ತುಮಕೂರು: ರಾಜ್ಯದಲ್ಲಿ ತೀವ್ರ ಬರ ಇದ್ದರೂ ತುಮಕೂರು ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ.ಈಗ ಬುಗುಡನಹಳ್ಳಿ ಕೆರೆಯಲ್ಲಿ ಲಭ್ಯವಿರುವ ನೀರು ಜನವರಿವರೆಗೆ ಸಾಕಾಗಬಹುದು, ನಾಗರೀಕರಿಗೆ ತೊಂದರೆ ಆಗದಂತೆ ನೀರು ಪೂರೈಕೆ ಮಾಡಬೇಕು. ನೀರು ಶುದ್ಧೀಕರಣ ಘಟಕಗಳು ಹಾಗೂ ನೀರು ಪೂರೈಕೆ ಸಂಬಂಧಿಸಿದ ಯಂತ್ರಗಳು ಕೆಟ್ಟುಹೋಗಿ ತೊಂದರೆ ಆಗದಂತೆ ಮುನ್ನೆಚ್ಚರವಹಿಸಬೇಕು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಗರಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳಿಗೆ ಗಂಭೀರ ಸೂಚನೆ ನೀಡಿರುವುದಾಗಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಪ್ರಸ್ತುತ ಬುಗುಡನಹಳ್ಳಿಕೆರೆಯಲ್ಲಿ 272 ಎಂಸಿಎಫ್ಟಿ ನೀರು ಲಭ್ಯವಿದೆ, ಇದರಲ್ಲಿ 240 ಎಂಸಿಎಫ್ಟಿ ನೀರನ್ನು ಬಳಕೆ ಮಾಡಿಕೊಳ್ಳಬಹುದು.ಆದರೆ ಜನವರಿ ಆರಂಭದ ವೇಳೆಗೆ ತುಮಕೂರಿಗೆ ಹೇಮಾವತಿ ಜಲಾಶಯದಿಂದ ನೀರು ಹರಿಸಬೇಕು.ಇಲ್ಲವಾದರೆ ನಗರದಲ್ಲಿ ಕುಡಿಯುವ ನೀರಿಗೆ ತೊಂದರೆ ಅಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದರು.
ಅಮಾನಿಕೆರೆಯಲ್ಲಿ ನೀರು ಸಂಗ್ರಹವಾಗಿರುವ ಕಾರಣ ಸುತ್ತಮುತ್ತಲ ಪ್ರದೇಶಗಳ ಕೊಳವೆಬಾವಿಗಳು ಜಲಾವೃತವಾಗಿ ನಗರದ ಶೇಕಡ 30ರಷ್ಟು ನೀರಿನ ಬೇಡಿಕೆಯ ಒತ್ತಡ ಕಡಿಮೆಯಾಗಿದೆ ಎಂದು ಹೇಳಿದರು.
ನಗರಪಾಲಿಕೆಯ ಟಾಸ್ಕ್ಫೋರ್ಸ್ ಸಭೆಯಲ್ಲಿ ನೀರು ಸರಬರಾಜು ಬಗ್ಗೆ ಆಯುಕ್ತರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ನೀರಿನ ಸಮಸ್ಯೆಯಾಗದಂತೆ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ನಗರದಲ್ಲಿ ಸುಮಾರು 837 ಕೊಳವೆ ಬಾವಿಗಳಿದ್ದು, ಅವುಗಳಲ್ಲಿ ಈಗ 719 ಕೊಳವೆಬಾವಿಗಳ ನೀರಿನ ಬಳಕೆ ಮಾಡಲಾಗುತ್ತದೆ. ಪಂಪ್ಸೆಟ್ಗಳು ಕೆಡದಂತೆ, ಕೆಟ್ಟರೆ ತಕ್ಷಣ ದುರಸ್ಥಿ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು.ಜನಸಂಖ್ಯೆ ಏರುತ್ತಿದ್ದು ನಗರದಲ್ಲಿ ಇನ್ನೂ 15 ಓವರ್ ಹೆಡ್ ಟ್ಯಾಂಕ್ಗಳ ಅಗತ್ಯವಿದೆ ಎಂದರು.
*ಎನ್.ಡಿ.ಎ.ಅಭ್ಯರ್ಥಿ ಕೆ.ಎಂ.ಸುರೇಶ್ ಗೆಲುವು ಖಚಿತ:*
ಆಗ್ನೇಯ ಪದವಿಧರರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ಅವರ ಪರವಾಗಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಪ್ರಚಾರ ಮಾಡುತ್ತಿದ್ದರೆ.ಈ ಕ್ಷೇತ್ರದಲ್ಲಿಇದೂವರೆಗೆ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಮಾತ್ರ ಗೆದ್ದಿದ್ದು, ಈ ಬಾರಿ ಎರಡೂ ಪಕ್ಷಗಳ ಮೈತ್ರಿ ಅಭ್ಯರ್ಥಿ ಕಣದಲ್ಲಿದ್ದು ಎರಡೂ ಪಕ್ಷಗಳ ಕಾರ್ಯಕರ್ತರು ಕೆಲಸ ಮಾಡುತ್ತಿರುವುದರಿಂದನಮ್ಮಅಭ್ಯರ್ಥಿಹೆಚ್ಚಿನ ಮತಗಳ ಅಂತರದಿಂದಚುನಾಯಿತರಾಗುತ್ತಾರೆ.ಕೆ.ಎಂ. ಸುರೇಶ್ಅವರು ಸಂಭಾವಿತರು, ಶಿಕ್ಷಣ ಸಂಸ್ಥೆ ಹೊಂದಿದ್ದಾರೆ.ಅವರಿಗೆ ಶಿಕ್ಷಕರು ಹಾಗೂ ಪದವಿಧರರ ಸಮಸ್ಯೆಗಳ ಅರಿವಿದೆಎಂದುಜ್ಯೋತಿಗಣೇಶ್ ಹೇಳಿದರು.
ಬಿ.ಜಿ. ಕೃಷ್ಣಪ್ಪ, ಹನುಂತರಾಯಪ್ಪ, ಮಾಜಿ ವಿಪಕ್ಷ ನಾಯಕ ಸಿ.ಎನ್.ರಮೇಶ್, ಹೆಚ್.ಮಲ್ಲಿಕಾರ್ಜುನ್, ಬಿಜೆಪಿ ಮುಖಂಡರಾದ ಟಿ.ಆರ್.ಸದಾಶಿವಯ್ಯ, ಕೆ.ವೇದಮೂರ್ತಿ, ಜಿಲ್ಲಾ ಬಿಜೆಪಿ ವಕ್ತಾರರಾದ ಜೆ.ಜಗದೀಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
– ಚಂದ್ರಚೂಡ ಕೆ.ಬಿ.
