ತುಮಕೂರು:ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸವಿತಾ ಸಮಾಜದವರು ತಮ್ಮ ವೃತ್ತಿಯನ್ನು ಆಧುನೀಕರಣಗೊಳಿಸಿ ಲಾಭದಾಯಕ ಮಾಡಿಕೊಳ್ಳಲು ಪ್ರಯತ್ನಿಸಬೇಕು. ತಮ್ಮ ಮಕ್ಕಳಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಿ ಉತ್ತಮ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಸಲಹೆ ಮಾಡಿದರು.
ಜಿಲ್ಲಾ ಸಮಿತಾ ಸಮಾಜದಿಂದ ಮಂಗಳವಾರ ನಗರದ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ, ಹಿರಿಯ ವೃತ್ತಿದಾರರಿಗೆ ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಸವಿತಾ ಸಮಾಜದ ಕುಲಕಸುಬನ್ನು ಈಗ ಬೇರೆ ಸಮುದಾಯದವರೂ ಅವಲಂಬಿಸಿದ್ದು ಪೈಪೋಟಿ ಎದುರಿಸಬೇಕಾಗಿದೆ.ಕಾಲಕ್ಕೆ ತಕ್ಕಂತೆ ಆಧುನಿಕರಣಗೊಳಿಸಿಕೊಂಡು ವೃತ್ತಿಸವಾಲುಗಳನ್ನು ಎದುರಿಸಬೇಕಾಗಿದೆ ಎಂದರು.
ಸವಿತಾ ಸಮಾಜದವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು, ಕೈಗಾರಿಕೆ, ಮಾರುಕಟ್ಟೆಯ ಬೇಡಿಕೆಗೆ ಪೂರಕವಾದ ಕೌಶಲ್ಯಾಧಾರಿತ ಶಿಕ್ಷಣ ನೀಡಿದರೆ ಅವರು ದುಡಿಮೆ ಮಾರ್ಗಕಂಡುಕೊಂಡು ಬದುಕು ರೂಪಿಸಿಕೊಳ್ಳುತ್ತಾರೆ.ಇದಕ್ಕಾಗಿ ಮಕ್ಕಳಿಗೆ ಪರಿಣಿತರ ಮಾರ್ಗದರ್ಶನ, ಉದ್ಯೋಗಾಧಾರಿತ ತರಬೇತಿ ನೀಡಲು ಹಿರಿಯರು ಒತ್ತು ನೀಡಬೇಕು ಎಂದು ಹೇಳಿದರು.
ಜಿಲ್ಲಾಸವಿತಾ ಸಮಾಜದ ಅಧ್ಯಕ್ಷ ಮಂಜೇಶ್ ಒಲಂಪಿಕ್ ಮಾತನಾಡಿ, ಸಮಾಜದ ಮಕ್ಕಳ ಶಿಕ್ಷಣಕ್ಕೆ ಸಂಘ ಹೆಚ್ಚು ಒತ್ತು ನೀಡುತ್ತಿದೆ. ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದ ಅವರು, ಸವಿತಾ ಸಮಾಜದ ಈ ಕಟ್ಟಡ ನಿರ್ಮಾಣದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರುದೊಡ್ಡ ಮಟ್ಟದಲ್ಲಿ ಸಹಕಾರ ನೀಡಿದ್ದಾರೆ, ಹೆಚ್ಚಿನ ಪ್ರಮಾಣದ ಅನುದಾನ ನೀಡಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂದು ಅಭಿನಂದಿಸಿದರು.
ಸವಿತಾ ಸಮಾಜಅಭಿವೃದ್ಧಿ ನಿಗಮ ಅಧ್ಯಕ್ಷಎಂ.ಎಸ್. ಮುತ್ತುರಾಜು ಮಾತನಾಡಿದರು,ಆಧ್ಯಾತ್ಮಕ ಚಿಂತಕರಾದ ಬ್ರಹ್ಮಶ್ರೀ ಪ್ರಭೂಜಿ ಎಸ್.ಪಿ.ಚಿದಾನಂದ್,ಕೆ.ವಿ.ನಾರಾಯಣ್, ವಿತ್ರೀ ವೇಂಚರರ್ಸ್ ರವೀಶ್ ಅರಕೆರೆ, ಮೊದಲಾದವರು ಭಾಗವಹಿಸಿದ್ದರು.
– ಚಂದ್ರಚೂಡ ಕೆ.ಬಿ
