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಣಿ ಎನ್, ಅರಸೀಕೆರೆಯ ಕನ್ನಡ ವಿಭಾಗದ ಸಹಾಯಕ ಉಪನ್ಯಾಸಕಿ ಪದ್ಮ ಎ.ಆರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ಜಿಲ್ಲಾಧ್ಯಕ್ಷ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಸಮುದ್ರವಳ್ಳಿ ವಾಸು ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿಲ್ಲಾ ಕಾರ್ಯದರ್ಶಿ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಪ್ರತಿಭಾ ಸುದರ್ಶನ್ ನಿರೂಪಿಸಿದರು, ಕೆ.ಎಸ್.ಒ.ಯು. ವಿದ್ಯಾರ್ಥಿಗಳಾದ ಅಂಜಲಿ ಮೈಸೂರು ಮತ್ತು ತಂಡ ಪ್ರಾರ್ಥನೆ ಮಾಡಿದರು. ಸರ್ವಮಂಗಳ ಬಳ್ಳಾರಿ ವಂದಿಸಿದರು.
