ತುಮಕೂರು:12ನೇ ಶತಮಾನದಲ್ಲಿ ಬಸವಣ್ಣನವರು ನೀಡಿದ ವಚನಗಳು ಇಂದಿಗೂ ಪ್ರಸ್ತುತ,ಎಲ್ಲರೂ ಬಸವಣ್ಣನ ವಚನಗಳನ್ನು ಕಲಿಯಬೇಕು ಅದರ ಅರ್ಥ ತಾತ್ಪರ್ಯಗಳನ್ನು ಇಂದಿನ ಯುವಪೀಳಿಗೆಗೆ ತಿಳಿಸಬೇಕು,ಧರ್ಮದ ಹಾದಿಯಲ್ಲಿ ಎಲ್ಲರೂ ನಡೆದಾಗ ಜೀವನ ಸಾರ್ಥಕವಾಗುತ್ತದೆ,ಮಕ್ಕಳಿಗೆ ಆಸ್ತಿ ಮಾಡುವ ತವಕದಲ್ಲಿ ಇಂದಿನ ತಂದೆ-ತಾಯಿಯರು ಇದ್ದಾರೆ ಅವರಿಗೆ ಆಸ್ತಿಗಿಂತ ಉತ್ತಮ ವಿದ್ಯೆ,ಸಂಸ್ಕಾರ ನೀಡುವ ಅಗತ್ಯವಿದೆ,ಗುರು-ಹಿರಿಯರಿಗೆ ಗೌರವ ನೀಡಬೇಕು,ವಚನಗಳಲ್ಲಿ ಇದನ್ನೆ ಅಣ್ಣಬಸವಣ್ಣನವರು ವಚನಗಳ ಮೂಲಕ ಬರೆದಿರುವುದು,ಭೂತ-ಭವಿಷ್ಯ-ವರ್ತಮಾನ ಕಾಲವನ್ನು ತಮ್ಮ ವಚನಗಳಲ್ಲಿ ಹಿಡಿದಿಟ್ಟಿದ್ದಾರೆ,ಅನ್ನದಾಸೋಹವನ್ನು ನೀಡಿದ್ದು ಬಸವಣ್ಣ,ಮೊದಲ ಪಾರ್ಲಿಮೆಂಟ್ ಅನುಭವ ಮಂಟಪವನ್ನು ನೀಡಿದ್ದು,ಮಹಿಳೆಯರಿಗೆ ಸಮಾನಹಕ್ಕು ಸಮಾನಗೌರವ ನೀಡಿದ್ದು ಬಸವಣ್ಣನವರು ಹೀಗೆ ಸಮಾಜಕ್ಕೆ ಅಗತ್ಯವಾದ ಎಲ್ಲವನ್ನೂ ನೀಡಿದ್ದು ಬಸವಣ್ಣನವರು ಎಂದು ಶರಣ ಎಂ.ಜಿ.ಸಿದ್ಧರಾಮಯ್ಯನವರು ತಿಳಿಸಿದರು.
ಅವರು ಇಂದು ನಗರದ 31ನೇ ವಾರ್ಡಿನ ಜಯನಗರ ಪಶ್ಚಿಮ ಬಡಾವಣೆಯ ಆರ್.ಎಸ್.ವೀರಪ್ಪದೇವರ ಮನೆಯಲ್ಲಿ ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿ(ರಿ) ವತಿಯಿಂದ ಮನೆ-ಮನಗಳ ಧಾರ್ಮಿಕ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಶರಣರ ತತ್ವಗಳು ಮತ್ತು ವಚನಗಳ ಬಗ್ಗೆ ಮಾತನಾಡಿದರು.
