ಬೆಂಗಳೂರು, ಅಕ್ಟೋಬರ್ 1, 2026: ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ (ಎಂಇಎಸ್ಎ) ವಲಯದ ನಿರ್ಮಾಣ ಹಾಗೂ ನಗರಾಭಿವೃದ್ಧಿ ಕ್ಷೇತ್ರದ ಅತ್ಯಂತ ಪ್ರಭಾವಿ ಜಾಗತಿಕ ಸಮಾವೇಶವಾದ ಬಿಗ್ 5 ಗ್ಲೋಬಲ್, ಇದೇ ನವೆಂಬರ್ 23 ರಿಂದ 26ರವರೆಗೆ ದುಬೈ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಆಯೋಜನೆಗೊಂಡಿದೆ. ಈ ಬೃಹತ್ ಕಾರ್ಯಕ್ರಮಕ್ಕೆ ಯುಎಇ ಇಂಧನ ಮತ್ತು ಮೂಲಸೌಕರ್ಯ ಸಚಿವಾಲಯ, ಯುಎಇ ಆರ್ಥಿಕ ಮತ್ತು ಪ್ರವಾಸೋದ್ಯಮ ಸಚಿವಾಲಯ, ದುಬೈ ಸಿವಿಲ್ ಡಿಫೆನ್ಸ್ ಹಾಗೂ ದುಬೈ ಮಹಾನಗರ ಪಾಲಿಕೆಗಳು ಅಧಿಕೃತ ಬೆಂಬಲ ಸೂಚಿಸಿವೆ. ಪ್ರಸ್ತುತ ತನ್ನ 47ನೇ ಆವೃತ್ತಿಯನ್ನು ಆಚರಿಸಿಕೊಳ್ಳುತ್ತಿರುವ ಈ ಪ್ರತಿಷ್ಠಿತ ಸಮಾವೇಶವು, ಈ ವಲಯದಲ್ಲಿ ಪ್ರಸ್ತುತ ಸಕ್ರಿಯವಾಗಿರುವ ಬೃಹತ್ ಯೋಜನೆಗಳಿಗೆ ಪೂರಕವಾಗಿ ಕ್ಷಿಪ್ರ ಅನುಷ್ಠಾನ, ತಂತ್ರಜ್ಞಾನ ಅಳವಡಿಕೆ, ಸುಸ್ಥಿರ ಅಭಿವೃದ್ಧಿ ಹಾಗೂ ಭವಿಷ್ಯಕ್ಕೆ ಸಜ್ಜಾಗುವ ಸಾಮರ್ಥ್ಯಗಳ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿರುವ ನಿರ್ಣಾಯಕ ಕಾಲಘಟ್ಟದಲ್ಲಿ ನಡೆಯುತ್ತಿದೆ.
ಈ ಬಾರಿಯ ಸಮಾವೇಶವು ಪ್ರಮುಖವಾಗಿ ಪೂರೈಕೆ ಸರಪಳಿಯ ಬಲವರ್ಧನೆ, ತಾಂತ್ರಿಕ ಪ್ರಗತಿ, ಸುಸ್ಥಿರ ಪರಿವರ್ತನೆ ಮತ್ತು ಭವಿಷ್ಯಕ್ಕೆ ಸನ್ನದ್ಧವಾದ ಕಾರ್ಯಪಡೆ ನಿರ್ಮಾಣ ಸೇರಿದಂತೆ ನಾಲ್ಕು ಮಹತ್ವದ ಆದ್ಯತೆಗಳ ಮೇಲೆ ಬೆಳಕು ಚೆಲ್ಲಲಿದೆ. ಈ ಆದ್ಯತೆಗಳು ಈ ಭಾಗದಲ್ಲಿ ದಿನೇದಿನೆ ವಿಕಸನಗೊಳ್ಳುತ್ತಿರುವ ಮೂಲಸೌಕರ್ಯದ ನೈಜ ಅಗತ್ಯತೆಗಳನ್ನು ನೇರವಾಗಿ ಬಿಂಬಿಸುತ್ತಿವೆ. ವಿ ದಿ ಯುಎಇ 2031, ಸೌದಿ ವಿಷನ್ 2030, ನ್ಯೂ ಕುವೈತ್ 2035 ಹಾಗೂ ಒಮಾನ್ ವಿಷನ್ 2040 ಸೇರಿದಂತೆ ಸಂಬಂಧಪಟ್ಟ ಸರ್ಕಾರಗಳ ಮಹತ್ವಾಕಾಂಕ್ಷೆಯ ಆರ್ಥಿಕ ಪರಿವರ್ತನಾ ಕಾರ್ಯಕ್ರಮಗಳು ಮತ್ತು ಎಂಇಎಎಸ್ಎ ಪ್ರದೇಶದಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವ ನಗರೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ದೀರ್ಘಾವಧಿಯ ಹೂಡಿಕೆಗೆ ಭಾರೀ ಉತ್ತೇಜನ ನೀಡುತ್ತಿವೆ. ಇದರ ಜೊತೆಗೆ ನಿರ್ಮಾಣ ಮೌಲ್ಯ ಸರಪಳಿಯಾದ್ಯಂತ ಅತ್ಯಾಧುನಿಕ ಉತ್ಪನ್ನಗಳು, ನೂತನ ತಂತ್ರಜ್ಞಾನಗಳು ಹಾಗೂ ವೃತ್ತಿಪರ ಪರಿಣತಿಗೆ ಸತತ ಬೇಡಿಕೆಯನ್ನು ಸೃಷ್ಟಿಸುತ್ತಿವೆ. ಇದು ಕಟ್ಟಡ ನಿರ್ಮಾಣ ಸಾಮಗ್ರಿಗಳು, ಹೆಚ್ವಿಎಸಿಆರ್, ಅತ್ಯಾಧುನಿಕ ನಿರ್ಮಾಣ ಉಪಕರಣಗಳು, ಎಂಇಪಿ, ಒಳಾಂಗಣ ವಿನ್ಯಾಸ (ಇಂಟೀರಿಯರ್ಸ್) ಮತ್ತು ಫಿನಿಶಿಂಗ್ಸ್ ವಲಯಗಳಲ್ಲಿ ನಿರಂತರ ವ್ಯಾಪಾರ ಮಾರುಕಟ್ಟೆಯನ್ನು ರೂಪಿಸಿದೆ.
