ಬೆಂಗಳೂರು, ಅ.17: ಜಾಗತಿಕ ಖ್ಯಾತಿಯ ಆಭರಣ ಮಳಿಗೆ ಜೋಯಾಲುಕ್ಕಾಸ್ ಬೆಂಗಳೂರಿನ ಜಯನಗರದಲ್ಲಿ ತನ್ನ ಎರಡನೇ ಶೋರೂಂ ಆರಂಭಿಸಿದೆ. ಅಕ್ಟೋಬರ್ 17ರಂದು ಸಂಜೆ 5 ಗಂಟೆಗೆ ನೂತನ ಮಳಿಗೆ ಉದ್ಘಾಟನೆಗೊಂಡಿದ್ದು, ಗ್ರಾಹಕರಿಗೆ ಆಭರಣಗಳ ಮಜೂರಿ ಮೇಲೆ ಶೇ.50ರಷ್ಟು ನೇರ ರಿಯಾಯಿತಿ ಘೋಷಿಸಲಾಗಿದೆ.
ಈ ವಿಶೇಷ ಕೊಡುಗೆ ನವೆಂಬರ್ 8, 2026ರವರೆಗೆ ಲಭ್ಯವಿರಲಿದೆ. ಚಿನ್ನ, ಪ್ಲಾಟಿನಂ, ಬೆಳ್ಳಿ, ರತ್ನದ ಹರಳು, ವಜ್ರ ಹಾಗೂ ಅನ್ಕಟ್ ವಜ್ರದ ಆಭರಣಗಳ ಖರೀದಿಗೆ ಈ ರಿಯಾಯಿತಿ ಅನ್ವಯವಾಗಲಿದೆ.
ನೂತನ ಶೋರೂಂನಲ್ಲಿ ಸಾಂಪ್ರದಾಯಿಕ ಆಭರಣಗಳು, ವೈವಾಹಿಕ ಆಭರಣಗಳ ಸಂಗ್ರಹ ಹಾಗೂ ಆಧುನಿಕ ವಿನ್ಯಾಸದ ಆಭರಣಗಳು ಲಭ್ಯವಿವೆ. ವಿಶಾಲವಾದ ಒಳಾಂಗಣ, ಆರಾಮದಾಯಕ ವಾತಾವರಣ ಮತ್ತು ತರಬೇತಿ ಪಡೆದ ಸಿಬ್ಬಂದಿಯ ವೈಯಕ್ತಿಕ ಮಾರ್ಗದರ್ಶನ ಗ್ರಾಹಕರಿಗೆ ಉತ್ತಮ ಖರೀದಿ ಅನುಭವ ನೀಡಲಿದೆ.
ಈ ಕುರಿತು ಮಾತನಾಡಿದ ಜೋಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಜಾಯ್ ಆಲುಕ್ಕಾಸ್, ಬೆಂಗಳೂರಿನಲ್ಲಿ ಸಂಸ್ಥೆಯ ವಿಸ್ತರಣೆಯ ಭಾಗವಾಗಿ ಜಯನಗರದಲ್ಲಿ ಎರಡನೇ ಶೋರೂಂ ಆರಂಭಿಸಲಾಗಿದೆ. ಗ್ರಾಹಕರಿಗೆ ಹೆಚ್ಚಿನ ಆಯ್ಕೆ, ವಿಶ್ವಾಸಾರ್ಹ ಸೇವೆ ಹಾಗೂ ಗುಣಮಟ್ಟದ ಆಭರಣಗಳನ್ನು ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಶೋರೂಂ ವಿಳಾಸ: ನಂ. 18/A, 9ನೇ ಮುಖ್ಯ ರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು–560011.
