ಕೆ.ಆರ್.ಪೇಟೆ: ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಶ್ರೀ ಗೌರಿ-ಗಣೇಶ ಪ್ರತಿಷ್ಠಾಪನೆಗೆ ಆರ್ಥಿಕ ಧನ ಸಹಾಯ ವಿತರಣಾ ಕಾರ್ಯಕ್ರಮ ಎರಡನೇ ದಿನವಾದ ಇಂದೂ ಕೂಡ ಅದ್ಧೂರಿಯಾಗಿ, ಸಡಗರ-ಸಂಭ್ರಮದಿಂದ ಮುಂದುವರೆಯಿತು.
ಯುವಕರ ನೆಚ್ಚಿನ ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ತಾಲ್ಲೂಕಿನ ಮೂಲೆ-ಮೂಲೆಗಳ ನೂರಾರು ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಗೌರಿ-ಗಣೇಶ ಯುವಕ ಬಳಗಗಳಿಗೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ ಗಣೇಶ ಪ್ರತಿಷ್ಠಾಪನೆಗೆ ಆರ್ಥಿಕ ನೆರವು ನೀಡಿ ಶುಭ ಹಾರೈಸಿದ ಮಾತನಾಡಿದ ಅವರು, ನಮ್ಮ ತಾಲ್ಲೂಕಿನಲ್ಲಿ ಗಣೇಶ ಹಬ್ಬವೆಂದರೆ ಕೇವಲ ಹಬ್ಬವಲ್ಲ, ಅದು ಯುವ ಶಕ್ತಿಯ ಒಗ್ಗಟ್ಟಿನ ಸಂಕೇತ. ಪ್ರತಿಯೊಂದು ಗ್ರಾಮದಲ್ಲೂ ಯುವಕರು ಯಾವುದೇ ಜಾತಿ, ಭೇದ-ಭಾವ ಮರೆತು ಒಗ್ಗಟ್ಟಿನಿಂದ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಬೇಕು. ಡಿಜೆ, ಕುಣಿತದ ಆಡಂಬರಕ್ಕೆ ಹೆಚ್ಚು ಒತ್ತು ಕೊಡದೆ, ಭಕ್ತಿ, ಶ್ರದ್ಧೆ ಮತ್ತು ಶಾಂತಿ-ಸೌಹಾರ್ದತೆಯಿಂದ, ಸರ್ಕಾರದ ನಿಯಮಗಳನ್ನು ಪಾಲಿಸಿ ಹಬ್ಬವನ್ನು ಆಚರಿಸಬೇಕು ಎಂದು ಕಿವಿಮಾತು ಹೇಳಿದರು.

ಕಳೆದ 6 ವರ್ಷಗಳಿಂದ ನಿರಂತರವಾಗಿ ಗೌರಿ-ಗಣೇಶ ಹಬ್ಬಕ್ಕೆ ಸಹಾಯ ಮಾಡುತ್ತಾ ಬಂದಿರುವುದು ನಮ್ಮ ಭಾಗ್ಯ. ಯುವಕರು ತೋರಿಸುತ್ತಿರುವ ಪ್ರೀತಿ-ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಎಂದು ಅವರು ಭಾವುಕವಾಗಿ ನುಡಿದರು.
ಮೊದಲನೇ ದಿನದಂತೆ ಎರಡನೇ ದಿನವೂ ಟ್ರಸ್ಟ್ ಕಚೇರಿಗೆ ಧನ ಸಹಾಯ ಪಡೆಯಲು ದೂರದ ಗ್ರಾಮಗಳಿಂದ ಬರುತ್ತಿರುವ ಸಾವಿರಾರು ಯುವಕರಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ರುಚಿಕರವಾದ ಊಟ ಹಾಗೂ ಸಂಜೆ ಟಿಫನ್ ಮತ್ತು ಚಹಾ ವ್ಯವಸ್ಥೆಯನ್ನು ಶ್ರೀ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಚ್ಚುಕಟ್ಟಾಗಿ ಕಲ್ಪಿಸಲಾಗಿದೆ ಯುವಕರಿಗೆ ಯಾವುದೇ ತೊಂದರೆಯಾಗದಂತೆ ಸ್ವತಃ ಮಲ್ಲಿಕಾರ್ಜುನ್ ರವರು ಮುಂದೆ ನಿಂತು ವ್ಯವಸ್ಥೆ ಮಾಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕಿನ ಶೀಳನೆರೆ, ಕಸಬಾ,ಅಕ್ಕಿಹೆಬ್ಬಾಳು,ಬೂಕನಕೆರೆ ಕಿಕ್ಕೇರಿ, ಪಟ್ಟಣ,ಸೇರಿದಂತೆ ವಿವಿಧ ಗ್ರಾಮಗಳ ಶ್ರೀ ಗೌರಿ-ಗಣೇಶ ಯುವಕರ ಬಳಗದ ಪದಾಧಿಕಾರಿಗಳು, ಮುಖಂಡರು ಹಾಗೂ ನೂರಾರು ಯುವಕರು ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