ಈ ಕುರಿತು ಕಾರ್ಯಕ್ರಮದ ಆಯೋಜಕ ಸಂಸ್ಥೆಯಾದ ಡಿಎಂಜಿ ಈವೆಂಟ್ಸ್ ನ ಹಿರಿಯ ಉಪಾಧ್ಯಕ್ಷರಾದ ಜೋಸಿನ್ ಹೈಜ್ಮನ್ಸ್ ಅವರು, “ಎಂಇಎಎಸ್ಎ ವಲಯದಾದ್ಯಂತ ಯೋಜಿಸಲಾಗಿರುವ ಅಭಿವೃದ್ಧಿಯ ಅಗಾಧ ಪ್ರಮಾಣವು ಈ ಉದ್ಯಮ ರಂಗಕ್ಕೆ ಸುವರ್ಣಾವಕಾಶಗಳನ್ನು ಸೃಷ್ಟಿಸುತ್ತಿದೆ. ಆದರೆ ಆ ಅವಕಾಶಗಳ ಸ್ವರೂಪವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಇಂದಿನ ಯೋಜನೆಗಳು ಕೇವಲ ಒಂದೇ ವಿಭಾಗಕ್ಕೆ ಸೀಮಿತವಾಗಿರದೇ ತಂತ್ರಜ್ಞಾನ, ಸುಧಾರಿತ ಕಟ್ಟಡ ವ್ಯವಸ್ಥೆಗಳು, ಪೂರೈಕೆ ಜಾಲಗಳು, ಸುಸ್ಥಿರತೆ ಹಾಗೂ ಮಾನವ ಸಂಪನ್ಮೂಲ ಸಾಮರ್ಥ್ಯಗಳನ್ನು ಒಟ್ಟಾಗಿ ಬೆಸೆದುಕೊಂಡು ಮುನ್ನಡೆಯುತ್ತಿವೆ. ಬಿಗ್ 5 ಗ್ಲೋಬಲ್ ಈ ಎಲ್ಲಾ ಆಯಾಮಗಳನ್ನು ಒಂದೇ ಸೂರಿನಡಿ ತರುತ್ತಿದೆ. ಇದು ಯೋಜನೆಗಳ ಗುಣಮಟ್ಟದ ಜಾರಿಯ ಮೇಲೆ ಪ್ರಭಾವ ಬೀರುವ ಉತ್ಪನ್ನಗಳು, ಸೂಕ್ತ ಪಾಲುದಾರರು ಹಾಗೂ ಒಳನೋಟಗಳನ್ನು ಉದ್ಯಮಕ್ಕೆ ಒದಗಿಸುವುದರೊಂದಿಗೆ, ನಗರಾಭಿವೃದ್ಧಿ ಕ್ಷೇತ್ರದ ವಿಶಾಲ ಆದ್ಯತೆಗಳನ್ನು ಚರ್ಚಿಸಲು ಉನ್ನತ ನಾಯಕರಿಗೆ ಮುಕ್ತ ಕಾರ್ಯವೇದಿಕೆಯನ್ನು ಕಲ್ಪಿಸಿಕೊಡುತ್ತದೆ” ಎಂದಿದ್ದಾರೆ.
