
ನವದೆಹಲಿ : ನಿರೀಕ್ಷೆಯಂತೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಂಟನೇ ಬಜೆಟ್ನಲ್ಲಿ (Union Budget 2025) ಮಧ್ಯಮವರ್ಗದವರ ಬಹುಬೇಡಿಕೆಯನ್ನು ನೆರವೇರಿಸಿದ್ದಾರೆ. ಆದಾಯ ತೆರಿಗೆಯ ಹೊರೆಯನ್ನು ಇಳಿಸಿದ್ದಾರೆ.
ಅದರಂತೆ 12 ಲಕ್ಷ ರೂವರೆಗಿನ ಆದಾಯ ಹೊಂದಿರುವವರು ಯಾವುದೇ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ.
4 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ.
ಹೊಸ ಟ್ಯಾಕ್ಸ್ ಸ್ಲಾಬ್ ದರಗಳು
0-4 ಲಕ್ಷ ರೂ: ತೆರಿಗೆ ಇಲ್ಲ
4-8 ಲಕ್ಷ ರೂ: ಶೇ. 5 ತೆರಿಗೆ
8-12 ಲಕ್ಷ ರೂ: ಶೇ. 10 ತೆರಿಗೆ
12-16 ಲಕ್ಷ ರೂ: ಶೇ. 15 ತೆರಿಗೆ
16-20 ಲಕ್ಷ ರೂ: ಶೇ. 20 ತೆರಿಗೆ
20-24 ಲಕ್ಷ ರೂ: ಶೇ. 25 ತೆರಿಗೆ
24 ಲಕ್ಷ ರೂ ಮೇಲ್ಪಟ್ಟು: ಶೇ. 30 ತೆರಿಗೆ
ಇಲ್ಲಿ ಸೆಕ್ಷನ್ 87ಎ ಅಡಿಯಲ್ಲಿ ರಿಬೇಟ್ ನೀಡಲಾಗುತ್ತದೆ. ಇದನ್ನು ಈ ಬಾರಿ ಮತ್ತಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ 7 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ನೀಡಲಾಗುತ್ತಿತ್ತು. ಈಗ ಈ ಪ್ರಕಾರ 12 ಲಕ್ಷ ರುವರೆಗಿನ ಆದಾಯಕ್ಕೆ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ.
ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ಆದಾಯದಲ್ಲಿ ಟ್ಯಾಕ್ಸ್ ಡಿಡಕ್ಷನ್ ಮಿತಿಯನ್ನು 1 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಅಂದರೆ, ಠೇವಣಿಗಳಿಂದ ವರ್ಷಕ್ಕೆ ಸಿಗುವ 1 ಲಕ್ಷ ರೂವರೆಗಿನ ಬಡ್ಡಿ ಆದಾಯಕ್ಕೆ ಟ್ಯಾಕ್ಸ್ ವಿನಾಯಿತಿ ಸಿಗುತ್ತದೆ.
ಬಾಡಿಗೆಗಳಿಂದ ಬರುವ ಆದಾಯಕ್ಕೆ ವಾರ್ಷಿಕ ಟಿಡಿಎಸ್ ಮಿತಿಯನ್ನು 2.4 ಲಕ್ಷ ರೂನಿಂದ 6 ಲಕ್ಷ ರೂಗೆ ಏರಿಸಲಾಗಿದೆ.