ಹಾಸನ: ಶಿಕ್ಷಕರ ಕಾಲೋನಿ 2ನೇ ಹಂತ, ಹೆಲ್ತ್ ಲೇಔಟ್ ಹಾಗೂ ಸತ್ತೇ ಕಟ್ಟೆಕೆರೆ (ಎಸ್ಬಿಎಂ) ಬಡಾವಣೆಗಳ ಸ್ವಾಮಿ ವಿವೇಕಾನಂದ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘದ ಸದಸ್ಯರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳು:
ಗೌರವಾಧ್ಯಕ್ಷರಾಗಿ ಕುಮಾರಸ್ವಾಮಿ, ಅಧ್ಯಕ್ಷರಾಗಿ ವೆಂಕಟೇಶಣ್ಣ, ಉಪಾಧ್ಯಕ್ಷರಾಗಿ ಲೋಹಿತ್, ಪ್ರಧಾನ ಕಾರ್ಯದರ್ಶಿಯಾಗಿ ಶಾರದಾ, ಖಜಾಂಚಿಯಾಗಿ ಜ್ಞಾನೇಶ್ವರಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ: ಕಿಶೋರ್, ಯೋಗ ನರಸಿಂಹ, ಕುಮಾರೇಗೌಡ, ಮಂಜೇಗೌಡ, ರೀತಾ, ಸುಷ್ಮಾ ಹರೀಶ್, ಚಂದ್ರಿಕಾ, ಪ್ರೇಮ ಕಾಂತರಾಜ್ ಹಾಗೂ ಸುಷ್ಮಾ (ಮಳಲಿ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕರಿಗೆ ಸಂಘದ ಸದಸ್ಯರು ಮತ್ತು ಬಡಾವಣೆಯ ನಿವಾಸಿಗಳು ಅಭಿನಂದನೆ ಸಲ್ಲಿಸಿ, ಸಂಘದ ಅಭಿವೃದ್ಧಿ ಹಾಗೂ ನಿವಾಸಿಗಳ ಹಿತಾಸಕ್ತಿಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಶುಭ ಹಾರೈಸಿದರು.