ಬಿಗ್ 5 ಗ್ಲೋಬಲ್ ಸಮಾವೇಶವು ಮೂಲ ಕಟ್ಟಡ ಸಾಮಗ್ರಿಗಳು, ಒಳಾಂಗಣ ವಿನ್ಯಾಸ ಮತ್ತು ಫಿನಿಶಿಂಗ್ಸ್ ನಿಂದ ಹಿಡಿದು ಎಂಇಪಿ, ನಿರ್ಮಾಣ ಉಪಕರಣಗಳು ಹಾಗೂ ಭಾರೀ ಯಂತ್ರೋಪಕರಣಗಳು, ಡಿಜಿಟಲ್ ಕನ್ಸ್ಟ್ರಕ್ಷನ್, ಜಿಯೋಸ್ಪೇಷಿಯಲ್ ತಂತ್ರಜ್ಞಾನಗಳು ಮತ್ತು ಸೌಲಭ್ಯ ನಿರ್ವಹಣೆಯವರೆಗೆ (ಫೆಸಿಲಿಟೀಸ್ ಮ್ಯಾನೇಜ್ಮೆಂಟ್) ಸಂಪೂರ್ಣ ಪ್ರಾಜೆಕ್ಟ್ ಲೈಫ್ಸೈಕಲ್ಗೆ ಅಗತ್ಯವಿರುವ ಉತ್ಪನ್ನಗಳು, ತಂತ್ರಜ್ಞಾನಗಳು ಹಾಗೂ ಪರಿಣತಿಯನ್ನು ಒಂದೆಡೆ ಸೇರಿಸುತ್ತದೆ. ಈ ಬೃಹತ್ ಪ್ರದರ್ಶನವು ಹೆವಿ, ಟೋಟಲಿ ಕಾಂಕ್ರೀಟ್, ಮಾರ್ಬಲ್ & ಸ್ಟೋನ್ ವರ್ಲ್ಡ್, ಅರ್ಬನ್ ಡಿಸೈನ್ & ಲ್ಯಾಂಡ್ಸ್ಕೇಪ್, ಹೆಚ್ವಿಎಸಿಆರ್ ವರ್ಲ್ಡ್, ಜಿಯೋವರ್ಲ್ಡ್ ಹಾಗೂ ಫ್ಯೂಚರ್ ಎಫ್ಎಂ ಸೇರಿದಂತೆ ಪ್ರಮುಖ ರಂಗಗಳನ್ನು ಏಳು ವಿಶೇಷ ವಿಭಾಗೀಯ ಕಾರ್ಯಕ್ರಮಗಳೊಂದಿಗೆ ಬೆಸೆಯುತ್ತದೆ. ಈ ಮೂಲಕ ಭಾರೀ ಉಪಕರಣಗಳು, ಕಾಂಕ್ರೀಟ್ ಉತ್ಪಾದನೆ, ಶಿಲೆಗಳು, ನಗರಾಭಿವೃದ್ಧಿ, ಭೂದೃಶ್ಯ ವಿನ್ಯಾಸ, ಕಟ್ಟಡ ವ್ಯವಸ್ಥೆಗಳು, ಜಿಯೋಸ್ಪೇಷಿಯಲ್ ತಂತ್ರಜ್ಞಾನ ಹಾಗೂ ಸೌಲಭ್ಯ ನಿರ್ವಹಣೆಯ ಮೇಲೆ ವಿಶೇಷ ಗಮನ ಹರಿಸುತ್ತದೆ.
ಪರಸ್ಪರ ಪೂರಕವಾಗಿರುವ ಈ ಎಲ್ಲಾ ವಲಯಗಳಿಗೆ ಈ ಸಮಾವೇಶವು ಏಕೈಕ ಮಹತ್ವದ ಸಂಪರ್ಕ ಕೇಂದ್ರವಾಗಿದ್ದು, ಡೆವಲಪರ್ಗಳು, ಗುತ್ತಿಗೆದಾರರು, ಯೋಜನಾ ಸಲಹೆಗಾರರು, ವಾಸ್ತುಶಿಲ್ಪಿಗಳು, ಎಂಜಿನಿಯರ್ಗಳು, ಖರೀದಿ ವಿಭಾಗದ ತಜ್ಞರು ಹಾಗೂ ನಿರ್ಧಾರಗಳನ್ನು ಕೈಗೊಳ್ಳುವ ಪ್ರಮುಖರಿಗೆ ಸಂಪೂರ್ಣ ಪ್ರಾಜೆಕ್ಟ್ ಚಕ್ರಕ್ಕೆ ಬೇಕಾದ ಪೂರೈಕೆದಾರರು ಮತ್ತು ಆಧುನಿಕ ಪರಿಹಾರಗಳನ್ನು ನೇರವಾಗಿ ತಲುಪಲು ದಾರಿ ಮಾಡಿಕೊಡುತ್ತದೆ. ಜಾಗತಿಕ ಮುಂಚೂಣಿ ಸಂಸ್ಥೆಗಳಾದ ಆ್ಯಂಕರ್ ಅಲೈಡ್, ಸೌಡಾಲ್, ಎಟರ್ನಲ್ ಹೋಮ್, ಜಮಿಲ್ ಸ್ಟೀಲ್, ಫ್ರೇಮ್ಕ್ಯಾಡ್, ಮಾಹಿ ಖೂರಿ, ದುಟ್ಕೊ ಟೆನೆಂಟ್, ಆಸ್ಟ್ರಲ್, ಎಸ್ಕೆಎಂ, ಹನಿವೆಲ್, ರೀಮ್, ಪ್ರೀಮಿಯರ್ ಕನ್ಸ್ಟ್ರಕ್ಷನ್, ಆರ್ಐಬಿ ಸಾಫ್ಟ್ವೇರ್, ನೆಮೆಟ್ಶೆಕ್, ಡಿಜೆಐ, ಲಿಬರ್, ಬಾಯರ್, ಡೂಸನ್, ಸ್ಯಾನಿ ಹಾಗೂ ಡಿವಾಲ್ಟ್ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಯೇ ಈ ಸಮಾವೇಶದ ತೂಕವನ್ನು ಸಾರುತ್ತದೆ.