ರುದ್ರಮೂರ್ತಿಎಲೆರಾಂಪುರರವರು ಮಾತನಾಡುತ್ತಾ ಶಿವಶರಣರಿಗೆ ಇಷ್ಟಲಿಂಗವನ್ನು ನೀಡಿ ಪಂಚಾಕ್ಷರಿ ಮಂತ್ರವೇ ಶ್ರೇಷ್ಠ ಎಂದು ತಿಳಿಸಿದವರು. ಬಸವಣ್ಣನವರು,ವಿಭೂತಿ,ಲಿಂಗಧಾರಣೆ,ರುದ್ರಾಕ್ಷಿ,ಅಷ್ಟಾವರಣ ಬಗ್ಗೆ ತಿಳಿಸುತ್ತಾ ಮಹಿಳೆಯರ ಹಕ್ಕು ಮತ್ತು ಕಾನೂನುಗಳನ್ನು ಅಂದೇ ರೂಪಿಸಿದವರು ಬಸವಣ್ಣನವರು,ಸಮ ಸಮಾಜವನ್ನು ರೂಪಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ,ಪರಧನ,ಪರಸ್ತ್ರಿ ಬಯಸುವುದು ಹೇಯ ಎಂದು ತಿಳಿಸಿದವರು ಬಸವಣ್ಣನವರು,ಕಾಯಕವೇ ಕೈಲಾಸ ಎಲ್ಲ ಕೆಲಸಗಳು ಶ್ರೇಷ್ಠ,ಮಾನವೀಯತೆ ಮುಖ್ಯ,ಶಿವನಸ್ಮರಣೆ ಮುಖ್ಯ,ದುಡಿದು ತಿನ್ನುವವನು ಶ್ರೇಷ್ಠ ಎಂದು ಸಾರಿದವರು ಬಸವಣ್ಣನವರು ಸಾವಿರಾರು ವಚನಗಳನ್ನು ಬರೆದು ನಮಗೆ ನೀಡಿದ್ದಾರೆ ಅವುಗಳ ಅಧ್ಯಯನ,ತಿಳುವಳಿಕೆ ಇಂದು ಬಹಳ ಮುಖ್ಯ ಮುಂದಿನ ಪೀಳಿಗೆಗೆ ವಚನಗಳ ಸಾರವನ್ನು ತಿಳಿಸಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿ(ರಿ) ಅಧ್ಯಕ್ಷರಾದ ಎಸ್.ಆರ್.ಶಿವಶಂಕರ್ ರವರು ಮನೆಮನೆಗಳಲ್ಲಿ ಶಿವಗೋಷ್ಠಿ ಮಾಡುತ್ತಿರುವುದು ಸಂತೋಷದ ವಿಚಾರ,ಎಲೆರಾಂಪುರರುದ್ರಮೂರ್ತಿರವರ ನೇತೃತ್ವದಲ್ಲಿ ಇದು ನಡೆಯುತ್ತಿದ್ದು ಸ್ಪರ್ಧಾಯುಗದಲ್ಲಿರುವ ಇಂದಿನ ಯುವಪೀಳಿಗೆಗೆ ಧರ್ಮಸಂಸ್ಕಾರವನ್ನು ನೀಡುವ ಅವಶ್ಯಕತೆ ಇದೆ,ಅಷ್ಠಾವರಣ,ಲಿಂಗ-ಜಂಗಮ,ವಿಭೂತಿ,ರುದ್ರಾಕ್ಷಿ ಇತ್ಯಾದಿಗಳ ಬಗ್ಗೆ ಯುವಕರಿಗೆ ತಿಳಿಸಬೇಕು ಅವರಿಗೆ ಉತ್ತಮ ಸಂಸ್ಕಾರ ನೀಡಿದರೆ ಬಲಿಷ್ಠ ಸಮಾಜವನ್ನು ಕಟ್ಟಬಹುದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶ್ರೀಮತಿ ಕೆ.ಆರ್.ಮಂಜುಳಾ, ಆರ್.ಎಸ್.ವೀರಪ್ಪದೇವರು, ಹೆಚ್.ಎಂ.ಟಿ.ಕುಮಾರಸ್ವಾಮಿ,ಶ್ರೀಮತಿಸೌಭಾಗ್ಯ,ಪ್ರೇಮಾರಾಧ್ಯ,ಮಂಜಣ್ಣ,ಶಾಂತರಾಜು,ಮೋಹನ್ ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
