1.ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ; ಇರಾನ್ಗೆ ಟ್ರಂಪ್ ಬೆದರಿಕೆ
ಅಮೆರಿಕದ ಜೊತೆ ‘ಪರಮಾಣು ಒಪ್ಪಂದ’ಕ್ಕೆ ಸಹಿ ಹಾಕದಿದ್ದರೆ ಇರಾನ್ ಮೇಲೆ ‘ಹಿಂದೆಂದೂ ಕಾಣದ ಬಾಂಬ್ ದಾಳಿ’ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕದ ಜೊತೆ ನೇರ ಮಾತುಕತೆಗಳನ್ನು ತಿರಸ್ಕರಿಸಿರುವುದರಿಂದ ಈ ಬೆಳವಣಿಗೆ ಸಂಭವಿಸಿದೆ.

**************************************************************************************
2. ಅಂಜನಾದ್ರಿ ಆಂಜನೇಯನ ದರ್ಶನಕ್ಕೆ ರೋಪ್ ವೇ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್
ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ವೃದ್ಧರು ಮತ್ತು ಅನಾರೋಗ್ಯದಿಂದ ಬಳಲುವ ಭಕ್ತರಿಗೆ ಬೆಟ್ಟ ಹತ್ತುವುದು ಕಷ್ಟಕರವಾಗಿದ್ದರಿಂದ ಈ ನಿರ್ಧಾರ ಮಹತ್ವದ್ದಾಗಿದೆ. ಮೂರು ರೋಪ್ ವೇಗಳನ್ನು ನಿರ್ಮಿಸುವ ಯೋಜನೆಯಿದೆ. ಇದರಿಂದ ಪ್ರತಿ ಗಂಟೆಗೆ 800 ಭಕ್ತರು ಬೆಟ್ಟಕ್ಕೆ ಏರಿ ದರ್ಶನ ಪಡೆಯಬಹುದು. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

****************************************************************************************
3.ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಭೂಕುಸಿತ: 6 ಮಂದಿ ಸಾವು!
ಕುಲ್ಲು: ಹಿಮಾಚಲ ಪ್ರದೇಶದ ಕುಲ್ಲುವಿನ ಗುರುದ್ವಾರ ಮಣಿಕರಣ್ ಸಾಹಿಬ್ ಎದುರಿನ ಪಿಡಬ್ಲ್ಯೂಡಿ ರಸ್ತೆಯ ಬಳಿ ಭಾನುವಾರ ಸಂಜೆ ಸಂಭವಿಸಿದ ಭೂಕುಸಿತದಲ್ಲಿ ಆರು ಜನ ಸಾವನ್ನಪ್ಪಿದ್ದು, ಈ ಪೈಕಿ ಮೂವರು ಮಹಿಳೆಯರು ಇದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ರಸ್ತೆಯ ಅಂಚಿನಲ್ಲಿ ಕುಳಿತಿದ್ದ ಜನರು ದೊಡ್ಡ ಮರವೊಂದು ಉರುಳಿ ಬಿದ್ದ ಪರಿಣಾಮ ನಲುಗಿ ಸಾವನ್ನಪ್ಪಿದರು. ಗಾಯಾಳುಗಳನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಜಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿಯ ಪ್ರಕಾರ, ರಸ್ತೆಬದಿಯ ವ್ಯಾಪಾರಿ, ಕಾರು ಸವಾರ ಮತ್ತು ಸ್ಥಳದಲ್ಲಿದ್ದ ಮೂವರು ಪ್ರವಾಸಿಗರು ಸತ್ತವರಲ್ಲಿ ಸೇರಿದ್ದಾರೆ.

****************************************************************************
4. ಕೊಪ್ಪಳದ ಮಾವು ಕೃಷಿಕರಿಗೆ ಬಂಪರ್: ಕೇಸರ್ ಮಾವಿಗೆ ಅಂತಾರಾಷ್ಟ್ರೀಯ ಮನ್ನಣೆ!
ಕೊಪ್ಪಳ: ಕೊಪ್ಪಳದ ಮಾವು ಕೃಷಿಕರಿಗೆ ಬಂಪರ್ ಬೇಡಿಕೆ ಬಂದಿದ್ದು, ಇಲ್ಲಿನ ಮಾವಿನ ಹಣ್ಣುಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ.
ಕೊಪ್ಪಳ ಜಿಲ್ಲೆಯ ಕಲ್ಲು ತಾವರಗೇರಾ, ಕಾಮನೂರು, ಇಂದರಗಿ, ಜಬ್ಬಲಗೂಡ, ಬೂದಗುಂಪಾ, ವಡಲುಗಲ್ಲು, ವನಬಳ್ಳಾರಿ, ಹಟ್ಟಿ, ಗಿಣಿಗೇರಾ, ಇರಕಲ್ಲಗಡ, ಹನುಮನಬಟ್ಟಿ, ಮಾಟಗಲ್ಲು, ಹಾಲಹಳ್ಳಿ, ಭೀಮನೂರು, ಗುಲ್ಡಹಳ್ಳಿ ಗ್ರಾಮಗಳು ಒಂದೊಂದು ವಿಶಿಷ್ಟ ಲಕ್ಷಣವನ್ನು ಹೊಂದಿವೆ. ಕೊಪ್ಪಳದ ಈ 15 ಗ್ರಾಮಗಳ ಪ್ರತಿ ಮನೆಯಲ್ಲೂ ಮಾವು ಬೆಳೆಯುತ್ತಿದ್ದು, ಸಾವಿರಾರು ಮಾವು ಬೆಳೆಗಾರರನ್ನು ಹೊಂದಿರುವ ಉತ್ತರ ಕರ್ನಾಟಕದ ಮೊದಲ ಜಿಲ್ಲೆಯಾಗಿದೆ.

*****************************************************************************************
5.ಮಹಾರಾಷ್ಟ್ರದ ಬೀಡ್ನ ಮಸೀದಿಯೊಳಗೆ ಸ್ಫೋಟ, ಇಬ್ಬರ ಬಂಧನ
ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಸೀದಿಯೊಂದರಲ್ಲಿ ವ್ಯಕ್ತಿಯೊಬ್ಬ ಇಟ್ಟಿದ್ದ ಜೆಲಾಟಿನ್ ಕಡ್ಡಿಗಳು ಭಾನುವಾರ ಧಾರ್ಮಿಕ ಕಟ್ಟಡದಲ್ಲಿ ಸ್ಫೋಟಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಯೋರೈ ತಹಸಿಲ್ನ ಅರ್ಧ ಮಸ್ಲಾ ಗ್ರಾಮದಲ್ಲಿ ಬೆಳಗಿನ ಜಾವ 2.30 ರ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅವರು ಹೇಳಿದರು. ಸ್ಫೋಟದಿಂದ ರಚನೆಯ ಒಳಭಾಗಕ್ಕೆ ಹಾನಿಯಾಗಿದೆ.
ಬೀಡ್ನ ಜಿಯೋರೈ ತಾಲೂಕಿನ ನಿವಾಸಿಗಳಾದ ವಿಜಯ್ ರಾಮ ಗವ್ಹಾನೆ (22) ಮತ್ತು ಶ್ರೀರಾಮ್ ಅಶೋಕ್ ಸಗ್ಡೆ (24) ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