2026ರ ಈ ನೂತನ ಆವೃತ್ತಿಯು ಇದೇ ಮೊದಲ ಬಾರಿಗೆ ಭಾಗವಹಿಸುತ್ತಿರುವ ಪ್ರಮುಖ ಸಂಸ್ಥೆಗಳಿಗೂ ವೇದಿಕೆಯಾಗಲಿದೆ. ನಿರ್ಮಾಣ ಸಲಕರಣೆಗಳ ಎಂಜಿನ್ ಪೂರೈಕೆದಾರ ಸಂಸ್ಥೆಯಾದ ಡೂಸನ್ ಎಂಜಿನ್ಸ್, ಪವರ್ ಟೂಲ್ಸ್ ಸ್ಪೆಷಲಿಸ್ಟ್ ಐನ್ಹೆಲ್ ಮತ್ತು ಅಲ್ಯೂಮಿನಿಯಂ ಸಿಸ್ಟಮ್ಸ್ ಪೂರೈಕೆದಾರ ಕಂಪನಿಯಾದ ರೇನರ್ಸ್ ಮೊದಲ ಬಾರಿಗೆ ಅಖಾಡಕ್ಕಿಳಿಯಲಿವೆ.
ಕಾರ್ಯಕ್ರಮದ ಅಂತಾರಾಷ್ಟ್ರೀಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತಾ, ಬಿಗ್ 5 ಗ್ಲೋಬಲ್ ಈ ಬಾರಿ 60ಕ್ಕೂ ಹೆಚ್ಚು ರಾಷ್ಟ್ರಗಳ ಪ್ರದರ್ಶಕರನ್ನು ಬರಮಾಡಿಕೊಳ್ಳಲಿದೆ. ಇದರಲ್ಲಿ 20ಕ್ಕೂ ಹೆಚ್ಚು ದೇಶಗಳ ಅಧಿಕೃತ ಪೆವಿಲಿಯನ್ಗಳು ನಿರ್ಮಾಣ ಮತ್ತು ನಗರಾಭಿವೃದ್ಧಿ ರಂಗದ ಕಂಪನಿಗಳನ್ನು ಒಂದೆಡೆ ತರಲಿವೆ. ಆಸ್ಟ್ರಿಯಾ, ಇಟಲಿ, ಜರ್ಮನಿ, ಒಮಾನ್, ಗ್ರೀಸ್, ಚೀನಾ, ಮೊರಾಕೊ, ಯುನೈಟೆಡ್ ಕಿಂಗ್ಡಮ್ (ಯುಕೆ), ಟರ್ಕಿಯೆ, ಸ್ಪೇನ್, ರಷ್ಯಾ, ಈಜಿಪ್ಟ್, ಪೋರ್ಚುಗಲ್ ಹಾಗೂ ದಕ್ಷಿಣ ಕೊರಿಯಾ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳು ತಮ್ಮ ದೇಶೀಯ ಪೆವಿಲಿಯನ್ಗಳ ಮೂಲಕ ಭಾಗವಹಿಸುತ್ತಿವೆ.
