ತುಮಕೂರು:ತುಮಕೂರು ಜಿಲ್ಲೆಗೆ ಇಲ್ಲಿವರೆಗೂ ಗೆದ್ದಿರುವ ಬಿಜೆಪಿ, ಜೆಡಿಎಸ್ ವಿಧಾನಪರಿಷತ್ ಸದಸ್ಯರ ಕೊಡುಗೆ ಏನು ಎಂಬುದನ್ನು ಸ್ಪಷ್ಟಪಡಿಸಲಿ,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಸಿಎಂ,ಡಿಸಿಎಂ ಇರುವುದರಿಂದ ಜಿಲ್ಲೆಗೆ, ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಏನು ಬೇಕಾದರೂ ಕೊಡುಗೆ ನೀಡಬಹುದು,ಶಶಿಹುಲಿಕುಂಟೇಮಠ್ ರವರು ಒಬ್ಬ ಹೋರಾಟಗಾರ,ರೈತರ ಮಗ,ಇಲ್ಲಿವರೆಗೂ ಹಲವಾರು ಹೋರಾಟ ಮಾಡಿಕೊಂಡು ಬಂದಿರುವ ಯುವನೇತಾರ, 40 ವರ್ಷದ ಒಬ್ಬ ಯುವಕನಿಗೆ ಇಂದು ಕಾಂಗ್ರೆಸ್ ಟಿಕೆಟ್ ನೀಡಿದೆ,ಆಗ್ನೇಯ ಪದವೀಧರ ಕ್ಷೇತ್ರದ ಮತದಾರರು ಬುದ್ಧಿವಂತರು,ಜ್ಞಾನಿಗಳು ಎಲ್ಲವನ್ನೂ ಯೋಚಿಸಿ ನಮ್ಮ ಅಭ್ಯರ್ಥಿಗೆ ಮತ ಹಾಕುತ್ತಾರೆ,ಬಿಜೆಪಿ ಟಿಕೆಟ್ ಘೋಷಣೆ ಮಾಡುವುದಕ್ಕಿಂತ ಒಂದು ವರ್ಷದ ಹಿಂದೆಯೇ ಶಶಿರವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿ ಆಶೀರ್ವದಿಸಿತ್ತು,ನಮ್ಮ ಅಭ್ಯರ್ಥಿ ಹೀಗಾಗಲೇ ಆಗ್ನೇಯ ಪದವೀಧರ ಕ್ಷೇತ್ರವಾದ 5 ಜಿಲ್ಲೆಗಳಲ್ಲಿ ಪದವೀಧರ ಮತದಾರರನ್ನು ಖುದ್ದಾಗಿ ಭೇಟಿ ನೀಡಿ ಶಿಕ್ಷಕರು,ಪದವೀಧರರ ಸಮಸ್ಯೆಗಳನ್ನು ಆಲಿಸಿದ್ದಾರೆ ಅವರೊಂದಿಗೆ ಚರ್ಚಿಸಿದ್ದಾರೆ ಆದ್ದರಿಂದ ಸಿಎಂ,ಡಿಸಿಎಂ ರವರ ಆಶೀರ್ವಾದ ಅವರ ಮೇಲಿದೆ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಶಶಿಹುಲಿಕುಂಟೇಮಠ್ ಗೆಲುವಿಗೆ ಕಾಯಾ,ವಾಚಾ ಮನಸಾ ಕೆಲಸ ಮಾಡುತ್ತಿದ್ದೇವೆ ಎಲ್ಲ ಪದವೀದರ ಮತದಾರರು ನಮ್ಮ ಅಭ್ಯರ್ಥಿಗೆ ಪ್ರಥಮಪ್ರಾಶಸ್ತ್ಯದ ಮತವನ್ನು ನೀಡಿ ಅವರನ್ನು ಗೆಲ್ಲಿಸಿ ವಿಧಾನಪರಿಷತ್ ಗೆ ಕಳಿಸಲು ಆಶೀರ್ವದಿಸಬೇಕೆಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರು ಮತ್ತು ಹಿರಿಯ ಕಾಂಗ್ರೆಸ್ ಮುಖಂಡರಾದ ಡಿ.ಸಿ.ಗೌರಿಶಂಕರ್ ರವರು ಮನವಿ ಮಾಡಿದರು.
ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕರಾದ ಡಾ||ಎಸ್.ರಫೀಕ್ ಅಹಮದ್ ರವರು ಮಾತನಾಡುತ್ತಾ ಇಲ್ಲಿವರೆವಿಗೂ ಗೆದ್ದಿರುವ ಬಿಜೆಪಿ ವಿಧಾನಪರಿಷತ್ ಸದಸ್ಯರು ಎಷ್ಟು ಬಾರಿ ಜಿಲ್ಲೆಗೆ ಬಂದಿದ್ದಾರೆ,ಅವರ ಕೊಡುಗೆ ಜಿಲ್ಲೆಯ ಮತದಾರರಿಗೆ ಏನಿದೆ? ಎಂದು ಪ್ರಶ್ನಿಸಿದರು.ಶಶಿಹುಲಿಕುಂಟೇಮಠ್ ರವರು ಕಳೆದ 1 ವರ್ಷದಿಂದ ಎಲ್ಲ ಪದವೀಧರ ಮತದಾರರನ್ನು ಭೇಟಿ ಮಾಡಿ ಅವರ ಹೆಸರನ್ನು ಮತದಾರರ ಪಟ್ಟಿಗೆ ನೋಂದಣಿ ಮಾಡಿಸಿದ್ದಾರೆ,5 ಜಿಲ್ಲೆಯ ಪದವೀಧರ ಮತದಾರರು ಈ ಬಾರಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ,ನಮ್ಮ ಸಕಾರ 72 ಸಾವಿರ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡುತ್ತಿದ್ದಾರೆ, 5ಭಾಗ್ಯಗಳನ್ನು ನೀಡುತ್ತಾ ಪದವೀಧರರಿಗೆ ಯುವನಿಧಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದರು.

ಹಿರಿಯ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್ ರವರು ಮಾತನಾಡುತ್ತಾ ತುಮಕೂರು ಜಿಲ್ಲೆಯಲ್ಲಿ 50 ಸಾವಿರ ಪದವೀಧರ ಮತದಾರರು ಇದ್ದಾರೆ,ನಮ್ಮ ಅಭ್ಯರ್ಥಿ ಸ್ಥಳೀಯರು,ನಮ್ಮ ಅಭ್ಯರ್ಥಿ ಕಾಲಿಗೆ ಚಕ್ರಸುತ್ತಿಕೊಂಡು 5 ಜಿಲ್ಲೆಗಳನ್ನು ಸುತ್ತಿ ಎಲ್ಲ ಸಮಸ್ಯೆಗಳನ್ನು ಆಲಿಸಿ ಪಟ್ಟಿ ಮಾಡಿಕೊಂಡು ಅವುಗಳ ಪರಿಹಾರಕ್ಕಾಗಿ ಹೋರಾಟ ರೂಪಿಸುತ್ತಿದ್ದಾರೆ,ಎಸ್.ಐ.ಆರ್.ಬಗ್ಗೆ ವಿನಾಕಾರಣ ವಿರೋಧಪಕ್ಷಗಳು ಜ್ಞಾನೇಶ್ ಕುಮಾರ್ ರವರನ್ನು ಮುಂದಿಟ್ಟುಕೊಂಡು ತೀವ್ರ ಗೊಂದಲ ಸೃಷ್ಟಿಸುತ್ತಿದೆ,23ರಂದು ನಡೆಯುವ ಚುನಾವಣೆಯಲ್ಲಿ ಶಶಿಹುಲಿಕುಂಟೇಮಠ್ ರವರನ್ನು ಆರಿಸಿ,ವಿಧಾನಪರಿಷತ್ ನಲ್ಲಿ ಪದವೀದರರ ಸಮಸ್ಯೆಗಳ ಬಗ್ಗೆ ಮಾತನಾಡಲು ಗೆಲ್ಲಿಸಿ ಎಂದು ಮನವಿ ಮಾಡಿದರು.
ಅಭ್ಯರ್ಥಿ ಶಶಿಹುಲಿಕುಂಟೇಮಠ್ ರವರು ಮಾತನಾಡುತ್ತಾ ನಾನೊಬ್ಬ ಸರ್ವೀಸ್ ಮ್ಯಾನ್ ಬ್ಯುಸಿನೆಸ್ ಮ್ಯಾನಲ್ಲ,ನಾನು ಎನ್.ಎಸ್.ಯು.ಐ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ,ಇಲ್ಲಿಯವರೆಗೂ ಗೆದ್ದ ಬಿಜೆಪಿ,ಜೆಡಿಎಸ್ ಸದಸ್ಯರು ವಿಧಾನಪರಿಷತ್ ಒಳಗೆ ಹೊರಗೆ ಏನು ಮಾತಾಡಿದ್ದಾರೆ ಎಂಬುದನ್ನು ಮತದಾರರಿಗೆ ಮೊದಲು ತಿಳಿಸಲಿ,ಆಗ್ನೇಯ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ,ಪದವೀದರರ ಸಮಸ್ಯೆಗಳಿಗೆ ಯಾವ ರೀತಿ ಧ್ವನಿಯಾಗಿದ್ದಾರೆ?ಎಂಬುದನ್ನು ಮೊದಲು ತಿಳಿಸಲಿ,ನಾನು ಗೆದ್ದರೆ ಪದವೀದರರ ಸಮಸ್ಯೆಗಳಾದ ನಿರುದ್ಯೋಗ,ಶಿಕ್ಷಣ ಕ್ಷೇತ್ರಕ್ಕೆ ದುಡಿಯುತ್ತೇನೆ ಎಲ್ಲ ಮತದಾರರ ಧ್ವನಿಯಾಗಿ ವಿಧಾನಪರಿಷತ್ ಒಳಗೆ ಹೊರಗೆ ಕೆಲಸ ಮಾಡಿ ಪದವೀದರರ ಋಣವನ್ನು ತೀರಿಸುತ್ತೇನೆ ಎಂದು ತಿಳಿಸಿದರು.
