ತುಮಕೂರು:ನಗರದ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು, ಹಿರಿಯ ಶಿಕ್ಷಣ ತಜ್ಞರಾದ ಕೆ.ಬಿ. ಜಯಣ್ಣ ಅವರು ಭಾನುವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಪತ್ನಿ ಪೂರ್ಣಿಮಾ, ಮಗಳು ಪ್ರಿಯಾ, ಅಳಿಯ, ವಿದ್ಯಾವಾಹಿನಿ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್ಕುಮಾರ್, ಇಬ್ಬರು ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳು ಸ್ನೇಹ ಬಳಗವನ್ನು ಅಗಲಿದ್ದಾರೆ.
ಕ್ಯಾತ್ಸಂದ್ರದ ಪಟೇಲ್ ಕುಟುಂಬದವರಾದ ಕೆ.ಬಿ.ಜಯಣ್ಣನವರು 46 ವರ್ಷಗಳ ಹಿಂದೆ ನಗರದಲ್ಲಿ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿದ್ದರು. ವಿವಿಧ ಸಮಾಜ ಸೇವಾ ಸಂಸ್ಥೆಗಳಲ್ಲಿ ಸಕ್ರಿಯ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.ಬೆಳಿಗ್ಗೆ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು.ಸಾವಿರಾರು ಜನ ಬಂದು ಅಂತಿಮ ನಮನ ಸಲ್ಲಿಸಿದರು.ನಗರದ ಸಮೀಪದ ಬಸದಿಬೆಟ್ಟದ ತಪ್ಪಲಿನ ಅವರ ಜಮೀನಿನಲ್ಲಿ ಸಂಜೆ ಅಂತ್ಯ ಸಂಸ್ಕಾರ ನೆರವೇರಿತು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಹಿರೇಮಠದ ಡಾ.ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದೇಶ್ವರ ಮಠದಕಾರದ ವೀರಬಸವ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಆಗಮಿಸಿ ಕೆ.ಬಿ.ಜಯಣ್ಣನವರ ಆತ್ಮಕ್ಕೆ ಶಾಂತಿಕೋರಿದರು.
ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆಂಪರಾಜಯ್ಯ,ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಕೆ.ಎನ್.ರಾಜಣ್ಣ, ಎಸ್.ಆರ್.ಶ್ರೀನಿವಾಸ್, ರಾಜೇಂದ್ರರಾಜಣ್ಣ, ಚಿದಾನಂದಗೌಡ, ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್,ಡಾ||ಎಸ್.ರಫೀಕ್ಅಹ್ಮದ್, ಹೆಬ್ಬಾಕರವಿಶಂಕರ್, ಡಾ.ಎನ್.ಎಸ್.ಜಯಕುಮಾರ್, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಎನ್. ಬಸವಯ್ಯ, ಟಿ.ಆರ್.ಆಂಜನಪ್ಪ, ವೈ.ಹೆಚ್.ಹುಚ್ಚಯ್ಯ, ಎಸ್.ಪಿ.ಚಿದಾನಂದ್, ಅರಕೆರೆರವೀಶ್, ಡಾ.ಎಸ್.ನಾಗಣ್ಣ, ಟಿ.ಎನ್.ಮಧುಕರ್, ಟಿ.ಕೆ.ಆನಂದ್, ಹಾಲನೂನು ಲೇಪಾಕ್ಷಿ, ಶ್ರೀನಿವಾಸಪ್ರಸಾದ್, ಟಿ.ಆರ್.ನಾಗರಾಜ್, ಕೆ.ನಯಾಜ್ಅಹ್ಮದ್, ಮುರಳಿಕೃಷ್ಣಪ್ಪ, ಬಸವರಾಜಹಿರೇಮಠ್, ವೀರಶೈವ ಸಮಾಜ ಸೇವಾ ಸಮಿತಿ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಆಗಮಿಸಿ ಪಾರ್ಥಿಶರೀರದ ದರ್ಶನ ಮಾಡಿ ಕೆ.ಬಿ. ಜಯಣ್ಣ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ವರದಿ : ಕೆ ಬಿ ಚಂದ್ರಚೂಡ್