ಇಟಾಲಿಯನ್ ಟ್ರೇಡ್ ಏಜೆನ್ಸಿ (ಐಟಿಎ) ಮೂಲಕ 100ಕ್ಕೂ ಹೆಚ್ಚು ಇಟಾಲಿಯನ್ ಕಂಪನಿಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದು, ಇಟಲಿಯು ಅತ್ಯಂತ ಬಲಿಷ್ಠ ಉಪಸ್ಥಿತಿಯನ್ನು ಹೊಂದಿರಲಿದೆ. ಜತೆಗೆ ಈ ಸಂಸ್ಥೆಯು ಸಮಾವೇಶದ ಲೀಡರ್ಶಿಪ್ ಸಮ್ಮಿಟ್ಗಳಲ್ಲೂ ಪ್ರಮುಖ ಕೊಡುಗೆ ನೀಡಲಿದೆ. ತಮ್ಮ ಸಹಭಾಗಿತ್ವದ ಕುರಿತು ಮಾತನಾಡಿದ ಯುಎಇಯ ಇಟಾಲಿಯನ್ ಟ್ರೇಡ್ ಏಜೆನ್ಸಿಯ ಟ್ರೇಡ್ ಕಮಿಷನರ್ ವ್ಯಾಲೆರಿಯೊ ಸೊಲ್ಡಾನಿ, “ಮಧ್ಯಪ್ರಾಚ್ಯದ ಮಾರುಕಟ್ಟೆಗಳು ಕ್ಷಿಪ್ರ ಗತಿಯಲ್ಲಿ ಕ್ರಾಂತಿಕಾರಿ ಪರಿವರ್ತನೆಗೆ ಸಾಕ್ಷಿಯಾಗುತ್ತಿರುವ ಮತ್ತು ಬೃಹತ್ ಹೂಡಿಕೆ ನಿರ್ಧಾರಗಳು ಚುರುಕುಗೊಳ್ಳುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ಇಟಲಿಯು ತನ್ನ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಂಪನಿಗಳಿಗೆ ಈ ಪ್ರದೇಶವನ್ನು ಅತ್ಯಂತ ಆಕರ್ಷಕ ಅವಕಾಶಗಳ ತಾಣವಾಗಿ ನೋಡುತ್ತದೆ. ಬಿಗ್ 5 ಗ್ಲೋಬಲ್ನಲ್ಲಿ 110ಕ್ಕೂ ಹೆಚ್ಚು ಇಟಾಲಿಯನ್ ಸಂಸ್ಥೆಗಳ ನೇರ ಭಾಗವಹಿಸುವಿಕೆಯ ಮೂಲಕ, ನಾವು ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಬೆಂಬಲ ನೀಡುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಿದ್ದೇವೆ. ಜೊತೆಗೆ ಇಟಾಲಿಯನ್ ಉದ್ದಿಮೆಗಳು ಪ್ರಮುಖ ನಿರ್ಧಾರ-ತೆಗೆದುಕೊಳ್ಳುವ ಉನ್ನತಾಧಿಕಾರಿಗಳು ಹಾಗೂ ಯೋಜನಾ ಪಾಲುದಾರರೊಂದಿಗೆ ನೇರ ಸಂಪರ್ಕ ಸಾಧಿಸಲು ಇದು ಅತ್ಯುತ್ತಮ ಅವಕಾಶಗಳನ್ನು ತೆರೆದಿಟ್ಟಿದೆ. ನಮ್ಮ ಪಾಲ್ಗೊಳ್ಳುವಿಕೆಯು ಸಮಾವೇಶದ ಲೀಡರ್ಶಿಪ್ ಸಮ್ಮಿಟ್ಗಳಿಗೂ ವಿಸ್ತರಿಸಿದ್ದು, ವಿಶಾಲ ಉದ್ಯಮ ಸಂವಾದಕ್ಕೆ ಕೊಡುಗೆ ನೀಡುವ ಹಾಗೂ ನಿರ್ಮಾಣ, ಮೂಲಸೌಕರ್ಯ ಮತ್ತು ನಗರಾಭಿವೃದ್ಧಿ ರಂಗದಲ್ಲಿ ಇಟಾಲಿಯನ್ ಪರಿಣತಿಯನ್ನು ಜಾಗತಿಕವಾಗಿ ಹಂಚಿಕೊಳ್ಳುವ ನಮ್ಮ ದೃಢ ನಿಲುವನ್ನು ಇದು ಬಿಂಬಿಸುತ್ತದೆ” ಎಂದು ವಿವರಿಸಿದ್ದಾರೆ.
ಬಿಗ್ 5 ಗ್ಲೋಬಲ್ ಪ್ರದರ್ಶನವು ಖರೀದಿದಾರರನ್ನು ಸೂಕ್ತ ಉತ್ಪನ್ನಗಳು ಮತ್ತು ಪರಿಹಾರಗಳೊಂದಿಗೆ ಬೆಸೆಯುವುದರ ಜೊತೆಗೆ, ಇಲ್ಲಿ ನಡೆಯುವ ಮೂರು ಲೀಡರ್ಶಿಪ್ ಸಮ್ಮಿಟ್ಗಳು ಉದ್ಯಮದ ಮುಖಂಡರು, ಆವಿಷ್ಕಾರಕರು ಹಾಗೂ ನಗರ ಯೋಜನಾ ತಜ್ಞರನ್ನು ಒಂದೆಡೆ ಸೇರಿಸಿ ಮೂಲಸೌಕರ್ಯದ ಸಂಕೀರ್ಣ ಸವಾಲುಗಳನ್ನು ಕಾರ್ಯಸಾಧ್ಯ ಫಲಿತಾಂಶಗಳನ್ನಾಗಿ ಪರಿವರ್ತಿಸಲಿವೆ. ಬಿಗ್ 5 ಗ್ಲೋಬಲ್ ಲೀಡರ್ಸ್ ಸಮ್ಮಿಟ್, ಲಿವೆಬಲ್ ಸಿಟೀಸ್ ಎಕ್ಸ್ ಸಮ್ಮಿಟ್ ಮತ್ತು ಬಿಗ್ 5 ಫ್ಯೂಚರ್ಟೆಕ್ ಸಮ್ಮಿಟ್ ಗಳ ಗೋಷ್ಠಿಗಳು ನೀತಿ ನಿರೂಪಣೆ, ಬಂಡವಾಳ ಹೂಡಿಕೆ, ತಂತ್ರಜ್ಞಾನ, ಯೋಜನೆಗಳ ಸಕಾಲಿಕ ಪೂರ್ಣಗೊಳಿಸುವಿಕೆ ಹಾಗೂ ಸಮಗ್ರ ಜೀವನಯೋಗ್ಯತೆಯ ಸುತ್ತ ಉನ್ನತ ಮಟ್ಟದ ಕಾರ್ಯತಂತ್ರದ ಚರ್ಚೆಗಳನ್ನು ನಡೆಸಲಿವೆ.
