ತುಮಕೂರು: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜವ್ಯವೆಸಗಿದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ಪ್ರಾಧ್ಯಾಪಕ ಮತ್ತು ಕಾಂಗ್ರೆಸ್ ಸಂಸದ ಅಂಗೋಂಚ ಬಿಮೋಲ್ ಅಕೋಯಿಜಾಮ್ ಅವರನ್ನು ಸಂಸತ್ ಸ್ಥಾನದಿಂದ ವಜಾಗೊಳಿಸಿ, ಶಿಕ್ಷೆ ವಿಧಿಸಿಬೇಕು ಎಂದು ಒತ್ತಾಯಿಸಿ, ಮಹಿಳಾ ಸಬಲೀಕರಣದ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ ನಾಯಕರು ಈ ಪ್ರಕರಣದ ಬಗ್ಗೆ ಧ್ವನಿ ಮಾಡದೆ ದ್ವಂದ್ವ ನೀತಿ ಅನುಸರಿಸಿದ್ದಾರೆಂದು ಟೀಕಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಮುಖಂಡರು ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಜೆಎನ್ಯು ವಿಶ್ವವಿದ್ಯಾಲಯ ಪ್ರಾಧ್ಯಾಪಕ, ಕಾಂಗ್ರೆಸ್ ಸಂಸದ ಬಿಮೋಲ್ ಅಕೋಯಿಜಾಮ್ವಿರುದ್ಧ ಅನೇಕ ಲೈಂಗಿಕ ಕಿರುಕುಳ ಆರೋಪಗಳಿದ್ದರೂ, ಖಂಡಿದೆ, ತಮ್ಮದೇ ಪಕ್ಷದ ಸಂಸದನ ವಿರುದ್ಧ ಕ್ರಮ ತೆಗೆದುಕೊಳ್ಳದೆ ಕಾಂಗ್ರೆಸ್ ನಾಯಕರು ಮೌನವಾಗಿದ್ದಾರೆ.ಬಿಮೋಲ್ ವಿರುದ್ಧ ಕಾಂಗ್ರೆಸ್ನವರು ಯಾವುದೇ ಹೇಳಿಕೆ ನೀಡದೆ ಆರೋಪಿಯ ರಕ್ಷಣೆ ಮಾಡುತ್ತಿದ್ದಾರೆ.ಪ್ರಾಧ್ಯಾಪಕನಾಗಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುವುದು ಹೀನಾಯಕೃತ್ಯ ಆದ್ದರಿಂದ ಆತನಿಗೆ ತಕ್ಷಣವೇ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರಿಗೆ ಮಹಿಳೆಯರಿಗೆ ಗೌರವ ನೀಡುವ,ಅವರಿಗೆ ರಕ್ಷಣೆ ನೀಡುವ ಬದ್ಧತೆಇಲ್ಲ.ರಾಜ್ಯಕಾಂಗ್ರೆಸ್ ಸಂಪುಟದಲ್ಲಿಒಬ್ಬ ಮಹಿಳೆಗೂ ಸಚಿವ ಸ್ಥಾನ ನೀಡಿಲ್ಲ. ಮಹಿಳೆಯರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಹೊರತು, ಅವರನ್ನು ಸಮಾನತೆಯಿಂದ ಕಾಣುವ, ಸ್ಥಾನಮಾನ, ಗೌರವ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರ ರಕ್ಷಣೆ, ದೇಶದ ಸುಭದ್ರತೆ ಬಗ್ಗೆ ಬದ್ಧತೆ ಇಲ್ಲ ಎಂದು ಆರೋಪಿಸಿದರು.
ಬಿಜೆಪಿ ಕಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಬಿಜೆಪಿ ಮಹಿಳಾ ಮೋರ್ಚಾಜಿಲ್ಲಾಧ್ಯಕ್ಷೆಚೈತ್ರ ಮಂಜುನಾಥ್ ಮಾತನಾಡಿದರು.
ಬಿಜೆಪಿ ಹಿರಿಯ ಮುಖಂಡ ವೈ.ಹೆಚ್. ಹುಚ್ಚಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷ ಮಹಿಳಾ ಸಬಲೀಕರಣಕ್ಕೆಒತ್ತುಕೊಡುತ್ತದೆಎಂದುರಾಹುಲ್ಗಾಂಧಿ ಭಾಷಣ ಬಿಗಿಯುತ್ತಾರೆ.ಜೆಎನ್ಯು ಪ್ರಕರಣದ ಬಗ್ಗೆ ಯಾಕೆ ಮೌನ ವಹಿಸಿದ್ದೀರಿ, ಮಹಿಳೆಯರ ಬಗ್ಗೆ ನಿಮ್ಮ ನಿಲುವು ಏನು ಎಂದು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಹಿರಿಯ ಮುಖಂಡರಾದ ಹೆಚ್.ಎಂ.ರವೀಶಯ್ಯ, ಟಿ.ಹೆಚ್.ಹನುಮಂತರಾಜು, ಕಾರ್ಯದರ್ಶಿ ಕೆ.ವೇದಮೂರ್ತಿ, ಬಿ.ಹೆಚ್. ವಸಂತ, ಮಂಜುಳಾ ಲೋಕೇಶ್, ವಿರೂಪಾಕ್ಷಪ್ಪ, ಸತ್ಯಮಂಗಲ ಜಗದೀಶ್, ಮುಖಂಡರಾದ ಭೈರಣ್ಣ, ರೇಖಾಕುಮಾರ್, ತಾರಾದೇವಿ, ಪದ್ಮಾ ವೆಂಕಟೇಶ್, ಅನ್ನಪೂರ್ಣ, ನವಚೇತನ್, ಬಂಬೂ ಮೋಹನ್, ಪ್ರೀತಂಜೈನ್, ಹೊಳಕಲ್ಲು ಆಂಜನಪ್ಪ, ಗಂಗೇಶ್ ಹದ್ದಿನಕಲ್ಲು, ಹನುಮಂತರಾಜು, ವೆಂಕಟೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
