ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ನಡೆ ಈಗ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳ ವಯೋಮಿತಿ ಗೊಂದಲದ ಬಗ್ಗೆ ಶಿಕ್ಷಣ ಸಚಿವರನ್ನ ಭೇಟಿ ಮಾಡಲು ಪೋಷಕರು ಬಂದಿದ್ದರು. ಪೋಷಕರ ಜೊತೆಗೆ ಮಾಧ್ಯಮವನ್ನು ಕಂಡ ಕೂಡಲೇ ಉರಿ ಉರಿಯಾದ ಸಚಿವ ಮಧು ಬಂಗಾರಪ್ಪ ಮೀಡಿಯಾದವರನ್ನ ಕರೆದುಕೊಂಡು ಬಂದಿದ್ದೀರಾ ಅವರ ಹತ್ತಿರವೇ ಮಾತಾಡಿ ಎಂದು ಸಿಡಿಮಿಡಿಕೊಂಡರು.
“media and do all these rubbish are not allowed in my house” ಎಂದಿದ್ದಾರೆ. ಇದೀಗ ಶಿಕ್ಷಣ ಸಚಿವರದ್ದು ಇದೆಂಥಾ ವರ್ತನೆ? ಯಾಕಿಷ್ಟು ದರ್ಪ ನಿಮಗೆ ಶಿಕ್ಷಣ ಸಚಿವರೇ? ಮಕ್ಕಳ ವಿಚಾರ ನಿಮ್ಮನ್ನ ಕೇಳೋಕೂ ಬರಬಾರದಾ? ನೀವು ಕರೆದಾಗಷ್ಟೇ ಮಾಧ್ಯಮ ಬರಬೇಕಾ? ಎಂಬ ಪ್ರಶ್ನೆ ಎದ್ದಿದೆ. ಮಾಧ್ಯಮದ ಜೊತೆಗೆ ಬಂದ್ರೇ rubbish ಅಂತೆ. ಶಾಸಕ,ಸಚಿವರು ಅಂದ್ರೇ ಜನಪ್ರತಿನಿಧಿಗಳು. ಅದ್ರೇ ಈ ಸಚಿವರಿಗೆ ಪೋಷಕರ ಜೊತೆಗೆ ಮಾಧ್ಯಮ ಬಂದ್ರೇ ರಬ್ಬೀಶ್ ಅಂತೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೇಜವಾಬ್ದಾರಿ ಮಾತು ಈಗ ಪ್ರಶ್ನಾತೀತವಾಗಿದೆ.
ವಯೋಮಿತಿ ಗೊಂದಲ, ಸಚಿವರನ್ನು ಭೇಟಿಯಾಗಲು ಬಂದ ನೂರಾರು ಪೋಷಕರು: 2025-26 ನೇ ಶೈಕ್ಷಣಿಕ ವರ್ಷ ದಾಖಲಾತಿ ಹಿನ್ನೆಲೆ 1 ನೇ ತರಗತಿಗೆ ವಯೋಮಿತಿ ಗೊಂದಲ ವಿಚಾರವಾಗಿ ವಯೋಮಿತಿ ಇದ್ದು ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಲು ನೂರಾರು ಪೋಷಕರು ಅವರ ನಿವಾಸಕ್ಕೆ ಬಂದಿದ್ದರು. ವಯೋಮಿತಿ ಗೊಂದಲ ಬಗೆಹರಿಸುವಂತೆ ಪೋಷಕರು ಮನವಿ ಮಾಡಿಕೊಳ್ಳಲು ಬಂದಿದ್ದರು. 5 ವರ್ಷ 6 ತಿಂಗಳು ಇರೋ ಮಕ್ಕಳಿಗೆ ಅವಕಾಶ ನೀಡುವಂತೆ ಮನವಿ. ಈ ರೀತಿ ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಮಕ್ಕಳು ಇದ್ದಾರೆ ಎಂದು ಸಚಿವರಿಗೆ ಹೇಳಿದ್ದಾರೆ.