ಈ ಉನ್ನತ ಮಟ್ಟದ ಶೃಂಗಸಭೆಗಳಿಗೆ ಪೂರಕವಾಗಿ, ಬಿಗ್ 5 ಟಾಕ್ಸ್ ಎಐ, ಕಾಂಕ್ರೀಟ್, ವಾಸ್ತುಶಿಲ್ಪ, ಜಿಯೋಟೆಕ್ನಿಕಲ್, ಹೆಚ್ವಿಎಸಿಆರ್, ಫೆಸಿಲಿಟಿ ಮ್ಯಾನೇಜ್ಮೆಂಟ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್, ಸುಸ್ಥಿರತೆ, ಜಿಯೋಸ್ಪೇಷಿಯಲ್ ತಂತ್ರಜ್ಞಾನ ಹಾಗೂ ಬಿಲ್ಡಿಂಗ್ ಇನ್ಫರ್ಮೇಷನ್ ಮಾಡೆಲಿಂಗ್ ಸೇರಿದಂತೆ ಹತ್ತು ಹಲವು ವಿಷಯಗಳ ಸಮಗ್ರ ಕಾರ್ಯಕ್ರಮಗಳನ್ನು ಸಾದರಪಡಿಸಲಿದೆ. ಈ ವೇದಿಕೆಯು ಸ್ಟಾರ್ಟಪ್ ಸಿಟಿ ಟಾಕ್ಸ್ ಹಾಗೂ ಪಿಚ್ ಸ್ಪರ್ಧೆ, ಇಎಸ್ಎಲ್ ವತಿಯ ಲೆಟ್ಸ್ ಟಾಕ್ ಫೈರ್, ಬಿಲ್ಡಿಂಗ್ಸ್ಮಾರ್ಟ್ ಟಾಕ್ಸ್ ಮತ್ತು ಆಶ್ರೇ ತರಬೇತಿ ಶಿಬಿರಗಳನ್ನೂ ಒಳಗೊಂಡಿರಲಿದೆ.
2026ರ ವಿಶೇಷ ಆಕರ್ಷಣೆಯಾಗಿ, ಬಿಗ್ 5 ಟಾಕ್ಸ್ ನಿರ್ಮಾಣ ಹಾಗೂ ನಗರಾಭಿವೃದ್ಧಿಯನ್ನು ಮುನ್ನಡೆಸುವ ಅಧಿಕೃತ ನಿಯಂತ್ರಕ ಚೌಕಟ್ಟುಗಳ ಕುರಿತು ವಿಸ್ತೃತವಾಗಿ ಬೆಳಕು ಚೆಲ್ಲುವ ಬಿಲ್ಡಿಂಗ್ ಕೋಡ್ಸ್ & ರೆಗ್ಯುಲೇಷನ್ಸ್ ಟಾಕ್ಸ್ ಅನ್ನು ಇದೇ ಮೊದಲ ಬಾರಿಗೆ ಪರಿಚಯಿಸುತ್ತಿದೆ.
“2025ರ ಹಿಂದಿನ ಆವೃತ್ತಿಯಲ್ಲಿ, ಭಾಗವಹಿಸಿದವರ ಪೈಕಿ ಶೇಕಡಾ 77ರಷ್ಟು ಮಂದಿ ಪ್ರಮುಖ ನಿರ್ಧಾರ ಕೈಗೊಳ್ಳುವ ಹಿರಿಯ ಅಧಿಕಾರಿಗಳಾಗಿದ್ದರು ಮತ್ತು ಭಾಗವಹಿಸಿದವರ ಒಟ್ಟಾರೆ ವಹಿವಾಟು ವೆಚ್ಚವು ಭರ್ಜರಿ 3.34 ಶತಕೋಟಿ ಡಾಲರ್ಗಳಷ್ಟಾಗಿತ್ತು. ಇದು ಉದ್ಯಮದ ಪ್ರಮುಖ ಆದ್ಯತೆಗಳು ಬೃಹತ್ ವಾಣಿಜ್ಯ ಅವಕಾಶಗಳಾಗಿ ಹೇಗೆ ಪರಿವರ್ತನೆಯಾಗುತ್ತವೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ” ಎಂದು ಜೋಸಿನ್ ಹೈಜ್ಮನ್ಸ್ ತಿಳಿಸಿದ್ದಾರೆ.
