ಹಾಸನ: ನಾಲ್ಕು ಮನೆಗಳ್ಳತನ ಪ್ರಕರಣ ಭೇದಿಸಿದ, ಆಲೂರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳುವಾಗಿದ್ದ 25 ಲಕ್ಷದ ಚಿನ್ನಾಭರಣ ಜಪ್ತಿ ಮಾಡಿರುವ, ಪೋಲಿಸರು,ಕಾನೂನು ಸಂಘರ್ಷಕ್ಕೊಳಗಾದ ಹಾಸನ ಮೂಲದವನನ್ನು ಬಂಧಿಸಿದ್ದಾರೆ.
ಆಲೂರು ಪೊಲೀಸ್ ಇನ್ಸ್ ಪೆಕ್ಟರ್ ನಿರಂಜನ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಪೂರ್ಣೆಂದ್ರ ವೈ ಪಿ, ಪುನೀತ್, ಹರೀಶ್, ಅಶೋಕ್ , ಸುನಿಲ್ ಕುಮಾರ್ ,ಶಶಾಂಕ್ ಭಾಗಿಯಾಗಿದ್ದರು.
ಆಲೂರು ಪೊಲೀಸರ ಯಶಸ್ವಿ ಕಾರ್ಯಕ್ಕೆ ಎಸ್ಪಿ ಸುಜೀತಾ ಶ್ಲಾಘಿಸಿದ್ದಾರೆ.
