ಕೊರಟಗೆರೆ ;– ವಿಶ್ವಕರ್ಮ ಸಮಾಜ ಕಲೆಯ ಮೂಲಕ ಸಮಾಜವನ್ನು ಶ್ರೀಮಂತಗೊಳಿಸಿದವರು ಸಮಾಜದಲ್ಲಿ ಪ್ರತಿಯೊಂದು ಸ್ಥಳದಲ್ಲಿ ತಮ್ಮ ಅದ್ಬುತ ಕೌಶಲ್ಯದ ಮೂಲಕ ಬದುಕನ್ನು ಸುಂದರಗೊಳಿಸುವವರೆಲ್ಲರೂ ಆಧುನಿಕ ವಿಶ್ವಕರ್ಮರಾಗಿದ್ದು ಪ್ರಾಚೀನ ಕಾಲದಿಂದಲು ಭಾರತೀಯ ಸಮಾಜವು ಕೌಶಲ್ಯಕ್ಕೆ ಅಗ್ರಸ್ಥಾನ ನೀಡಿದೆ ಎಂದು ಮಧುಗಿರಿ ಉಪವಿಭಾಗಾಧಿಕಾರಿ ಗೂಟೂರು ಶಿವಪ್ಪ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ತಾಲೂಕು ಕಛೇರಿ ಸಂಭಾಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಮಾತನಾಡಿ ವಿಶ್ವಕರ್ಮ ಸಮಾಜ ಕಲೆ, ಶಿಲ್ಪಕಲೆ ಮತ್ತು ಕರಕುಶಲತಗೆಗೆ ಹೆಸರಾದ ಸಮಾಜ ಶ್ರೀಮಂತ ಸಂಸ್ಕೃತಿಯನ್ನು ಹೊಂದುವ ಮೂಲಕ ಸಮಾಜವನ್ನು ಶ್ರೀಮಂತಗೊಳಿಸಿದವರು ಇಂದು ಹೊಸ ಹೊಸ ವಿನ್ಯಾಸಗಳು ಮಾರುಕಟ್ಟೆಗೆ ಪರಿಚಯಿಸಿರುವುದು ವಿಶ್ವಕರ್ಮರ ಕೌಶಲ್ಯದಿಂದ ವಿಶ್ವಕರ್ಮರ ಕಲೆಗೆ ಬೆಲೆ ಕಟ್ಟಲು ಸಾದ್ಯವಿಲ್ಲ ವಿಶ್ವಕರ್ಮರ ಕಲೆಯನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ ಎಂದ ಅವರು ವಿಶ್ವಕರ್ಮ ಸಮಾಜವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ವಿಶ್ವಕರ್ಮ ಯೋಜನೆ, ರಾಜ್ಯ ಸರ್ಕಾರದ ವಿಶ್ವಕರ್ಮ ಅಭಿವೃದ್ದಿ ನಿಗಮದ ಸಾಲ ಸೌಲಭ್ಯ ಯೋಜನೆಗಳು ಕುಶಲಕರ್ಮಿಗಳಿಗೆ ಹೊಸ ಭರವಸೆ ಮೂಡಿಸಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಮಂಜುನಾಥ್ ಮಾತನಾಡಿ ಆಧುನಿಕ ಜಗತ್ತಿನಲ್ಲಿ ಯಾಂತ್ರೀಕರಣ ಭರಾಟೆಯಲ್ಲಿ ಕೈಮಗ್ಗಗಳು, ಮಣಿನ ಪ್ರಾತ್ರೆಗಳು, ಮರದ ಕರಕುಶಲ ವಸ್ತುಗಳು ಮತ್ತು ಸಂಪ್ರದಾಯಿಕ ವೃತ್ತಿಗಳು ವೇಗವಾಗಿ ನೇಪಥ್ಯಕ್ಕೆ ಸರಿಯುತ್ತಿವೆ, ಯಂತ್ರನಿರ್ಮಿತ ವಸ್ತುಗಳೊಂದಿಗೆ ಸ್ಪರ್ದಿಸಲಾಗದೆ ತೀವ್ರ ಸಂಕಷ್ಟದಲ್ಲಿ ಕುಶಲಕರ್ಮಿಗಳು ಕಂಡು ಬರುತ್ತಿದ್ದು ತಲೆಮಾರುಗಳಿಂದ ಬಂದ ಕೌಶಲ್ಯಗಳು ಸೂಕ್ತ ಆದಾಯವಿಲ್ಲದೆ ನಶಿಸುತ್ತಿದೆ ತಮ್ಮ ಕುಲಕಸುಬುಗಳಿಗೆ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಮಾರುಕಟ್ಟೆಯ ಸ್ಪರ್ಶ ನೀಡಿದಾಗ ಮಾತ್ರ ಆಧುನಿಕ ಜಗತ್ತಿನಲ್ಲಿ ಸ್ಪರ್ದಿಸಲು ಸಾಧ್ಯವಾಗಿದ್ದು ಸರ್ಕಾರ ನೀಡುತ್ತಿರುವ ಯೋಜನೆಗಳನ್ನು ಸದುಪಯೋಗಪಡೆಸಿಕೊಂಡು ಕರಕುಶಲಕರ್ಮಿಗಳು ಆರ್ಥಿಕವಾಗಿ ಹಾಗೂ ಸಮಾಜಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.
ಅರ್ಚಕ ಶ್ರೀಧರಾಚಾರ್ಯ ಮತ್ತು ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ರವೀಂದ್ರನಾಥ್ ವಿಶ್ವಕರ್ಮ ಸಮುದಾಯ ಮತ್ತು ಕುಶಲಕರ್ಮಿಗಳ ಇತಿಹಾಸದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಮಧುಸೂದನ್, ಕಂದಾಯ ಇಲಾಖೆಯ ವೆಂಕಟರಂಗನ್, ವೆಂಕಟೇಶಮೂರ್ತಿ, ಮಂಜುನಾಥ್, ಬಸವರಾಜು, ನಕುಲ್, ಪದ್ಮಿನಿ, ವಿಶ್ವಕರ್ಮ ಸಮುದಾಯದ ರವೀಂದ್ರನಾಥ್, ಮುಖಂಡರುಗಳಾದ ವೀರಭದ್ರಚಾರ್, ನೀಲಕಂಠಾಚಾರ್, ಶ್ರೀಧರಚಾರ್, ತುಂಬಾಡಿ ಕೃಷ್ಣಚಾರ್, ನಾಗರಾಜು, ಪತ್ರಕರ್ತ ಸತೀಶ್, ನಾಗರಾಜು, ಗೋಪಿ, ನರಸಿಂಹಮುರ್ತಿ, ಮುರಳೀಧರ್, ಚಂದ್ರಶೇಕರಚಾರ್, ಬಿ.ಎನ್,ಕಂಠಿ, ರಾಮಣ್ಣ, ವಿಶ್ವನಾಥ್, ರಾಮಕೃಷ್ಣಚಾರ್, ಬಸವಾರಾಜು, ರುದ್ರಚಾರ್, ಪ್ರಕಾಶಚಾರ್ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.
– ಶ್ರೀನಿವಾಸ್ ಕೊರಟಗೆರೆ.