“ಈ ವರ್ಷದ ಆವೃತ್ತಿಗೆ ಸಜ್ಜಾಗುತ್ತಿರುವ ನಾವು ಹೊಸ ಉದ್ಯಮಗಳಿಗೆ ಚಾಲನೆ ನೀಡಲು, ಜಾಗತಿಕ ಸಹಯೋಗವನ್ನು ವೃದ್ಧಿಸಲು ಹಾಗೂ ರಂಗದ ವೇಗವರ್ಧನೆಗೆ ನೆರವಾಗುವ ಜ್ಞಾನ ವಿನಿಮಯಕ್ಕಾಗಿ ಎಲ್ಲಾ ಪಾಲುದಾರರನ್ನು ಸ್ವಾಗತಿಸಲು ಕಾತರರಾಗಿದ್ದೇವೆ” ಎಂದಿದ್ದಾರೆ.
ಬಿಗ್ 5 ಗ್ಲೋಬಲ್ ವಿಶ್ವಮಾನ್ಯ ಪಾಲುದಾರರು ಹಾಗೂ ಪ್ರಾಯೋಜಕರ ಪ್ರಬಲ ಜಾಲದೊಂದಿಗೆ ಕೈಜೋಡಿಸಿರುವುದನ್ನು ಹೆಮ್ಮೆಯಿಂದ ಪ್ರಕಟಿಸಿದೆ. ಮುಖ್ಯ ಬೆಂಬಲ ಪಾಲುದಾರರಾಗಿ ಇಂಧನ ಮತ್ತು ಮೂಲಸೌಕರ್ಯ ಸಚಿವಾಲಯ, ಬೆಂಬಲ ಪಾಲುದಾರರಾಗಿ ದುಬೈ ಸಿವಿಲ್ ಡಿಫೆನ್ಸ್, ಆರ್ಥಿಕ ಮತ್ತು ಪ್ರವಾಸೋದ್ಯಮ ಸಚಿವಾಲಯ, ದುಬೈ ಮಹಾನಗರ ಪಾಲಿಕೆ, ಪುರಸಭೆಗಳು ಮತ್ತು ಸಾರಿಗೆ ಇಲಾಖೆ, ರಾಸ್ ಅಲ್ ಖೈಮಾ ಮುನಿಸಿಪಾಲಿಟಿ ಹಾಗೂ ರಿಯಾದ್ ಪ್ರಾದೇಶಿಕ ಮುನಿಸಿಪಾಲಿಟಿ, ಹೆಡ್ಲೈನ್ ಪಾಲುದಾರರಾಗಿ ಇಟಾಲಿಯನ್ ಟ್ರೇಡ್ ಏಜೆನ್ಸಿ, ಕಾರ್ಯತಂತ್ರ ಪಾಲುದಾರರಾಗಿ ಟಾಲ್ಕೊ | ಸೌದಿ ಮೇಡ್, ಹೆಚ್ವಿಎಸಿಆರ್ ವರ್ಲ್ಡ್ ಕಾರ್ಯತಂತ್ರ ಪಾಲುದಾರರಾಗಿ ಮಿಡಿಯಾ, ನಿರ್ಮಾಣ ಅನುಷ್ಠಾನ ಪಾಲುದಾರರಾಗಿ ಟ್ರೋಜನ್ ಕನ್ಸ್ಟ್ರಕ್ಷನ್ ಹೋಲ್ಡಿಂಗ್, ಸಂಯೋಜಿತ ಫ್ರೀಜೋನ್ ಪ್ರಾಯೋಜಕರಾಗಿ ಕೆಝಡ್ ಗ್ರೂಪ್, ಜಾಗತಿಕ ಕೈಗಾರಿಕಾ ಪ್ರಾಯೋಜಕರಾಗಿ ನ್ಯಾಷನಲ್ ಇಂಡಸ್ಟ್ರೀಸ್ ಪಾರ್ಕ್, ಕನ್ಸ್ಟ್ರಕ್ಷನ್ ಮೊಬಿಲಿಟಿ ಪ್ರಾಯೋಜಕರಾಗಿ ಯುನೈಟೆಡ್ ಮೋಟಾರ್ಸ್ & ಹೆವಿ ಇಕ್ವಿಪ್ಮೆಂಟ್, ಸುಸ್ಥಿರ ಅಭಿವೃದ್ಧಿ ಪ್ರಾಯೋಜಕರಾಗಿ ದುಬೈ ಇನ್ವೆಸ್ಟ್ಮೆಂಟ್ಸ್ ಪಾರ್ಕ್, ಹೆಚ್ವಿಎಸಿಆರ್ ವರ್ಲ್ಡ್ ಪ್ರೀಮಿಯಂ ಸಿಸ್ಟಮ್ಸ್ ಪ್ರಾಯೋಜಕರಾಗಿ ತೋಷಿಬಾ, ಗೋಲ್ಡ್ ಪ್ರಾಯೋಜಕರಾಗಿ ಎಂಐಇ ಗ್ರೂಪ್ಸ್ ಮತ್ತು ಬ್ರೋನ್ಜ್ ಪ್ರಾಯೋಜಕರಾಗಿ ಡಿವಾಲ್ಟ್, ದಿ ನೆಮೆಟ್ಶೆಕ್ ಗ್ರೂಪ್ ಹಾಗೂ ಸ್ಟ್ಯಾನ್ಲಿ ಸಂಸ್ಥೆಗಳು ಜತೆಯಾಗಿವೆ.
ಬಿಗ್ 5 ಗ್ಲೋಬಲ್ ಸಮಾವೇಶಕ್ಕೆ ಅಧಿಕೃತ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಈ ಸಮಾವೇಶವು 2026ರ ನವೆಂಬರ್ 23 ರಿಂದ 26 ರವರೆಗೆ ದುಬೈ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ವೈಭವಯುತವಾಗಿ ಜರುಗಲಿದೆ. ಕಾರ್ಯಕ್ರಮದ ಹೆಚ್ಚಿನ ವಿವರಗಳು ಹಾಗೂ ಆನ್ಲೈನ್ ನೋಂದಣಿಗಾಗಿ ಅಧಿಕೃತ ಜಾಲತಾಣ www.big5global.com ಗೆ ಭೇಟಿ ನೀಡಬಹುದು.
ಬಿಗ್ 5 ಗ್ಲೋಬಲ್ ಸಂಕ್ಷಿಪ್ತ ಪರಿಚಯ:
45 ವರ್ಷಗಳಿಗೂ ಹೆಚ್ಚಿನ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಬಿಗ್ 5 ಗ್ಲೋಬಲ್, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ಪ್ರದೇಶದ ಅತ್ಯಂತ ಪ್ರಭಾವಶಾಲಿ ನಿರ್ಮಾಣ ಹಾಗೂ ನಗರಾಭಿವೃದ್ಧಿ ಮಹಾಸಂಗಮವಾಗಿದೆ. ದುಬೈ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ನವೆಂಬರ್ 23 ರಿಂದ 26ರವರೆಗೆ ನಡೆಯಲಿರುವ ಈ ಪ್ರದರ್ಶನವು, ಜಗತ್ತಿನ 165ಕ್ಕೂ ಹೆಚ್ಚು ದೇಶಗಳಿಂದ ಬರೋಬ್ಬರಿ 65,000ಕ್ಕೂ ಅಧಿಕ ಜಾಗತಿಕ ಭಾಗವಹಿಸುವವರನ್ನು ಹಾಗೂ 1,800 ಪ್ರದರ್ಶಕರನ್ನು ಯುಎಇಗೆ ಆಕರ್ಷಿಸುತ್ತದೆ. ಮೀಸಲಾದ ವಲಯಗಳು ಮತ್ತು ಹೆವಿ, ಟೋಟಲಿ ಕಾಂಕ್ರೀಟ್, ಮಾರ್ಬಲ್ & ಸ್ಟೋನ್ ವರ್ಲ್ಡ್, ಅರ್ಬನ್ ಡಿಸೈನ್ & ಲ್ಯಾಂಡ್ಸ್ಕೇಪ್, ಹೆಚ್ವಿಎಸಿಆರ್ ವರ್ಲ್ಡ್, ಜಿಯೋವರ್ಲ್ಡ್ ಮತ್ತು ಫ್ಯೂಚರ್ ಎಫ್ಎಂ ಎಂಬ ಏಳು ವಿಶೇಷ ಕಾರ್ಯಕ್ರಮಗಳ ಮೂಲಕ ಸಂಪೂರ್ಣ ನಿರ್ಮಾಣ ಹಾಗೂ ನಗರಾಭಿವೃದ್ಧಿ ಮೌಲ್ಯ ಸರಪಳಿಯನ್ನು ಇದು ವ್ಯಾಪಿಸಿದೆ. ನಿರ್ಮಾಣದ ಪ್ರತಿಯೊಂದು ಹಂತಕ್ಕೂ ಅಂತಾರಾಷ್ಟ್ರೀಯ ಮಟ್ಟದ ಕಟ್ಟಡ ಪರಿಹಾರಗಳನ್ನು ಪಡೆದುಕೊಳ್ಳಲು ಇದು ಉದ್ಯಮ ವೃತ್ತಿಪರರಿಗೆ ಸಮಗ್ರ ವೇದಿಕೆ ಕಲ್ಪಿಸುತ್ತದೆ.
ಹೆಚ್ಚಿನ ವಿವರ ಹಾಗೂ ನೋಂದಣಿಗಾಗಿ www.big5global.com ಗೆ ಲಾಗಿನ್ ಆಗಬಹುದು.
